ಜಪಾನಿ​, ಸ್ಪ್ಯಾನಿಶ್ ಭಾಷೆಗೂ ಡಬ್​ ಆಗಿ ರಿಲೀಸ್ ಆಗಲಿದೆ ‘ಸಲಾರ್’ ಸಿನಿಮಾ

ಜಪನೀಸ್ ಮಾತ್ರ ಅಲ್ಲದೆ, ಲ್ಯಾಟಿನ್ ಅಮೇರಿಕ, ಸ್ಪ್ಯಾನಿಶ್ ಭಾಷೆಗೆ ‘ಸಲಾರ್’ ಸಿನಿಮಾ ಡಬ್ ಆಗಲಿದೆ. ಈ ಭಾಷೆಗಳಲ್ಲಿ ಚಿತ್ರ ಮಾರ್ಚ್ 7ರಂದು ಬಿಡುಡಗೆ ಆಗಲಿದೆ.

ಜಪಾನಿ​, ಸ್ಪ್ಯಾನಿಶ್ ಭಾಷೆಗೂ ಡಬ್​ ಆಗಿ ರಿಲೀಸ್ ಆಗಲಿದೆ ‘ಸಲಾರ್’ ಸಿನಿಮಾ
ಪ್ರಭಾಸ್
Updated By: ರಾಜೇಶ್ ದುಗ್ಗುಮನೆ

Updated on: Jan 12, 2024 | 12:40 PM

ಜಪಾನ್ ದೇಶದಲ್ಲಿ ಭಾರತದ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿದ್ದಾರೆ. ಅಲ್ಲಿ ಭಾರತದ ಚಿತ್ರಗಳು ದಾಖಲೆ ಬರೆಯುತ್ತವೆ. ಈ ಮೊದಲು ‘ಬಾಹುಬಲಿ’ (Bahubali Movie), ‘ಆರ್​ಆರ್​ಆರ್​’ ಚಿತ್ರಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು. ‘ಕೆಜಿಎಫ್’ ಕೂಡ ರಿಲೀಸ್ ಆಗಿ ಸದ್ದು ಮಾಡಿತ್ತು. ಈಗ ‘ಸಲಾರ್’ ಸಿನಿಮಾ ಸರದಿ. ಈಗಾಗಲೇ ಡಬ್ಬಿಂಗ್ ಕೆಲಸಗಳು ಪ್ರಗತಿಯಲ್ಲಿವೆ. ಈ ಬೇಸಿಗೆಯಲ್ಲಿ ಚಿತ್ರ ಜಪಾನ್ ದೇಶದಲ್ಲಿ ಬಿಡುಗಡೆ ಹೊಂದಲಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಕ್ಕಿದೆ.

‘ಸಲಾರ್’ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಯಿತು. ಪ್ರಭಾಸ್ ನಟನೆಯ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಈ ಚಿತ್ರವನ್ನು ಜಪಾನ್​ನಲ್ಲಿ ಟ್ವಿನ್ ಸಂಸ್ಥೆ ಹಂಚಿಕೆ ಮಾಡಲಿದೆ. ಜಪಾನ್​ನಲ್ಲಿ ಹಲವು ಸಿನಿಮಾಗಳನ್ನು ಹಂಚಿಕೆ ಮಾಡಿದ ಅನುಭವ ಟ್ವಿನ್​ಗೆ ಇದೆ. ಅವರು ಪ್ರಭಾಸ್ ಚಿತ್ರವನ್ನು ಜಪಾನ್ ಜನರ ಮುಂದಿಡಲು ಆಸಕ್ತಿ ತೋರಿಸಿದ್ದಾರೆ.

ಜಪನೀಸ್ ಮಾತ್ರ ಅಲ್ಲದೆ, ಲ್ಯಾಟಿನ್ ಅಮೇರಿಕ, ಸ್ಪ್ಯಾನಿಶ್ ಭಾಷೆಗೆ ‘ಸಲಾರ್’ ಸಿನಿಮಾ ಡಬ್ ಆಗಲಿದೆ. ಈ ಭಾಷೆಗಳಲ್ಲಿ ಚಿತ್ರ ಮಾರ್ಚ್ 7ರಂದು ಬಿಡುಡಗೆ ಆಗಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದರಿಂದ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್​ ಗಳಿಕೆ ಹೆಚ್ಚಲಿದೆ.

ಇದನ್ನೂ ಓದಿ: ‘ಸಲಾರ್​’ ಗೆಲುವಿನ ಬೆನ್ನಲ್ಲೇ ಪ್ರಭಾಸ್​ ಅಭಿಮಾನಿಗಳಿಗೆ ‘ಕಲ್ಕಿ 2898 ಎಡಿ’ ಚಿತ್ರದಿಂದ ಸಿಹಿ ಸುದ್ದಿ

‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹರಿಹರನ್, ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ಕನ್ನಡದ ದೇವರಾಜ್, ನವೀನ್ ಶಂಕರ್, ಗರುಡ ರಾಮ್ ಮೊದಲಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ‘ಸಲಾರ್ ಚಿತ್ರ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ಮೊದಲ ವಾರ ಉತ್ತಮ ಪ್ರತಿಕ್ರಿಯೆ ವ್ಯಕ್ಯವಾಯಿತು. ಆ ಬಳಿಕ ಚಿತ್ರದ ಗಳಿಕೆ ತಗ್ಗಿದೆ. ಸದ್ಯ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ 650 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಹಲವು ಟೀಕೆ

‘ಸಲಾರ್’ ಸಿನಿಮಾ ಅಂದುಕೊಂಡ ರೀತಿಯಲ್ಲಿ ಗಳಿಕೆ ಮಾಡುತ್ತಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ‘ಉಗ್ರಂ’ ಚಿತ್ರದ ಒಂದೆಳೆ ಒಟ್ಟುಕೊಂಡು ಸಿನಿಮಾ ಮಾಡಲಾಗಿದೆ ಎಂದು ಅನೇಕರು ಟೀಕಿಸಿದರು. ಮೇಕಿಂಗ್ ವಿಚಾರದಲ್ಲಿ ಅನೇಕರಿಗೆ ‘ಕೆಜಿಎಫ್ 2’ ನೆನಪಾಯಿತು. ಹೀಗಾಗಿ ಅನೇಕರು ಚಿತ್ರವನ್ನು ನೋಡಲು ಆಸಕ್ತಿ ತೋರಿಸಿಲ್ಲ. ಇದು ಚಿತ್ರಕ್ಕೆ ಹಿನ್ನಡೆ ಉಂಟು ಮಾಡಿದೆ. ಸದ್ಯ ಹೇಳಿರೋದು ಅರ್ಧ ಕಥೆ ಮಾತ್ರ. ಮುಂದಿನ ದಿನಗಳಲ್ಲಿ ಈ ಚಿತ್ರಕ್ಕೆ ಎರಡನೇ ಪಾರ್ಟ್ ಬರಲಿದೆ. ಇದಕ್ಕೆ ‘ಶೌರ್ಯಂಗ ಪರ್ವಂ’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ಕೆಲಸ ಯಾವಾಗ ಆರಂಭ ಆಗುತ್ತದೆ ಎನ್ನುವ ಬಗ್ಗೆ ತಂಡ ಮಾಹಿತಿ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ