ಲಾಕ್ ಡೌನ್ ವೇಳೆ ಸರ್ಕಾರಿ ಕಾರನ್ನು ದುರ್ಬಳಕೆ ಮಾಡಿಕೊಂಡ ನಿರ್ದೇಶಕ ಪನ್ನಗಭರಣ?

ಪನ್ನಗಭರಣ ತಂದೆ ಟಿ.ಎಸ್. ನಾಗಾಭರಣ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು. ಹೀಗಾಗಿ, ಅವರಿಗೆ ಸರ್ಕಾರಿ ಕಾರನ್ನು ನೀಡಿದೆ. ಆದರೆ, ಅಧ್ಯಕ್ಷರಿಗೆ ಕೊಟ್ಟಿರುವ ಕಾರನ್ನು ಪನ್ನಗಭರಣ ಸ್ವಂತಕ್ಕೆ ಬಳಸಿಕೊಂಡಿದ್ದಾರೆ.

ಲಾಕ್ ಡೌನ್ ವೇಳೆ ಸರ್ಕಾರಿ ಕಾರನ್ನು ದುರ್ಬಳಕೆ ಮಾಡಿಕೊಂಡ ನಿರ್ದೇಶಕ ಪನ್ನಗಭರಣ?
ನಾಗಾಭರಣ-ಪನ್ನಗಭರಣ

ಇಂದು (ಜೂನ್ 7) ಚಿರಂಜೀವಿ ಸರ್ಜಾ ಅವರ ಪುಣ್ಯ ತಿಥಿ. ಅವರು ಹೃದಯಾಘಾತದಿಂದ ಮೃತಪಟ್ಟು ಒಂದು ವರ್ಷ ಕಳೆದಿದೆ. ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಬೃಂದಾವನ ಫಾರ್ಮ್​ಹೌಸ್​ನಲ್ಲಿ ಚಿರು ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಅದೇ ಸ್ಥಳಕ್ಕೆ ತೆರಳಿ ಕುಟುಂಬಸ್ಥರು ಹಾಗೂ ಆಪ್ತರು ಪೂಜೆ ಸಲ್ಲಿಸಿದ್ದಾರೆ. ಅಲ್ಲಿಗೆ ತೆರಳಲು ನಿರ್ದೇಶಕ ಪನ್ನಗಭರಣ ಅವರು ಸರ್ಕಾರಿ ಕಾರನ್ನು ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

ಪನ್ನಗಭರಣ ಅವರು ಚಿರುಗೆ ತುಂಬಾನೇ ಆಪ್ತರಾಗಿದ್ದರು. ಸಮಯ ಸಿಕ್ಕಾಗೆಲ್ಲ ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಿದ್ದರು. ಚಿರು ಮೃತಪಟ್ಟ ನಂತರ ಪನ್ನಗಭರಣ ಅವರು ತುಂಬಾನೇ ದುಃಖಪಟ್ಟಿದ್ದರು. ಆಪ್ತ ಸ್ನೇಹಿತನನ್ನು ಕಳೆದುಕೊಂಡಿದ್ದು ಅವರಿಗೆ ತೀವ್ರ ನೋವಾಗಿತ್ತು. ಇಂದು ಚಿರು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಬೃಂದಾವನ ಫಾರ್ಮ್​ಹೌಸ್​ಗೆ ಪನ್ನಗಾಭರಣ ತೆರಳಿದ್ದರು.  ಇದಕ್ಕೆ ಅವರು ಬಳಕೆ ಮಾಡಿಕೊಂಡಿದ್ದು ಸರ್ಕಾರಿ ಕಾರನ್ನು.

ಪನ್ನಗಭರಣ ತಂದೆ ಟಿ.ಎಸ್. ನಾಗಾಭರಣ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು. ಹೀಗಾಗಿ, ಅವರಿಗೆ ಸರ್ಕಾರಿ ಕಾರನ್ನು ನೀಡಿದೆ. ಆದರೆ, ಅಧ್ಯಕ್ಷರಿಗೆ ಕೊಟ್ಟಿರುವ ಕಾರನ್ನು ಪನ್ನಗಭರಣ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಬೆಂಗಳೂರಿನ ನಗರ ಭಾಗದಿಂದ 25 ಕಿ.ಮೀ ದೂರದಲ್ಲಿರುವ ಬೃಂದಾವನ ಫಾರ್ಮ್​ಹೌಸ್​ಗೆ ಸರ್ಕಾರಿ ಕಾರಿನಲ್ಲೇ ಬಂದಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಗೂಗಲ್​ನಲ್ಲಿ ಕನ್ನಡಕ್ಕೆ ಅವಮಾನವಾಗಿತ್ತು. ಅನೇಕ ಸೆಲೆಬ್ರಿಟಿಗಳು ಈ ಬೆಳವಣಿಗೆ ಬಗ್ಗೆ ಸಿಡಿದೆದ್ದಿದ್ದರು. ಇದಕ್ಕೆ ಧ್ವನಿಗೂಡಿಸಿದ್ದ ನಿರ್ದೇಶಕ ಪನ್ನಗಭರಣ, ಕ್ವೀನ್ಸ್​ ಆಫ್​ ಆಲ್​ ದಿ ಲ್ಯಾಂಗ್ವೇಜಸ್ ಅನ್ನೋದನ್ನು ಸರ್ಚ್​ ಮಾಡಿ. #QueenOfLanguagesKannada ಬಳಕೆ ಮಾಡಿ. ಈ ಮೂಲಕ ಕನ್ನಡಿಗರ ಶಕ್ತಿಯನ್ನು ತೋರಿಸೋಣ ಎಂದಿದ್ದರು.

ಇದನ್ನೂ ಓದಿ: Chiranjeevi Sarja: ಮೇಘನಾ ರಾಜ್​ ಜೊತೆ ಚಿರಂಜೀವಿ ಸರ್ಜಾ ಸಮಾಧಿಗೆ ಪೂಜೆ ಸಲ್ಲಿಸಿದ ಜ್ಯೂ. ಚಿರು