AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiran Govi: ಹೃಧಯಾಘಾತದಿಂದ ನಿರ್ದೇಶಕ ಕಿರಣ್ ಗೋವಿ ನಿಧನ

ಪಯಣ, ಸಂಚಾರಿ, ಯಾರಿಗುಂಟು-ಯಾರಿಗಿಲ್ಲ ಇನ್ನು ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಕಿರಣ್ ಗೋವಿ ನಿಧನ ಹೊಂದಿದ್ದಾರೆ.

Kiran Govi: ಹೃಧಯಾಘಾತದಿಂದ ನಿರ್ದೇಶಕ ಕಿರಣ್ ಗೋವಿ ನಿಧನ
ಕಿರಣ್ ಗೋವಿ
Follow us
ಮಂಜುನಾಥ ಸಿ.
|

Updated on:Mar 25, 2023 | 6:26 PM

ಸ್ಯಾಂಡಲ್​ವುಡ್ (Sandalwood) ನಿರ್ದೇಶಕ ಕಿರಣ್ ಗೋವಿ (Kiran Govi) ನಿಧನ ಹೊಂದಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಇಂದು (ಮಾರ್ಚ್ 25) ತಮ್ಮ ಕಚೇರಿಯಲ್ಲಿದ್ದಾಗ ಕಿರಣ್ ಅವರಿಗೆ ಹೃದಯಾಘಾತವುಂಟಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆ ಉಸಿರೆಳೆದಿದ್ದಾರೆ. ಸಂಚಾರಿ (Sanchari), ಪಯಣ (Payana), ಯಾರಿಗುಂಟು-ಯಾರಿಗಿಲ್ಲ. ಪಾರು w/o ದೇವದಾಸ್ ಇನ್ನಿತರೆ ಸಿನಿಮಾಗಳನ್ನು ನಿರ್ದೇಶಿಸಿದ್ದರು ಕಿರಣ್ ಗೋವಿ.

ನಿರ್ದೇಶಕ ಕಿರಣ್ ಗೋವಿ ನಿಧನಕ್ಕೆ ಸ್ಯಾಂಡಲ್​ವುಡ್​ನ ಕೆಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಪಾರ ಶಿಷ್ಯ ಬಳಗವನ್ನು ಕಿರಣ್ ಗೋವಿ ಹೊಂದಿದ್ದರು. ರವಿಶಂಕರ್ ನಾಯಕ ನಟರಾಗಿ ನಟಿಸಿದ್ದ ಪಯಣ ಸಿನಿಮಾವನ್ನು ಕಿರಣ್ ಗೋವಿ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ಜೊತೆಗೆ ಒರಟ ಖ್ಯಾತಿಯ ಪ್ರಶಾಂತ್ ಜೊತೆಗೆ ಸಂಚಾರಿ ಹೆಸರಿನ ಸಿನಿಮಾವನ್ನು ಮಾಡಿದ್ದರು.

ಕಿರಣ್ ಗೋವಿ ಜನಿಸಿದ್ದು ತುಮಕೂರಿನಲ್ಲಿ ಆದರೆ ಅವರ ಶಿಕ್ಷಣ ಮಾಡಿದ್ದು ಬೆಂಗಳೂರಿನಲ್ಲಿ. ಅವರ ತಂದೆ ದೂರವಾಣಿಗೆ ಸಂಬಂಧಿಸಿದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿಯೂ ನಟಿಸಿದ್ದರು. ಶಿಕ್ಷಣದಲ್ಲಿ ಹಿಂದುಳಿದ ಕಿರಣ್ ಎಳವೆಯಲ್ಲಿ ಗಾಯನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಹಾಗಾಗಿ ಆರ್ಕೆಸ್ಟ್ರಾ ಸೇರಿಕೊಂಡು ಗಾಯನ ಆರಂಭಿಸಿದರು.

ಪದವಿಗೆ ಬಂದಾಗ ಸಣ್ಣ ತಂಡ ಕಟ್ಟಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಲು ಪ್ರಾರಂಭಿಸಿದರು. ಅವರ ಜ್ಯೂನಿಯರ್ ಆಗಿದ್ದ ನಟಿ ಪ್ರೇಮ ಅವರನ್ನು ಮೊದಲ ಬಾರಿಗೆ ವೇದಿಕೆ ಏರಿಸಿದ ಶ್ರೇಯ ಸಹ ಕಿರಣ್ ಗೋವಿ ಅವರಿಗೆ ಸಲ್ಲುತ್ತದೆ. ನಟಿ ಪ್ರೇಮ ಅವರಿಗೆ ತಮ್ಮ ಬ್ಯಾಂಡ್​ನಲ್ಲಿ ಹಾಡುವ ಅವಕಾಶ ನೀಡಿ ಜೊತೆಗೆ ತಮ್ಮ ನಾಟಕದಲ್ಲಿ ಪಾತ್ರಗಳನ್ನು ನೀಡಿದ್ದರು ನಿರ್ದೇಶಕ ಕಿರಣ್ ಗೋವಿ ಆ ಬಳಿಕ ಪ್ರೇಮ ದೊಡ್ಡ ತಾರೆಯಾದರು.

ಪದವಿ ಬಳಿಕ ನಟನಾಗಬೇಕೆಂಬ ಹುಮ್ಮಸ್ಸಿನಿಂದ ಕೆಲವು ಜಾಹೀರಾತುಗಳಲ್ಲಿ, ಜಾಹೀರಾತುಗಳಲ್ಲಿ ತೀರ ಸಣ್ಣ ಪಾತ್ರಗಳಲ್ಲಿ ನಟಿಸುವ ಜೊತೆಗೆ ಸಹಾಯಕರಾಗಿಯೂ ದುಡಿದ ಕಿರಣ್, ಬಳಿಕ ಕೇಸರಿ ಹರವು ಅವರ ಧಾರಾವಾಹಿಯಲ್ಲಿ ಸಹಾಕನಾಗಿ ಕೆಲಸ ಮಾಡಿದರು. ಬಳಿಕ ಕೆಎಸ್​ಡಿಎಲ್ ಚಂದ್ರು ಅವರಿಗೂ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ಸುನಿಲ್ ಪುರಾಣಿಕ್, ಅಕ್ರಂ, ರವಿಕಿರಣ್ ಅವರುಗಳ ಧಾರಾವಾಹಿಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Sat, 25 March 23

ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್