ಹಾಯಾಗಿ ದೆಹಲಿ, ಮುಂಬೈ ಸುತ್ತಾಡಲಿರುವ ಪವಿತ್ರಾ ಗೌಡ; ಸಿಕ್ತು ಕೋರ್ಟ್​ ಅನುಮತಿ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ದೆಹಲಿ ಹಾಗೂ ಮುಂಬೈಗೆ ತೆರಳಲು ಅನುಮತಿ ಕೋರಿದ್ದರು. ಮಾರ್ಚ್​ 3ರಿಂದ ಮಾರ್ಚ್​ 10ರ ತನಕ ಹಾಗೂ ಮಾರ್ಚ್​ 17ರಿಂದ 26ರವರೆಗೆ ಪವಿತ್ರಾ ಗೌಡ ಅವರಿಗೆ ಅನುಮತಿ ನೀಡಲಾಗಿದೆ.

ಹಾಯಾಗಿ ದೆಹಲಿ, ಮುಂಬೈ ಸುತ್ತಾಡಲಿರುವ ಪವಿತ್ರಾ ಗೌಡ; ಸಿಕ್ತು ಕೋರ್ಟ್​ ಅನುಮತಿ
Pavithra Gowda

Updated on: Feb 25, 2025 | 7:52 PM

ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರ ಬದುಕಿನಲ್ಲಿ ಅನೇಕ ಏಳು-ಬೀಳುಗಳು ಉಂಟಾಗಿವೆ. ಕಳೆದ ವರ್ಷ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದರು. ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಗೌಡ ಜೈಲು ವಾಸ ಅನುಭವಿಸಿದ್ದರು. ಈಗ ಅವರು ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಹಾಗಂತ ಮನಸ್ಸಿಗೆ ಬಂದ ಕಡೆಗೆಲ್ಲ ಹೋಗುವಂತಿಲ್ಲ. ಎಲ್ಲಿಗೆ ಹೋಗಬೇಕಾದರೂ ನ್ಯಾಯಾಲಯದ ಅನುಮತಿ ಬೇಕು. ಈಗ ಪವಿತ್ರಾ ಗೌಡ ಅವರು ದೆಹಲಿ ಮತ್ತು ಮುಂಬೈಗೆ ಪ್ರಯಾಣ ಬೆಳೆಸಲು ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ.

ದೆಹಲಿ, ಮುಂಬೈಗೆ ಪ್ರಯಾಣಿಸಲು ಪವಿತ್ರಾ ಗೌಡ ಅವರಿಗೆ ಕೋರ್ಟ್​ ಅನುಮತಿ ನೀಡಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದಾರೆ ಅವರ ಪರವಾಗಿ ವಕೀಲ ರವೀಂದ್ರ ಗೌಡ ಅವರು ಅರ್ಜಿ ಸಲ್ಲಿಸಿದ್ದರು. ಮಾರ್ಚ್​ 3ರಿಂದ ಮಾರ್ಚ್​ 10ರ ತನಕ ಮತ್ತು ಮಾರ್ಚ್​ 17ರಿಂದ 26ರವರೆಗೆ ಅನುಮತಿ ನೀಡಲಾಗಿದೆ. ಪವಿತ್ರಾ ಗೌಡ ಅವರು ತಮ್ಮ ಅಂಗಡಿಗೆ ಬಟ್ಟೆ ತರಲು ಪ್ರಯಾಣ ಮಾಡಲು ಅನುಮತಿ ಕೋರಿದ್ದರು. 57ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಜೈಶಂಕರ್ ಅವರು ಅನುಮತಿ ನೀಡಿ ಆದೇಶಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಮುಂತಾದವರು ಇಂದು (ಫೆಬ್ರವರಿ 25) ನ್ಯಾಯಾಲಯದಲ್ಲಿ ಹಾಜರಾಗಿದ್ದರು. ದರ್ಶನ್ ಮತ್ತು ಪವಿತ್ರಾ ಗೌಡ ಅವರ ನಡುವೆ ಈ ಹಿಂದೆ ತುಂಬಾ ಆಪ್ತತೆ ಇತ್ತು. ಆದರೆ ಈಗ ಆಪ್ತತೆ ಇಲ್ಲದಂತಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸಿ​ನಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಪವಿತ್ರಾ ಗೌಡ ಜೊತೆಗಿನ ಸಂಪರ್ಕ ಕಡಿತ ಆಯಿತು. ಇಂದು (ಫೆ.25) ಕೋರ್ಟ್ ಎದುರು ಪವಿತ್ರಾ ಗೌಡ ಹಾಗೂ ದರ್ಶನ್ ಮುಖಾಮುಖಿ ಆದರು. ಹಾಗಿದ್ದರೂ ಕೂಡ ಅವರು ಪರಸ್ಪರ ಮಾತನಾಡಲಿಲ್ಲ.

ಇದನ್ನೂ ಓದಿ: ‘ಅಮ್ಮನೇ ನನ್ನ ಶಕ್ತಿ’: ಪವಿತ್ರಾ ಗೌಡ ವಿಶೇಷ ರೀಲ್ಸ್

ಜಾಮೀನು ಸಿಕ್ಕ ನಂತರ ಪವಿತ್ರಾ ಗೌಡ ಅವರು ತಮ್ಮ ವೈಯಕ್ತಿಕ ಬದುಕಿನ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಬಿಸ್ನೆಸ್​ ಕಡೆಗೆ ಅವರ ಆಸಕ್ತಿ ಮೂಡಿದೆ. ಕೆಲವೇ ದಿನಗಳ ಹಿಂದೆ ಪವಿತ್ರಾ ಗೌಡ ಅವರು ತಮ್ಮ ರೆಡ್​ ಕಾರ್ಪೆಟ್​ ಸ್ಟುಡಿಯೋ ರೀ-ಲಾಂಚ್ ಮಾಡಿದರು. ಆ ಸಂದರ್ಭದ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us