ಸ್ಯಾಂಡಲ್ವುಡ್ ನಟ ಪ್ರಜ್ವಲ್ ದೇವರಾಜ್ (Prajwal Devaraj) ಈಗ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡಿದ್ದ ‘ಜಂಟಲ್ಮ್ಯಾನ್’ ಹಾಗೂ ‘ಇನ್ಸ್ಪೆಕ್ಟರ್ ವಿಕ್ರಮ್’ ಇದಕ್ಕೆ ಉತ್ತಮ ಉದಾಹರಣೆ. ಇದೀಗ ಪ್ರಜ್ವಲ್ ಮತ್ತೊಮ್ಮೆ ಖಾಕಿ ಧರಿಸಿ ಮಿಂಚಲು ತಯಾರಾಗಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಖಡಕ್ ಆಗಿ ‘ಮಾಫಿಯಾ’ದ ಟೀಸರ್ (First Glimpse) ಮೂಡಿಬಂದಿದೆ. ಹೌದು. ‘ಮಾಫಿಯಾ’ (Mafia) ಚಿತ್ರದಲ್ಲಿ ಪ್ರಜ್ವಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ತಂದೆ ದೇವರಾಜ್ ಕೂಡ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿರುವುದು ವಿಶೇಷ. ನಾಯಕಿಯಾಗಿ ಕನ್ನಡದ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವ ಬಣ್ಣಹಚ್ಚುತ್ತಿದ್ದು, ಇದೇ ಮೊದಲ ಬಾರಿಗೆ ಪ್ರಜ್ವಲ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ಮಮ್ಮಿ’, ‘ದೇವಕಿ’ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿರುವ ಲೋಹಿತ್.ಎಚ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಸಖತ್ ಮಾಸ್ ಆಗಿ ಪ್ರಜ್ವಲ್ ದೇವರಾಜ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದನ್ನು ಟೀಸರ್ ಕಟ್ಟಿಕೊಟ್ಟಿದೆ. ಹಾಗೆಯೇ ಇದರ ಮತ್ತೊಂದು ಹೈಲೈಟ್ ಅನೂಪ್ ಸೀಳಿನ್. ಅವರ ಹಿನ್ನೆಲೆ ಸಂಗೀತ ಟೀಸರ್ನ ಮಾಸ್ ಗುಣವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
‘ಮಾಫಿಯಾ’ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಶೈನ್ ಶೆಟ್ಟಿ, ವಾಸುಕಿ ವೈಭವ್, ಸಾಧು ಕೋಕಿಲ, ಒರಟ ಪ್ರಶಾಂತ್ ಮೊದಲಾದವರು ಬಣ್ಣಹಚ್ಚುತ್ತಿದ್ದಾರೆ. ‘ಟಗರು’, ‘ಸಲಗ’ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆದು ಗಮನ ಸೆಳೆದಿರುವ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಅನೀಶ್ ತರುಣ್ ಕುಮಾರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜಿಸುತ್ತಿದ್ದು, ಪ್ರಮೋದ್ ಮರವಂತೆ, ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ.
ಸದ್ಯ ಕೇಳಿಬಂದಿರುವ ವರದಿಗಳ ಪ್ರಕಾರ, ‘ಮಾಫಿಯಾ’ದ ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆಯಂತೆ. ಒಟ್ಟು 5 ಹಾಡುಗಳು ಚಿತ್ರದಲ್ಲಿರಲಿವೆ. ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ ಖರೀದಿಸಿದೆ. ಮಾಫಿಯಾ ಚಿತ್ರ ಕನ್ನಡದೊಂದಿಗೆ ತಮಿಳು ಹಾಗೂ ತೆಲುಗಿನಲ್ಲೂ ತೆರೆಕಾಣಲಿದೆ.
ಇದನ್ನೂ ಓದಿ:
‘ಮಾಫಿಯಾ’ ಚಿತ್ರಕ್ಕಾಗಿ ಗೆಟಪ್ ಬದಲಿಸಿ ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಪ್ರಜ್ವಲ್ ದೇವರಾಜ್
‘ಜೇಮ್ಸ್’ ರಿಲೀಸ್ ಡೇಟ್ ಬಗ್ಗೆ ಇದ್ದ ಅನುಮಾನಗಳು ಕ್ಲಿಯರ್; ನಿರ್ಮಾಪಕರು ಹೇಳಿದ್ದೇನು? ಇಲ್ಲಿದೆ ಪೂರ್ಣ ಮಾಹಿತಿ