ಉಮಾಪತಿ ಶ್ರೀನಿವಾಸ್ ಕ್ಷೇತ್ರದಲ್ಲಿ ದರ್ಶನ್ ಅಭಿಮಾನಿಗಳ ಬೈಕ್ ರ‍್ಯಾಲಿಗೆ ಇಲ್ಲ ಪೊಲೀಸರ ಅನುಮತಿ?

| Updated By: ರಾಜೇಶ್ ದುಗ್ಗುಮನೆ

Updated on: Feb 26, 2024 | 9:46 AM

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಉಮಾಪತಿ ಶ್ರೀನಿವಾಸ್ ಅವರು ಸ್ಪರ್ಧಿಸಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರವಾಗಿ ಚುನಾವಣೆ ಪ್ರಚಾರ ಮಾಡಿದರು ದರ್ಶನ್. ಆ ಚುನಾವಣೆಯಲ್ಲಿ ಉಮಾಪತಿ ಶ್ರೀನಿವಾಸ್ ಸೋತರು. ಈಗ ಇಬ್ಬರ ಮಧ್ಯೆ ಕಿರಿಕ್ ಜೋರಾಗಿದೆ.

ಉಮಾಪತಿ ಶ್ರೀನಿವಾಸ್ ಕ್ಷೇತ್ರದಲ್ಲಿ ದರ್ಶನ್ ಅಭಿಮಾನಿಗಳ ಬೈಕ್ ರ‍್ಯಾಲಿಗೆ ಇಲ್ಲ ಪೊಲೀಸರ ಅನುಮತಿ?
ಉಮಾಪತಿ-ದರ್ಶನ್
Follow us on

ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathy Srinivas) ಹಾಗೂ ನಟ ದರ್ಶನ್ ಮಧ್ಯೆ ಕಿತ್ತಾಟ ಜೋರಾಗಿದೆ. ಇಬ್ಬರ ಮಧ್ಯೆ ಮಾತಿನ ಸಮರ ಮುಂದುವರಿದಿದೆ. ಈಗ ನಟ ದರ್ಶನ್, ಉಮಾಪತಿ ವಿರುದ್ಧ ನೇರವಾಗಿ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದರು. ಉಮಾಪತಿ ಶ್ರೀನಿವಾಸ್ ವಿರುದ್ಧ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬೈಕ್ ರ‍್ಯಾಲಿ ಮಾಡಲು ದರ್ಶನ್​ ಫ್ಯಾನ್ಸ್ ಮುಂದಾಗಿದ್ದರು. ಇದರಲ್ಲಿ ದರ್ಶನ್ ಕೂಡ ಭಾಗಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ, ಇದಕ್ಕೆ ಪೊಲೀಸರು ಅನುಮತಿ ನೀಡಿಲ್ಲ ಎನ್ನಲಾಗಿದೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಅವರ ವಿರುದ್ಧ ದರ್ಶನ್ ಫ್ಯಾನ್ಸ್ ಬೈಕ್ ರ‍್ಯಾಲಿ ಮಾಡಲು ಮುಂದಾಗಿದ್ದರು. ದರ್ಶನ್ ಕೂಡ ಇರದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗಿದೆ. ಬೈಕ್ ರ‍್ಯಾಲಿ ನಡೆವ ದಿನವೂ ಸಹ ಉಮಾಪತಿ ಬೆಂಬಲಿಗರು ಹಾಗೂ ದರ್ಶನ್ ಬೆಂಬಲಿಗರ ನಡುವೆ ಜಗಳಗಳು ನಡೆಯುವ ಸಂಭವವೂ ಇದೆ. ಈ ಕಾರಣಕ್ಕೆ ರ್ಯಾಲಿಗೆ ಅವಕಾಶ ನೀಡುತ್ತಿಲ್ಲ. ಬೇಕಿದ್ದರೆ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಬಹುದು ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಉಮಾಪತಿ ಶ್ರೀನಿವಾಸ್ ಸ್ಪರ್ಧಿಸಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು ದರ್ಶನ್. ಆ ಚುನಾವಣೆಯಲ್ಲಿ ಉಮಾಪತಿ ಶ್ರೀನಿವಾಸ್ ಸೋತರು. ಈಗ ಇಬ್ಬರ ಮಧ್ಯೆ ಕಿರಿಕ್ ಜೋರಾಗಿದೆ.

ಇದನ್ನೂ ಓದಿ: ‘ನನ್ನ ಕಣ್ಮುಂದೆ ನಡೆದಿದ್ದು ಮಾತ್ರ ಹೇಳ್ತೀನಿ: ‘ಕಾಟೇರ’ ವಿವಾದಕ್ಕೆ ತರುಣ್​ ಸುಧೀರ್​ ಪ್ರತಿಕ್ರಿಯೆ

‘ಕಾಟೇರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕಥೆಯನ್ನು ತಾವೇ ಮಾಡಿಸಿದ್ದಾಗಿ ಉಮಾಪತಿ ಶ್ರೀನಿವಾಸ್ ಹೇಳಿಕೆ ನೀಡಿದ್ದರು. ಟೈಟಲ್ ಕೊಟ್ಟಿದ್ದು ಕೂಡ ತಾವೇ ಎಂದು ಹೇಳಿದ್ದರು. ಉಮಾಪತಿ ಅವರ ಮಾತಿನಿಂದ ದರ್ಶನ್​ಗೆ ಹಿಡಿಸಿರಲಿಲ್ಲ. ಅವರು ಉಮಾಪತಿಗೆ ತಗಡು ಎಂದು ಶಬ್ದ ಬಳಕೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ