ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರು ದೇಶಾದ್ಯಂತ ಖ್ಯಾತಿ ಹೊಂದಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಿಂದ ಅವರಿಗೆ ಈ ಪರಿ ಪ್ರಸಿದ್ಧಿ ಸಿಕ್ಕಿದೆ. ಇಂದು (ಜೂನ್ 4) ಅವರ ಜನ್ಮದಿನವನ್ನು (Prashanth Neel Birthday) ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ. ನಿನ್ನೆ ರಾತ್ರಿಯೇ ಸೆಲೆಬ್ರೇಷನ್ ಶುರುವಾಗಿದೆ. ವಿಶೇಷ ಎಂದರೆ, ಈ ಬಾರಿ ಪ್ರಶಾಂತ್ ನೀಲ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಜೊತೆ ‘ಹೊಂಬಾಳೆ ಫಿಲ್ಮ್ಸ್’ನ ವಿಜಯ್ ಕಿರಗಂದೂರು ಕೂಡ ಸಾಥ್ ನೀಡಿದ್ದಾರೆ. ಎಲ್ಲರೂ ಒಟ್ಟಾಗಿ ಕೇಕ್ ಕಟ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಅಭಿಮಾನಿಗಳು ಪ್ರಶಾಂತ್ ನೀಲ್ಗೆ ವಿಶ್ ಮಾಡುತ್ತಿದ್ದಾರೆ. ಪ್ರಸ್ತುತ ‘ಸಲಾರ್’ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
‘ಕೆಜಿಎಫ್’ ಸಿನಿಮಾ ಬಾಕ್ಲ್ ಬಸ್ಟರ್ ಹಿಟ್ ಆಗುತ್ತಿದ್ದಂತೆಯೇ ಪ್ರಶಾಂತ್ ನೀಲ್ ಅವರಿಗೆ ಟಾಲಿವುಡ್ನಿಂದ ಸಾಕಷ್ಟು ಆಫರ್ ಬರಲು ಆರಂಭ ಆಯಿತು. ಆ ಪೈಕಿ ಅವರು ಕೆಲವೇ ಪ್ರಾಜೆಕ್ಟ್ಗಳಿಗೆ ಸಹಿ ಮಾಡಿದರು. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ಸಲಾರ್’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಸಿನಿಮಾದ ಕೆಲಸಗಳು ಪೂರ್ಣಗೊಂಡ ಬಳಿಕ ಜೂನಿಯರ್ ಎನ್ಟಿಆರ್ ನಟನೆಯ 31ನೇ ಸಿನಿಮಾಗೆ ಅವರು ನಿರ್ದೇಶನ ಮಾಡಲಿದ್ದಾರೆ. ಸದ್ಯಕ್ಕೆ ‘ಸಲಾರ್’ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಕೆಲಸದ ಮಧ್ಯೆ ಬ್ರೇಕ್ ಪಡೆದು ಈ ಚಿತ್ರತಂಡದವರು ಪ್ರಶಾಂತ್ ನೀಲ್ ಅವರ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದಾರೆ.
Rebel Star #Prabhas celebrating #PrashanthNeel birthday. #Salaar #HBDPrashanthNeel pic.twitter.com/eDM42U49ch
— Prasad Bhimanadham (@Prasad_Darling) June 3, 2023
ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಡಿವಿವಿ ಎಂಟರ್ಟೇನ್ಮೆಂಟ್ಸ್’ ಕೂಡ ಪ್ರಭಾಸ್ಗೆ ವಿಶ್ ಮಾಡಿದೆ. ಜೂನಿಯರ್ ಎನ್ಟಿಆರ್ ಹಾಗೂ ಪ್ರಭಾಸ್ ಫ್ಯಾನ್ಸ್ ಪೇಜ್ಗಳಲ್ಲಿ ಪ್ರಶಾಂತ್ ನೀಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹರಿದುಬಂದಿದೆ. ತೆಲುಗು ಚಿತ್ರರಂಗದಲ್ಲಿ ಪ್ರಶಾಂತ್ ನೀಲ್ ಅವರಿಗೆ ಸಖತ್ ಬೇಡಿಕೆ ಇದೆ. ‘ಕೆಜಿಎಫ್: ಚಾಪ್ಟರ್ 2’ ಗೆದ್ದ ಬಳಿಕ ಪ್ರಭಾಸ್ ಅವರು ಪರಭಾಷೆಯ ಹೀರೋಗಳ ಜೊತೆ ಸಿನಿಮಾ ಮಾಡಲು ಮುಂದಾಗಿದ್ದರಿಂದ ಕೆಲವರು ಟೀಕೆ ಮಾಡಿದ್ದರು. ಅವರು ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಬಾರದು ಎಂದು ಬಹುತೇಕರು ಅಭಿಪ್ರಾಯಪಟ್ಟರು. ಈ ಬಗ್ಗೆ ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇದೆ.
ಇದನ್ನೂ ಓದಿ: ನಿರ್ದೇಶಕ ಪ್ರಶಾಂತ್ ನೀಲ್ರ ಸಲಾರ್ ಸಿನಿಮಾದ 100ರ ಸೀಕ್ರೇಟ್ ಏನು?
ಇನ್ನು, ‘ಕೆಜಿಎಫ್: ಚಾಪ್ಟರ್ 3’ ಬಗ್ಗೆ ಬಹಳ ನಿರೀಕ್ಷೆ ಇದೆ. ಆ ಬಗ್ಗೆ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಅದಕ್ಕೂ ಮುನ್ನ ‘ಸಲಾರ್’ ಟೀಸರ್ ನೋಡಲು ಕಾತುರು ಹೆಚ್ಚಿದೆ. ಶೀಘ್ರದಲ್ಲೇ ಈ ಟೀಸರ್ ಬಿಡುಗಡೆ ಆಗಲಿದೆ ಎಂಬ ಸುದ್ದಿ ಕೇಳಿಬಂದಿದೆ. ಪ್ರಶಾಂತ್ ನೀಲ್ ಅವರ ಹುಟ್ಟುದ ಪ್ರಯುಕ್ತ ಹಳೇ ಸಂದರ್ಶನದ ತುಣುಕುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕವೂ ನೆಚ್ಚಿನ ನಿರ್ದೇಶಕನಿಗೆ ಫ್ಯಾನ್ಸ್ ಶುಭಾಶಯ ತಿಳಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.