AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಜಯಣ್ಣನ ಹೆಸರು ಉಳಿಸಿದೆ’; ‘ಹಳ್ಳಿ ಪವರ್​​’ನಲ್ಲಿ ಮಿಂಚುತ್ತಿರುವ ‘ಭೀಮ’ ಕಲಾವಿದೆ ಆ್ಯಶ್

ಭೀಮ ಸಿನಿಮಾದ ನಟಿ ಆಶ್ ಮೆಲೊ ಜೀ ಪವರ್‌ನ ಹಳ್ಳಿ ಪವರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ತೇಜಸ್ವಿನಿಯೊಂದಿಗಿನ ಅವರ ಘರ್ಷಣೆ ಮತ್ತು ಕುಸ್ತಿ ಪಂದ್ಯದಲ್ಲಿನ ಗೆಲುವು ಶೋನಲ್ಲಿ ಗಮನ ಸೆಳೆದಿದೆ. ವಿಜಯ್ ಅವರ ಹೆಸರನ್ನು ಉಲ್ಲೇಖಿಸಿ ಅವರು ತಮ್ಮ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಶೋನಲ್ಲಿ ಮುಂದಿನ ವಾರ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.

‘ವಿಜಯಣ್ಣನ ಹೆಸರು ಉಳಿಸಿದೆ’; ‘ಹಳ್ಳಿ ಪವರ್​​’ನಲ್ಲಿ ಮಿಂಚುತ್ತಿರುವ ‘ಭೀಮ’ ಕಲಾವಿದೆ ಆ್ಯಶ್
ಹಳ್ಳಿ ಪವರ್
ರಾಜೇಶ್ ದುಗ್ಗುಮನೆ
|

Updated on: Sep 05, 2025 | 8:06 AM

Share

ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ 2024ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಸಿನಿಮಾ ಬೆಂಗಳೂರಿನಲ್ಲಿ ಇರುವ ಡ್ರಗ್ಸ್ ಹಾವಳಿಗಳ ಬಗ್ಗೆ ಇತ್ತು. ಈ ಧಾರಾವಾಹಿಯಲ್ಲಿ ಅನೇಕ ಹೊಸ ಪ್ರತಿಭೆಗಳು ನಟಿಸಿದ್ದರು. ಅದರಲ್ಲಿ ಜಂಗ್ಲಿ ಆ್ಯಶ್ ಮೆಲೋ ಸ್ಕೈಲರ್ ಕೂಡ ಒಬ್ಬರು. ಅವರು ಈಗ ಅಕುಲ್ ಬಾಲಾಜಿ ನಡೆಸಿಕೊಡುತ್ತಿರುವ, ಜೀ ಪವರ್​​ನಲ್ಲಿ ಪ್ರಸಾರ ಕಾಣುತ್ತಿರುವ ‘ಹಳ್ಳಿ ಪವರ್’ನ (Halli Power) ಭಾಗ ಆಗಿದ್ದಾರೆ.

ಆ್ಯಶ್ ಮೆಲೋ ಅವರು ಬೀಟ್ ಬಾಕ್ಸಿಂಗ್ ಮಾಡುತ್ತಾರೆ. ಇನ್ನು, ಡ್ಯಾನ್ಸ್ ಮಾಡುತ್ತಾರೆ, ಹಾಡು ಹೇಳುತ್ತಾರೆ. ‘ಭೀಮ’ ಸಿನಿಮಾದಲ್ಲಿ ಅವರು ಮಾಡಿದ ಪಾತ್ರ ಕೆಲವರಿಗೆ ಇಷ್ಟ ಆಗಿತ್ತು. ಇನ್​​ಸ್ಟಾಗ್ರಾಮ್​ನಲ್ಲಿ ಅವರ ಅಭಿಮಾನಿ ಬಳಗ 1 ಮಿಲಿಯನ್ ಇದೆ. ಅವರು ‘ಧ್ವಂಸ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ‘ಹಳ್ಳಿ ಪವರ್’ ಶೋನಲ್ಲಿ ಆರಂಭದಲ್ಲೇ ಕಿರಿಕ್ ಮಾಡಿಕೊಂಡು ಸುದ್ದಿ ಆಗಿದ್ದಾರೆ.

‘ಹಳ್ಳಿ ಪವರ್’ ಶೋನಲ್ಲಿ 12 ಸ್ಪರ್ಧಿಗಳು ಇದ್ದಾರೆ. ಈ ಪೈಕಿ ಇಬ್ಬರಂತೆ ಜೋಡಿ ಮಾಡಲಾಗಿದೆ. ಆ್ಯಶ್​ಗೆ ತೇಜಸ್ವಿನಿ ಜೊತೆಯಾಗಿದ್ದಾರೆ. ಆದರೆ, ಇವರ ಮಧ್ಯೆಯೇ ಕೆಮಿಸ್ಟ್ರಿ ಸರಿ ಇಲ್ಲ. ಇವರ ಮಧ್ಯೆ ಮಾತಿನ ಚಕಮಕಿ ಆಗುತ್ತಿದೆ. ಇವರ ಮಧ್ಯೆ ಹೊಂದಾಣಿಕೆ ಬರುತ್ತಿಲ್ಲ.

ಇದನ್ನೂ ಓದಿ
Image
‘ಕರ್ಣ’ ಧಾರಾವಾಹಿಗೆ ಶಾಕ್ ಕೊಟ್ಟ ಟಿಆರ್​ಪಿ ರೇಟಿಂಗ್; ಕುಸಿಯಿತು ಸ್ಥಾನ
Image
‘ಸು ಫ್ರಮ್ ಸೋ’ ಒಟಿಟಿ ರಿಲೀಸ್ ದಿನಾಂಕ ಫೇಕ್; ಹಾಟ್​ಸ್ಟಾರ್​ನವರು ಹೇಳೋದೇನು
Image
ಶಂಕರ್​ ನಾಗ್​​ಗೆ ಅಣ್ಣ ಮಾತ್ರ ಅಲ್ಲ, ಸಾಕು ತಂದೆಯೂ ಆಗಿದ್ದ ಅನಂತ್ ನಾಗ್
Image
ರಾಜ್ ಮುಟ್ಟಿದ್ದೆಲ್ಲ ಚಿನ್ನ; ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಜೋರು

ಸೆಪ್ಟೆಂಬರ್ 4ರ ಎಪಿಸೋಡ್​ನಲ್ಲಿ ಕುಸ್ತಿ ಇಡಲಾಗಿತ್ತು. ಇದಕ್ಕೆ ಬೆಳಗಾವಿಯ ಸಂಗೊಳ್ಳಿಯಲ್ಲಿ ವೇದಿಕೆ ಕೂಡ ಸಿದ್ಧವಾಯಿತು. ಎಲ್ಲರೂ ಎದುರಾಳಿ ಜೊತೆ ಸೆಣೆಸಾಡಬೇಕಿತ್ತು. ಆದರೆ, ಆ್ಯಶ್ ಮತ್ತು ತೇಜಸ್ವಿನಿ ತಾವೇ ಫೈಟ್ ಮಾಡೋದಾಗಿ ಹೇಳಿದರು. ಈ ಫೈಟ್​ನಲ್ಲಿ ಆ್ಯಶ್​ ಅವರು ಗೆದ್ದಿದ್ದಾರೆ. ಆ ಬಳಿಕ ಅವರು ಮಾತನಾಡಿದ್ದಾರೆ. ‘ವಿಜಯಣ್ಣ ನಿಮ್ಮ ಹೆಸರು ಉಳಿಸಿದೆ. ಇಲ್ಲಿಯವರ ಮಾತು ಕೇಳಿ ಸಾಕಾಗಿತ್ತು. ಗೆಲ್ಲಲೇಬೇಕು ಎಂದು ಹಠ ಹೊತ್ತಿದ್ದೆ. ಅದು ಸಾಧ್ಯವಾಗಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಹಳ್ಳಿ ಪವರ್’: ಒಂದೇ ದಿನಕ್ಕೆ ಸುಸ್ತಾದ ಸಿಟಿ ಸುಂದರಿಯರು; ಕೆಲವರು ಅರ್ಧಕ್ಕೆ ವಾಪಸ್?

‘ಹಳ್ಳಿ ಪವರ್​’ನಲ್ಲಿ 12 ಸ್ಪರ್ಧಿಗಳು ಇದ್ದಾರೆ. ಮುಂದಿನ ವಾರದಿಂದ ಎಲಿಮಿನೇಷನ್ ಪ್ರಕ್ರಿಯೆ ನಡೆಯೋ ಸಾಧ್ಯತೆ ಇದೆ. ಎಲ್ಲಾ ಸಿಟಿ ಮಂದಿಗೆ ಹಳ್ಳಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯಾವಕಾಶ ಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.