ರೇಣುಕಾಸ್ವಾಮಿ ಅವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್ಶೀಟ್ನಲ್ಲಿ ಏನಿದೆ ಎಂಬ ವಿಚಾರ ಹೊರ ಬರುತ್ತಿದೆ. ದರ್ಶನ್ ಸೇರಿದಂತೆ 17 ಜನರು ಕೊಲೆ ಆರೋಪ ಹೊತ್ತಿದ್ದಾರೆ. ಈ ಮಧ್ಯೆ ದರ್ಶನ್, ಪವಿತ್ರಾ ಸೇರಿ ಅನೇಕ ಆಪ್ತರ ಹೇಳಿಕೆಯನ್ನು ಪಡೆಯಲಾಗಿದೆ. ಈ ಪೈಕಿ ಪವಿತ್ರಾ ಗೆಳತಿ ಸಮತಾ ಹೇಳಿಕೆಯೂ ಇಲ್ಲಿ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ಇದರಲ್ಲಿ ದರ್ಶನ್ ಹಾಗೂ ಪವಿತ್ರಾ ಮಧ್ಯೆ ಕಿರಿಕ್ ಆಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಪವಿತ್ರಾ ಗೌಡ ಹಾಗೂ ದರ್ಶನ್ ಲಿವಿಂಗ್ ಟುಗೆದರ್ನಲ್ಲಿ ಇದ್ದರು ಎಂದು ಸಮತಾ ಹೇಳಿಕೆ ಕೊಟ್ಟಿದ್ದಾರೆ. ಪವಿತ್ರಾ ಗೌಡ ಮುಖಾಂತರ ಈ ವಿಚಾರ ತಿಳಿದಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ವಿನಯ್ ಕೂಡ ಸಮತಾ ಕುಟುಂಬದ ಸ್ನೇಹಿತ. ಪವಿತ್ರಾ ಗೌಡ ಹಾಗೂ ದರ್ಶನ್ ನಡುವೆ ಯಾವಾಗಲೇ ಗಲಾಟೆ ಆದರೂ ಪವಿತ್ರಾ ವಾಟ್ಸಾಪ್ ಕಾಲ್ನಲ್ಲಿ ಸಮತಾ ಜೊತೆ ಮಾತನಾಡುತ್ತಿದ್ದರು ಎನ್ನಲಾಗಿದೆ.
ವಿಜಯಲಕ್ಷ್ಮೀ ಜೊತೆಗಿನ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ದರ್ಶನ್ ವಿದೇಶಕ್ಕೆ ಹೋಗಿದ್ದರು. ಇದರಿಂದ ಪವಿತ್ರಾ ಹಾಗೂ ದರ್ಶನ್ ನಡುವೆ ಮನಸ್ತಾಪ ಉಂಟಾಗಿತ್ತಂತೆ. ರೇಣುಕಾಸ್ವಾಮಿ ಕಿಡ್ನ್ಯಾಪ್ ಬಳಿಕವೇ ಪವಿತ್ರಾ ಜೊತೆ ದರ್ಶನ್ ಮಾತನಾಡಿದ್ದು ಎಂದು ಸಮತಾ ಹೇಳಿದ್ದಾರೆ.
ಶೆಡ್ ಬಳಿ ಹೋಗೋದಕ್ಕು ಮುನ್ನ ಸಮತಾಗೆ ಪವಿತ್ರಾ ವಾಟ್ಸಾಪ್ ಕಾಲ್ ಮಾಡಿದ್ದರು. ಈ ವೇಳೆ ಶೆಡ್ ಬಳಿ ಹೋಗಬೇಡ ಎಂದು ಸಮತಾ ಬುದ್ಧಿವಾದ ಹೇಳಿದ್ದರು. ಈ ವೇಳೆ ಮನೆಗೆ ದರ್ಶನ್ ಬಂದ ಕಾರಣ ಪವಿತ್ರಾ ಕಾಲ್ ಕಟ್ ಮಾಡಿದ್ದರು. ಶೆಡ್ ಹೋಗಿ ಬಂದ ಬಳಿಕ ಮತ್ತೆ ಸಮತಾಗೆ ಪವಿತ್ರಾ ಕಾಲ್ ಮಾಡಿದ್ದರು. ರೇಣುಕಾಸ್ವಾಮಿ ಕೈಯಲ್ಲಿ ಕ್ಷಮೆ ಕೇಳಿಸಿದ್ದಾಗಿ ಪವಿತ್ರಾ ಹೇಳಿದ್ದರು.
ಜೂನ್ 9ರಂದು ಸಂಜೆ ಪಾಕಾಶಾಲಾ ಹೋಟೆಲ್ನಲ್ಲಿ ಪವಿತ್ರಾ ಹಾಗೂ ಸಮತಾ ಕಾಫಿ ಹೀರಿದ್ದರು. ಕಾಫಿ ಕುಡಿದು ನಂತರ ಪವಿತ್ರಾ ಅವರು ಸಮತಾ ಮನೆಗೆ ತೆರಳಿದ್ದರು. ಸಮತಾ ಗಂಡನ ಬಳಿ ರೇಣುಕಾಸ್ವಾಮಿ ಶವದ ಕುರಿತು ಪವಿತ್ರಾ ಮಾಹಿತಿ ಪಡೆದಿದ್ದರು. ಸಮತಾ ಪತಿ ಸುರೇಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಫ್ರೊಫೆಸರ್ ಆಗಿದ್ದರು.
‘ಸಂಬಂಧಿಯೊಬ್ಬರು ಮಿಸ್ಸಿಂಗ್ ಆಗಿದ್ದಾರೆ. ಅವರ ಮೃತದೇಹ ಸುಮ್ಮನಹಳ್ಳಿ ಬಳಿ ಪತ್ತೆಯಾಗಿದೆ. ಅದರ ಬಗ್ಗೆ ನಿಮ್ಮ ಪತಿ ಬಳಿ ಮಾಹಿತಿ ಪಡೆದುಕೋ’ ಎಂದು ಸಮತಾಗೆ ಪವಿತ್ರಾ ಹೇಳಿದ್ದರು. ಆ ಬಳಿಕ ಪತ್ನಿಯ ಕೋರಿಕೆಯಂತೆ ರೇಣುಕಾಸ್ವಾಮಿ ಪೋಟೋಗಳನ್ನು ಕಳುಹಿಸಿದ್ದ. ಇದನ್ನ ಸಮತಾ ಅವರು ಪವಿತ್ರಾಗೆ ತೋರಿಸಿದ್ದರು. ಅದೇ ರಾತ್ರಿ ಪವಿತ್ರಾಗೆ ದರ್ಶನ್ ಕರೆ ಮಾಡಿದ್ದರು. ದರ್ಶನ್ ಕರೆ ಮಾಡುತ್ತಿದ್ದಂತೆ ಟೆಂಕ್ಷನ್ನಲ್ಲಿ ಪವಿತ್ರಾ ಮನೆಗೆ ತೆರಳಿದ್ದರು. ನಂತರ ಸಮತಾಗೆ ಸ್ಟೋನಿ ಬ್ರುಕ್ ಮಾಲೀಕ ವಿನಯ್ ಕರೆ ಮಾಡಿದ್ದ. ಪವನ್ ಅರೆಸ್ಟ್ ಆಗೋ ಸಾಧ್ಯತೆ ಇದೆ ಎಂದಿದ್ದ.
ಇದನ್ನೂ ಓದಿ: ಭೀಕರವಾಗಿದೆ ಶವಪರೀಕ್ಷಾ ವರದಿ; ರೇಣುಕಾಸ್ವಾಮಿ ದೇಹದ ಮೇಲೆ 35ಕ್ಕೂ ಅಧಿಕ ಗಾಯ
ರೇಣುಕಾಸ್ವಾಮಿ ಪೋಟೋಗಳನ್ನ ಸಮತಾ ಅವರು ವಿನಯ್ಗೆ ಕಳುಹಿಸಿದ್ದರು. ‘ರೇಣುಕಾಸ್ವಾಮಿ ಡೆಡ್ ಬಾಡಿ ಆಸ್ಪತ್ರೆಯಲ್ಲಿದೆ. ನಿಮ್ಮ ಯಜಮಾನರು ಏನಾದ್ರು ಸಹಾಯ ಮಾಡಬಹುದಾ ನೋಡಿ’ ಎಂದು ವಿನಯ್ ಕೇಳಿದ್ದ. ಸಮತಾ ಆಗಲ್ಲ ಎಂದು ಪೋನ್ ಕಟ್ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.