725 ಕೋಟಿ ರೂಪಾಯಿ ಬಾಚಿದ ‘ಪಠಾಣ್​’; 10 ದಿನಕ್ಕೆ ‘ಕೆಜಿಎಫ್ 2’ ಕಲೆಕ್ಷನ್​ ಎಷ್ಟಿತ್ತು?

|

Updated on: Feb 04, 2023 | 12:51 PM

ಜನವರಿ 25ರಂದು ‘ಪಠಾಣ್​’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ತೆರೆಗೆ ಬಂದು 10 ದಿನಗಳಲ್ಲಿ ಭಾರತದ ಬಾಕ್ಸ್ ಆಫೀಸ್​ನಲ್ಲಿ 375 ಕೋಟಿ ರೂಪಾಯಿ ಬಾಚಿಕೊಂಡಿದೆ

725 ಕೋಟಿ ರೂಪಾಯಿ ಬಾಚಿದ ‘ಪಠಾಣ್​’; 10 ದಿನಕ್ಕೆ ‘ಕೆಜಿಎಫ್ 2’ ಕಲೆಕ್ಷನ್​ ಎಷ್ಟಿತ್ತು?
ಪಠಾಣ್​-ಕೆಜಿಎಫ್ 2 ಚಿತ್ರದ ಪೋಸ್ಟರ್
Follow us on

‘ಪಠಾಣ್​’ ಸಿನಿಮಾ (Pathaan Movie) ಅಬ್ಬರದ ಕಲೆಕ್ಷನ್ ಮಾಡುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ 700+ ಕೋಟಿ ರೂಪಾಯಿ ಗಳಿಕೆ ಮಾಡಿ ಈ ಚಿತ್ರ ಬೀಗುತ್ತಿದೆ. ‘ಪಠಾಣ್​’ ಸಿನಿಮಾದಿಂದ ಶಾರುಖ್ ಖಾನ್​ಗೆ ದೊಡ್ಡ ಗೆಲುವು ಸಿಕ್ಕಿದೆ. ಈ ಬಗ್ಗೆ ಇಡೀ ಚಿತ್ರತಂಡ ಖುಷಿಪಟ್ಟಿದೆ. ‘ಕೆಜಿಎಫ್ 2’ ಚಿತ್ರದ ಕೆಲವು ದಾಖಲೆಯನ್ನು  ‘ಪಠಾಣ್’ ಸಿನಿಮಾ ಮುರಿದಿದೆ. ಈಗ ‘ಪಠಾಣ್‘​ 10 ದಿನಕ್ಕೆ ವಿಶ್ವಾದ್ಯಂತ 725 ಕೋಟಿ ರೂಪಾಯಿ ಬಾಚಿಕೊಂಡಿದೆ. ಆದರೆ, ‘ಕೆಜಿಎಫ್ 2’ ಚಿತ್ರದ ಕೆಲವು ದಾಖಲೆಯನ್ನು ಶಾರುಖ್​ ಬಳಿ ಮುರಿಯಲು ಸಾಧ್ಯವಾಗಿಲ್ಲ ಎಂದು ವರದಿ ಹೇಳಿದೆ.

ಜನವರಿ 25ರಂದು ‘ಪಠಾಣ್​’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ತೆರೆಗೆ ಬಂದು 10 ದಿನಗಳಲ್ಲಿ ಭಾರತದ ಬಾಕ್ಸ್ ಆಫೀಸ್​ನಲ್ಲಿ 375 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೊದಲ ದಿನ ಈ ಚಿತ್ರ ಹಿಂದಿಯಲ್ಲಿ ಗಳಿಸಿದ್ದು ಬರೋಬ್ಬರಿ 55 ಕೋಟಿ ರೂಪಾಯಿ. 2ನೇ ದಿನ 68 ಕೋಟಿ ರೂಪಾಯಿ ಗಳಿಸಿ ಸಿನಿಮಾ ಬೀಗಿತು. ಶುಕ್ರವಾರ (ಫೆಬ್ರವರಿ 4) ಸಿನಿಮಾ 13 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಮೂಲಕ ಭಾರತದ ಕಲೆಕ್ಷನ್ 375 ಕೋಟಿ ರೂಪಾಯಿ ಹಾಗೂ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ 725 ಕೋಟಿ ರೂಪಾಯಿ ಆಗಿದೆ.

10 ದಿನಕ್ಕೆ ‘ಕೆಜಿಎಫ್ 2’ ಗಳಿಕೆ ಮಾಡಿದ್ದು ಎಷ್ಟು?

10 ದಿನದ ಬಾಕ್ಸ್ ಆಫೀಸ್​ ಕಲೆಕ್ಷನ್​ ಲೆಕ್ಕಾಚಾರದಲ್ಲಿ ‘ಪಠಾಣ್​’ ಚಿತ್ರಕ್ಕಿಂತ ‘ಕೆಜಿಎಫ್ 2’ ಮುಂದಿದೆ ಎಂದು sacnilk ವರದಿ ಹೇಳುತ್ತದೆ. ‘ಕೆಜಿಎಫ್ 2’ ಸಿನಿಮಾ 10 ದಿನಕ್ಕೆ ಬಾಚಿಕೊಂಡಿದ್ದು 810 ಕೋಟಿ ರೂಪಾಯಿ. 10 ದಿನದಲ್ಲಿ ಯಶ್ ಸಿನಿಮಾ 134.10 ಕೋಟಿ ರೂಪಾಯಿ ವಿದೇಶದಿಂದ ಹಾಗೂ 675 ಕೋಟಿ ರೂಪಾಯಿ ಭಾರತದ ಬಾಕ್ಸ್ ಆಫೀಸ್​ನಿಂದ ಬಾಚಿಕೊಂಡಿತ್ತು.

ಇದನ್ನೂ ಓದಿ
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

‘ಕೆಜಿಎಫ್ 2’ ಕನ್ನಡದಲ್ಲಿ ಸಿದ್ಧಗೊಂಡ ಸಿನಿಮಾ. ಕನ್ನಡದಲ್ಲಿ ಉತ್ತಮವಾಗಿ ಗಳಿಕೆ ಮಾಡುವುದರ ಜತೆಗೆ ಪರಭಾಷೆಯಲ್ಲೂ ಚಿತ್ರ ಅಬ್ಬರಿಸಿದೆ. ಹಿಂದಿಯಲ್ಲೂ ಚಿತ್ರ ಒಳ್ಳೆಯ ಕಮಾಯಿ ಮಾಡಿದೆ. ಆದರೆ, ‘ಪಠಾಣ್’ ಚಿತ್ರ ಹಿಂದಿಯಲ್ಲಿ ಮಾತ್ರ ಒಳ್ಳೆಯ ಗಳಿಕೆ ಮಾಡುತ್ತಿದೆ. ಹೀಗಾಗಿ, ‘ಕೆಜಿಎಫ್ 2’ ಕಲೆಕ್ಷನ್​ನ ಹಿಂದಿಕ್ಕಲು ‘ಪಠಾಣ್’ಗೆ ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ