‘ದರ್ಶನ್ ಕಿವಿಗೆ ಅಶ್ಲೀಲ ಮೆಸೇಜ್ ವಿಚಾರ ಬೀಳಬಾರದಿತ್ತು’; ಜೈಲಿನಲ್ಲಿ ಮರುಗಿದ ಪವಿತ್ರಾ ಗೌಡ  

ರೇಣುಕಾ ಸ್ವಾಮಿ ಕೇಸ್​ನಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ಅರೆಸ್ಟ್ ಆಗಿ ಮೂರು ದಿನ ಕಳೆದಿದೆ. ದರ್ಶನ್ ಅವರು ಜೈಲಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ಮಧ್ಯೆ ಪವಿತ್ರಾ ಗೌಡ ಅವರು ಜೈಲಿನಲ್ಲೇ ಕಣ್ಣೀರು ಹಾಕುತ್ತಿದ್ದಾರೆ. ಅವರು ಘಟನೆ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾರೆ ಎನ್ನಲಾಗಿದೆ.

‘ದರ್ಶನ್ ಕಿವಿಗೆ ಅಶ್ಲೀಲ ಮೆಸೇಜ್ ವಿಚಾರ ಬೀಳಬಾರದಿತ್ತು’; ಜೈಲಿನಲ್ಲಿ ಮರುಗಿದ ಪವಿತ್ರಾ ಗೌಡ  
ಪವಿತ್ರಾ-ದರ್ಶನ್
Updated By: ರಾಜೇಶ್ ದುಗ್ಗುಮನೆ

Updated on: Jun 13, 2024 | 9:41 AM

ರೇಣುಕಾ ಸ್ವಾಮಿ (Renuka Swami) ಕೊಲೆ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ಅರೆಸ್ಟ್ ಆಗಿ ಇಂದಿಗೆ ಮೂರನೇ ದಿನ. ಅವರು ಇನ್ನೂ ಕೆಲವು ದಿನ ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ. ಆ ಬಳಿಕ ಅವರನ್ನು ಕೋರ್ಟ್​ ಎದುರು ಪೊಲೀಸರು ಹಾಜರುಪಡಿಸಲಿದ್ದಾರೆ. ಮತ್ತಷ್ಟು ದಿನ ತಮ್ಮ ಕಸ್ಟಡಿಗೆ ನೀಡುವಂತೆ ಅವರು ಕೇಳಬಹುದು. ಈ ಮಧ್ಯೆ ಪವಿತ್ರಾ ಗೌಡ ಅವರು ಜೈಲಿನಲ್ಲೇ ಕಣ್ಣೀರು ಹಾಕುತ್ತಿದ್ದಾರೆ. ಅವರು ಘಟನೆ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾರೆ ಎನ್ನಲಾಗಿದೆ.

ರೇಣುಕಾ ಸ್ವಾಮಿ ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ಮೆಸೇಜ್ ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸೋದು ಹೆಚ್ಚಿತ್ತು. ಅವರು ಗುಪ್ತಾಂಗದ ಫೋಟೋಗಳನ್ನು ಕೂಡ ಪವಿತ್ರಾಗೆ ಕಳುಹಿಸಿದ್ದರು ಎನ್ನಲಾಗಿದೆ. ಇದರಿಂದ ಪವಿತ್ರಾ ರೋಸಿ ಹೋಗಿದ್ದರು. ಈ ವಿಚಾರ ದರ್ಶನ್ ಕಿವಿಗೆ ಬಿದ್ದಿತ್ತು. ಆ ಬಳಿಕ ದರ್ಶನ್ ಸಿಟ್ಟಾದರು. ರೇಣುಕಾ ಸ್ವಾಮಿಯನ್ನು ದರ್ಶನ್ ಅವರೇ ಬೆಂಗಳೂರಿಗೆ ಕರೆಸಿದ್ದರು ಎನ್ನಲಾಗಿದೆ. ಆ ಬಳಿಕ ಅವರ ಮೇಲೆ ಹಲ್ಲೆ ನಡೆದಿದೆ. ದರ್ಶನ್ ಗ್ಯಾಂಗ್​ನಿಂದಲೇ ರೇಣುಕಾ ಸ್ವಾಮಿ ಕೊಲೆಯಾಗಿದೆ.

ಈ ಘಟನೆ ಬಗ್ಗೆ ಪವಿತ್ರಾ ಗೌಡ ಜೈಲಿನಲ್ಲಿ ಮರುಗುತ್ತಿದ್ದಾರೆ. ‘ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ ವಿಚಾರ ದರ್ಶನ್​ಗೆ ಗೊತ್ತಾಗಬಾರದಿತ್ತು. ದರ್ಶನ್ ಕಿವಿಗೆ ಮೆಸೆಜ್ ವಿಚಾರ ಬೀಳಬಾರದಿತ್ತು. ನಾನೇ ದೂರು ನೀಡಿ ಸರಿಪಡಿಸಿಕೊಳ್ಳಬೇಕಿತ್ತು. ದರ್ಶನ್​ಗೆ ವಿಚಾರ ಗೊತ್ತಾಗಿ ಇಷ್ಟೆಲ್ಲ ಅನಾಹುತ ನಡೆದುಹೋಯ್ತು’ ಎಂದು ಪವಿತ್ರಾ ಗೌಡ ಕೊರಗುತ್ತಿದ್ದಾರೆ.

ಇದನ್ನೂ ಓದಿ: ಪವಿತ್ರಾ ಗೌಡ ಸಲುವಾಗಿ ದರ್ಶನ್​ ಬಾಳಲ್ಲಿ ನಡೆಯಿತು ದೊಡ್ಡ ದುರಂತ

‘ಈ ವಿಚಾರ ನನ್ನಲ್ಲೇ ಇದ್ದಿದ್ದರೆ ಈಗ ಆರಾಮಾಗಿರಬಹುದಿತ್ತು. ಕೊಲೆ ಹಂತಕ್ಕೆ ಯಾರು ಹೋಗುತ್ತಾ ಇರಲಿಲ್ಲ. ಆರೋಪಿಗಳಾಗಿ ನಾವು ಜೈಲು ಸೇರುತ್ತಿರಲಿಲ್ಲ’ ಎಂದು ಪವಿತ್ರಾ ಗೌಡ ಪಶ್ಚಾತಾಪ ಪಡುತ್ತಿದ್ದಾರೆ ಎಂದು ವರದಿ ಆಗಿದೆ.

ಪವಿತ್ರಾ ಗೌಡ ಎ1 ಆರೋಪಿ ಆದರೆ, ದರ್ಶನ್ ಎ2 ಆರೋಪಿ ಆಗಿದ್ದಾರೆ. ಸದ್ಯ ಪ್ರಕರಣದ ತನಿಖೆ ಭರದಿಂದ ಸಾಗುತ್ತಿದೆ. ದರ್ಶನ್ ಅವರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡುವ ಕೆಲಸ ಕೂಡ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 6:58 am, Thu, 13 June 24