‘ಹಳ್ಳಿ ಪವರ್’: ಒಂದೇ ದಿನಕ್ಕೆ ಸುಸ್ತಾದ ಸಿಟಿ ಸುಂದರಿಯರು; ಕೆಲವರು ಅರ್ಧಕ್ಕೆ ವಾಪಸ್?
ಜೀ ಪವರ್ ವಾಹಿನಿಯ ಹೊಸ ರಿಯಾಲಿಟಿ ಶೋ ‘ಹಳ್ಳಿ ಪವರ್’ನಲ್ಲಿ 12 ಸ್ಪರ್ಧಿಗಳು ನಗರದಿಂದ ಹಳ್ಳಿ ಜೀವನಕ್ಕೆ ಹೋಗಿದ್ದಾರೆ. ಬೆಳಗಾವಿಯ ಸಂಗೊಳ್ಳಿಯಲ್ಲಿ ನಡೆಯುತ್ತಿರುವ ಈ ಶೋನಲ್ಲಿ, ಅವರು ಹಳ್ಳಿ ಜೀವನದ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಪ್ರತಿ ವಾರ ಎಲಿಮಿನೇಷನ್ ಇದೆ ಮತ್ತು ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಇದೆ. .

ಜೀ ಪವರ್ (Zee Power) ಹೆಸರಿನ ಹೊಸ ವಾಹಿನಿ ಇತ್ತೀಚೆಗೆ ಆರಂಭ ಆಗಿದೆ. ಈ ವಾಹಿನಿಯಲ್ಲಿ ‘ಹಳ್ಳಿ ಪವರ್’ ಹೆಸರಿನ ಹೊಸ ರಿಯಾಲಿಟಿ ಶೋ ಕೂಡ ಆರಂಭ ಆಗಿದೆ. ಈ ಶೋಗೆ ಅಕುಲ್ ಬಾಲಾಜಿ ನೇತೃತ್ವ ಇದೆ. ಬೆಳಗಾವಿಯ ಸಂಗೊಳ್ಳಿಗೆ ತಂಡ ತೆರಳಿದೆ. ಅಲ್ಲಿ ಕೇವಲ ಒಂದೇ ದಿನಕ್ಕೆ ಎಲ್ಲಾ ಸ್ಪರ್ಧಿಗಳು ಸುಸ್ತಾಗಿದ್ದು ಸ್ಪಷ್ಟವಾಗಿ ಕಂಡು ಬಂದಿದೆ. ಈ ಪ್ರೋಮೋನ ಜೀ ಪವರ್ ವಾಹಿನಿ ಹಂಚಿಕೊಂಡಿದೆ.
ಹಳ್ಳಿ ಪವರ್ನಲ್ಲಿ ಒಟ್ಟು 16 ಸ್ಪರ್ಧಿಗಳು ಆಯ್ಕೆ ಆಗಿದ್ದರು. ಈ ಪೈಕಿ ಶೋಗೆ ಬರೋಕೆ ಬೇಕಿದ್ದಿದ್ದು ಕೇವಲ 12 ಮಂದಿ. ಹೀಗಾಗಿ, ಆ ಹಳ್ಳಿಯವರೇ ವೋಟ್ ಮಾಡಿ ಇವರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯಿತು. 50 ಪರ್ಸೆಂಟ್ಗಿಂತ ಕಡಿಮೆ ವೋಟ್ ಬಿದ್ದರೆ ಎಲಿಮಿನೇಟ್, 80ಕ್ಕಿಂತ ಮೇಲೆ ವೋಟ್ ಬಿದ್ದರೆ ಅವರು ಸೆಲೆಕ್ಟ್ ಆದಂತೆ. ಇವುಗಳ ಮಧ್ಯದಲ್ಲಿ ಇದ್ದರೆ ಹೋಲ್ಡ್ನಲ್ಲಿ ಇದ್ದಾರೆ ಎಂದರ್ಥ.
ಒಟ್ಟು 12 ಸ್ಪರ್ಧಿಗಳನ್ನು ಆಯ್ಕೆ ಮಾಡಿ ಅವರನ್ನು ಫೈವ್ಸ್ಟಾರ್ ಹೋಟೆಲ್ನಲ್ಲಿ ಇರಿಸಲಾಯಿತು. ಅಲ್ಲಿಂದ ಐಷಾರಾಮಿ ಕಾರಲ್ಲಿ ವಿಮಾನ ನಿಲ್ದಾಣಕ್ಕೆ ಎಲ್ಲರನ್ನೂ ಕೊಂಡೊಯ್ಯಲಾಯಿತು. ಅಲ್ಲಿಂದ ಎಲ್ಲರೂ ಹಾರಿದ್ದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ. ಹುಬ್ಬಳ್ಳಿಯಿಂದ ತೂಫಾನ್ ವಾಹನದಲ್ಲಿ ಬೆಳಗಾವಿ ಸೇರಿ, ಬೆಳಗಾವಿಯಿಂದ ಸರ್ಕಾರಿ ಬಸ್ನಲ್ಲಿ ಹೋಗಿ ಆ ಬಳಿಕ ಟ್ರ್ಯಾಕ್ಟರ್-ಎತ್ತಿನಗಾಡಿಯಲ್ಲಿ, ಸಂಗೊಳ್ಳಿ ಸೇರಿದರು.
ಹಳ್ಳಿ ಪವರ್ ಪ್ರೋಮೋ
View this post on Instagram
ಸಿಟಿಯಲ್ಲೇ ಹುಟ್ಟಿ ಬೆಳೆದ ಎಲ್ಲರೂ ಹಳ್ಳಿ ಎಂಬುದನ್ನು ಕನಸಿನಲ್ಲೂ ಕಲ್ಪಿಸಿಕೊಂಡಿರಲಿಲ್ಲ. ಅವರಿಗೆ ಈಗ ಹಳ್ಳಿ ಜೀವನ ಕಷ್ಟ ಎನಿಸಿದೆ. ಮೊದಲ ದಿನವೇ ಅನೇಕರು ಹಸುವಿನ ಹಾಲು ಕರೆದಿದ್ದಾರೆ. ಕೆಲವರು ಹಸುವಿನ ಬಳಿ ಒದೆಸಿಕೊಂಡಿದ್ದಾರೆ. ಸಗಣಿ ಕ್ಲೀನ್ ಮಾಡಿ, ಅದರ ವಾಸನೆ ತಡೆಯಲಾರದೆ ಒದ್ದಾಡಿದ್ದಾರೆ. ಈ ಎಲ್ಲಾ ಕಾರಣದಿಂದ ಅನೇಕರು ಸುಸ್ತಾಗಿದ್ದು, ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ‘ಹಳ್ಳಿ ಪವರ್’; ನಗರದಿಂದ ಹಳ್ಳಿ ಸೇರಿದ ಸುಂದರಿಯರ ಪಾಡು ನೋಡಿ
ಸಿಟಿ ಜೀವನ ಇಷ್ಟೇ ಕಷ್ಟ ಆದರೆ, ಕೆಲವರು ಅರ್ಧಕ್ಕೆ ಶೋನಿಂದ ಹೊರ ನಡೆದರೂ ಅಚ್ಚರಿ ಏನಿಲ್ಲ. ಪ್ರತಿ ವಾರ ಇಲ್ಲಿಯೂ ಎಲಿಮಿನೇಷನ್ ಇರುತ್ತದೆ. ಅಲ್ಲದೆ, ಮುಂದಿನ ದಿನಗಳಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗಲಿದೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:38 pm, Tue, 2 September 25








