AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣೀರು ಹಾಕುತ್ತಾ ಸುದ್ದಿಗೋಷ್ಠಿಯಿಂದಲೇ ಎದ್ದು ನಡೆದ ಡಾಲಿ ಧನಂಜಯ್ ಚಿತ್ರದ ನಟಿ

Payal Rajput: ಡಾಲಿ ಧನಂಜಯ್ ಅವರ ‘ಹೆಡ್ ಬುಷ್’ ನಟಿ ಪಾಯಲ್ ರಜಪೂತ್ ಇತ್ತೀಚೆಗೆ ಸುದ್ದಿಗೋಷ್ಠಿಯಿಂದ ಭಾವುಕರಾಗಿ ನಿರ್ಗಮಿಸಿದ್ದಾರೆ. ವೈಯಕ್ತಿಕ ಸವಾಲುಗಳು, ತಂದೆಯ ನಿಧನ ಮತ್ತು ಖಿನ್ನತೆ ಬಗ್ಗೆ ಕೇಳಿದ ಪ್ರಶ್ನೆಗಳಿಂದ ಅವರು ಕಣ್ಣೀರು ಹಾಕಿದರು. ದುಃಖದಿಂದ ಹೊರಬರಲು ಪ್ರಯತ್ನಿಸುತ್ತಿರುವ ಪಾಯಲ್ ಅವರಿಗೆ ಅನೇಕರು ಬೆಂಬಲ ಸೂಚಿಸಿದ್ದಾರೆ.

ಕಣ್ಣೀರು ಹಾಕುತ್ತಾ ಸುದ್ದಿಗೋಷ್ಠಿಯಿಂದಲೇ ಎದ್ದು ನಡೆದ ಡಾಲಿ ಧನಂಜಯ್ ಚಿತ್ರದ ನಟಿ
ಪಾಯಲ್
ರಾಜೇಶ್ ದುಗ್ಗುಮನೆ
|

Updated on: Apr 29, 2026 | 7:10 AM

Share

ಸುದ್ದಿಗೋಷ್ಠಿಯಲ್ಲಿ ಎದುರಾಗುವ ಎಲ್ಲಾ ಪ್ರಶ್ನೆಗಳನ್ನು ಎದುರಿಸಲು ಸೆಲೆಬ್ರಿಟಿಗಳಿಂದ ಸಾಧ್ಯವಾಗುವುದಿಲ್ಲ. ಅದರಲ್ಲೂ ವೈಯಕ್ತಿಕ ಪ್ರಶ್ನೆ ಬಂದರೆ ಕಲಾವಿದರು ಹೆದರುತ್ತಾರೆ. ಈಗ ಡಾಲಿ ಧನಂಜಯ್ ಅವರ ‘ಹೆಡ್​ ಬುಶ್’ ಸಿನಿಮಾ ನಾಯಕಿ ಪಾಯಲ್ ರಜಪೂತ್ (Payal Rajput) ಅವರಿಗೂ ಹೀಗೆಯೇ ಆಗಿದೆ. ವೈಯಕ್ತಿಕ ಚಾಲೆಂಜ್​​ಗಳ ಬಗ್ಗೆ ಅವರಿಗೆ ಪ್ರಶ್ನೆ ಎದುರಾಯಿತು. ಈ ಬಗ್ಗೆ ಮಾತನಾಡುತ್ತಾ ಅವರು ಕಣ್ಣೀರು ಹಾಕಿದರು. ಆ ಬಳಿಕ ವೇದಿಕೆಯಿಂದಲೇ ಎದ್ದು ಹೋದರು.

2018ರ ‘ಆರ್​ಎಕ್ಸ್ 100’ ಸಿನಿಮಾ ಮೂಲಕ ಪಾಯಲ್ ರಜಪೂತ್ ಅವರು ಜನಪ್ರಿಯತೆ ಪಡೆದುಕೊಂಡರು. ಈ ಸಿನಿಮಾದಲ್ಲಿ ಅವರು ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. 2022ರಲ್ಲಿ ‘ಹೆಡ್ ಬುಷ್’ ಸಿನಿಮಾದಲ್ಲಿ ನಟಿಸಿದರು. ಡಾಲಿ ಧನಂಜಯ್ ಅವರು ಈ ಚಿತ್ರಕ್ಕೆ ಹೀರೋ ಆಗಿದ್ದರು. ಈ ಸಿನಿಮಾ ಅಂದುಕೊಂಡಷ್ಟು ದೊಡ್ಡ ಯಶಸ್ಸು ಕಾಣಲಿಲ್ಲ. ಈಗ ಅವರು ತೆಲುಗು, ತಮಿಳು ಸಿನಿಮಾ ರಂಗದಲ್ಲಿ ಬ್ಯುಸಿ ಇದ್ದಾರೆ.

ಈಗ ಪಾಯಲ್ ಮುಂಬರುವ ‘ಫಸ್ಟ್ ಟೈಮ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಪ್ರಮೋಷನ್ ವೇಳೆ ಅವರಿಗೆ ವೃತ್ತಿ ಜೀವನದ ಏರಿಳಿತ ಹಾಗೂ ಅವರು ವೈಯಕ್ತಿಕವಾಗಿ ಅನುಭವಿಸಿದ ತೊಂದರೆ ಬಗ್ಗೆ ಕೇಳಲಾಯಿತು. ಅವರಿಗೆ ಉಂಟಾಗಿದೆ ಎನ್ನಲಾದ ಖಿನ್ನತೆ ಬಗ್ಗೆಯೂ ಪ್ರಶ್ನಿಸಲಾಯಿತು. ಇದಕ್ಕೆ ಅವರು ಭಾವನಾತ್ಮಕವಾಗಿ ಉತ್ತರಿಸಿದರು.

ಪಾಯಲ್ ರಜಪೂತ್​​ಗೆ ತಂದೆಯೇ ಎಲ್ಲವೂ ಆಗಿದ್ದರಂತೆ. ಆದರೆ, ಇತ್ತೀಚೆಗೆ ಅವರು ನಿಧನ ಹೊಂದಿದರು. ಈ ಸಮಸ್ಯೆಯಿಂದ ಹೊರ ಬರಲು ಅವರು ಯೋಗ ಮಾಡುವುದನ್ನು ಅಭ್ಯಾಸ ಮಾಡಿಕೊಂಡರು. ಆ ಬಳಿಕ ಪಾಯಲ್ ಮಾತನಾಡುತ್ತಾ ಒಮ್ಮೆ ಸಮಾಧಾನ ಮಾಡಿಕೊಂಡರು. ನಂತರ ಅವರು ಮತ್ತೆ ಅಳಲು ಆರಂಭಿಸಿದರು. ಕೊನೆಗೆ ತಡೆಯಲಾರದೆ ಸುದ್ದಿಗೋಷ್ಠಿಯಿಂದಲೇ ಹೊರ ನಡೆದರು. ಇದು ಸಾಕಷ್ಟು ಚರ್ಚೆಗೆ ಕಾರಣ ಆಯಿತು.

ಇದನ್ನೂ ಓದಿ: ‘ಹೆಡ್​ ಬುಷ್’ ನಾಯಕಿಗೆ ಸಿಗುತ್ತಾ ಯಶಸ್ಸು? ದೊಡ್ಡ ನಿರೀಕ್ಷೆಯಲ್ಲಿದ್ದಾರೆ ಪಾಯಲ್ ರಜಪೂತ್

ಈ ಬಗ್ಗೆ ಚರ್ಚೆ ನಡೆಯುತ್ತಿದೆ. ವೈಯಕ್ತಿವಾಗ ಹಾಗೂ ಕಟುವಾದ ಪ್ರಶ್ನೆಗಳನ್ನು ಕೇಳುವ ಮೊದಲು ಸ್ವಲ್ಪ ಯೋಚಿಸಬೇಕು ಎಂದು ಅನೇಕರು ತೆಲುಗು ಮಾಧ್ಯಮದವರಿಗೆ ಬುದ್ಧಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ