ಕರ್ಣ ಹಾಗೂ ‘ಅಣ್ಣಯ್ಯ’ ಶಿವು ಪಾತ್ರಕ್ಕೆ ಕನೆಕ್ಷನ್; ತೆರೆದುಕೊಂಡಿತು ಹೊಸ ಕಥೆ
Karna Serial: ಕರ್ಣ ಮತ್ತು ಅಣ್ಣಯ್ಯ ಧಾರಾವಾಹಿಗಳ ಪಾತ್ರಗಳು ಅಮೃತಧಾರೆ ಧಾರಾವಾಹಿಯಲ್ಲಿ ಒಂದಾಗಿದ್ದವು. ಇದು ವೀಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಆದರೆ, ಧಾರಾವಾಹಿಯ ನಿಜವಾದ ಕನೆಕ್ಷನ್ ಈಗ ಹೊರಬಿದ್ದಿದೆ. ಅಣ್ಣಯ್ಯ ಮತ್ತು ಕರ್ಣ ಧಾರಾವಾಹಿಯ ನಡುವೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಕರ್ಣ’ (Karna Serial) ಧಾರಾವಾಹಿ ಹಾಗೂ ‘ಅಣ್ಣಯ್ಯ’ ಧಾರಾವಾಹಿ ಪಾತ್ರಧಾರಿಗಳು ‘ಅಮೃತಧಾರೆ’ ಧಾರಾವಾಹಿಯಲ್ಲಿ ಒಂದಾಗಿದ್ದು ಗೊತ್ತೇ ಇದೆ. ಇದು ಒಂದು ಸಾಮಾನ್ಯ ಸಂಗಮ ಎಂದೇ ಎಲ್ಲರೂ ಭಾವಿಸಿದ್ದೂ ಇದೆ. ಆದರೆ, ‘ಕರ್ಣ’ ಧಾರಾವಾಹಿಯನ್ನು ಈಗ ವೀಕ್ಷಿಸುತ್ತಿರುವವರಿಗೆ ಇದು ಸಾಮಾನ್ಯ ಕನೆಕ್ಷನ್ ಅಲ್ಲವೇ ಅಲ್ಲ ಎಂಬ ವಿಚಾರ ಗೊತ್ತಾಗಲು ಹೆಚ್ಚು ಸಮಯ ಬೇಕಾಗಿಲ್ಲ ಎಂದೇ ಹೇಳಬಹುದು. ಏಕೆಂದರೆ ‘ಕರ್ಣ’ ಹಾಗೂ ‘ಅಣ್ಣಯ್ಯ’ ಧಾರಾವಾಹಿಗೆ ಕನೆಕ್ಷನ್ ನೀಡುವ ಕೆಲಸವನ್ನು ತಂಡದವರು ಮಾಡಿದ್ದಾರೆ.
‘ಕರ್ಣ’ ಅನಾಥ. ಆದರೆ, ಅವನನ್ನು ತಂದು, ಸಾಕುವ ಕೆಲಸ ಆಗಿದೆ. ಆತನ ಹಿನ್ನೆಲೆ ಏನು ಎಂಬುದು ಅಲ್ಲಿ ಯಾರಿಗೂ ತಿಳಿದಿಲ್ಲ. ಆದರೆ, ಕುಟುಂಬದವರೆಲ್ಲರೂ ಸೇರಿ ಈಗ ಮಾರಿಗುಡಿಗೆ ಹೊರಟಿದ್ದಾರೆ. ಮಾರಿ ಗುಡಿಗೆ ಹೋದರೆ ಆತನ ಹಿನ್ನೆಲೆ ಗೊತ್ತಾಗಿ ಬಿಡುತ್ತದೆ ಎನ್ನುವ ಚಿಂತೆ ಆತನ ಅತ್ತೆಗೆ ಕಾಡಿದೆ. ಇದು ವೀಕ್ಷಕರಲ್ಲಿ ಅನುಮಾನ ಹುಟ್ಟುಹಾಕಿದೆ.
‘ಅಣ್ಣಯ್ಯ’ ಧಾರಾವಾಹಿ ಕಥೆಯಲ್ಲಿ ನಾಯಕ ಶಿವುನ ಊರು ಮಾರಿಗುಡಿ. ಆತ ಮಾರಿಗುಡಿ ಶಿವು ಎಂದೇ ಜನಪ್ರಿಯತೆ ಪಡೆದುಕೊಂಡವನು. ಈಗ ‘ಅಣ್ಣಯ್ಯ’ ಧಾರಾವಾಹಿಯಲ್ಲೂ ಮಾರಿಗುಡಿ ಊರನ್ನು ತೋರಿಸಲಾಗುತ್ತಿದೆ. ಅಲ್ಲದೆ ಮಾರಿಗುಡಿಗೆ ಹೋದರೆ ಕರ್ಣನ ಹಿನ್ನೆಲೆ ತಿಳಿದು ಹೋಗುತ್ತದೆ ಎಂಬ ವಿಚಾರ ಬಂದಿರೋದರಿಂದ ಈ ಬಗ್ಗೆ ಅನುಮಾನ ಮೂಡಿದೆ.
ಇಷ್ಟೇ ಆಗಿದ್ದರೆ ಕನೆಕ್ಷನ್ ಅನುಮಾನ ಹೊರಕ್ಕೆ ಬರುತ್ತಿರಲಿಲ್ಲವೇನೋ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಶಿವುನ ಕೂಡ ತೋರಿಸಲಾಗಿದೆ. ಹೀಗಾಗಿ, ಕರ್ಣನಿಗೂ ಶಿವುಗೂ ಇರುವ ಕನೆಕ್ಷನ್ ಏನು ಎಂಬ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ಎರಡೂ ಧಾರಾವಾಹಿಗಳ ಕಥೆಯನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ‘ಕರ್ಣ’ ಧಾರಾವಾಹಿಗೆ ಶಾಕ್ ಕೊಟ್ಟ ಟಿಆರ್ಪಿ ರೇಟಿಂಗ್; ಕುಸಿಯಿತು ಸ್ಥಾನ
ಕರ್ಣನಿಗೆ ತನ್ನ ಹಿನ್ನೆಲೆ ಬಗ್ಗೆ ಅವನಿಗೆ ಸರಿಯಾಗಿ ತಿಳಿದಿಲ್ಲ. ಇದೇ ವಿಚಾರ ಇಟ್ಟುಕೊಂಡು ಆತನ ತಂದೆ ಹೀಯಾಳಿಸುತ್ತಾ ಬರುತ್ತಿದ್ದಾನೆ. ಇದು ಆತನಿಗೆ ಬೇಸರ ಮೂಡಿಸಿತ್ತು ಮತ್ತು ಸಾಕಷ್ಟು ನೋವನ್ನು ಉಂಟು ಮಾಡಿತ್ತು. ಆದರೆ, ಈಗ ಆತನ ತಂದೆ ಬದಲಾದಂತೆ ನಟಿಸುತ್ತಿದ್ದಾನೆ. ಈ ಮುಖವಾಡ ಯಾವಾಗ ಕಳಚಿ ಬೀಳುತ್ತದೆ ಎಂಬ ಕುತೂಹಲ ಸಾಕಷ್ಟು ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:58 am, Fri, 5 September 25







