ಪ್ರಶಾಂತ್ ನೀಲ್ಗೆ ಇದೆ ಒಂದು ಒಸಿಡಿ; ‘ಕೆಜಿಎಫ್ 2’ ನಿರ್ದೇಶಕ ಹೇಳಿದ್ದು ಏನು?
ಪ್ರಶಾಂತ್ ನೀಲ್ ಅವರ ಹಳೆಯ ಸಂದರ್ಶನದಲ್ಲಿ ಅವರ ಒಸಿಡಿ (ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್) ಬಗ್ಗೆ ಮಾಹಿತಿ ಹೊರಬಿದ್ದಿದೆ. ಅವರು ಕಪ್ಪು ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾರೆ ಮತ್ತು ಕೆಜಿಎಫ್ ಚಿತ್ರಗಳ ಕಪ್ಪು ಬಣ್ಣದ ಶೈಲಿ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಸಲಾರ್ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರ ವೇಷಭೂಷಣವೂ ಇದಕ್ಕೆ ಉದಾಹರಣೆಯಾಗಿದೆ.

ಪ್ರಶಾಂತ್ ನೀಲ್ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ‘ಕೆಜಿಎಫ್ 2’ ನಿರ್ದೇಶನದ ಮೂಲಕ ಅವರು ಪಡೆದ ಖ್ಯಾತಿ ತುಂಬಾನೇ ದೊಡ್ಡದು. ಪ್ರಶಾಂತ್ ನೀಲ್ ಅವರ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಮಗೆ ಇರುವ ಒಸಿಡಿ ಬಗ್ಗೆ ಮಾತನಾಡಿದ್ದರು. ಅವರು ತಮ್ಮ ಸಿನಿಮಾ ತುಂಬಾನೇ ಬ್ಲ್ಯಾಕ್ ಆಗಿ ಮೂಡಿ ಬರೋದು ಏಕೆ ಎಂಬುದನ್ನು ವಿವರವಾಗಿ ಹೇಳಿದ್ದರು.
ರಾಜಮೌಳಿ ಅವರ ಸಿನಿಮಾಗಳು ತುಂಬಾನೇ ರಿಚ್ ಆಗಿ, ಕಲರ್ಫುಲ್ ಆಗಿ ಮೂಡಿ ಬರುತ್ತವೆ. ಆದರೆ, ಪ್ರಶಾಂತ್ ನೀಲ್ ಅವರಿಗೆ ಈ ರೀತಿ ಸಿನಿಮಾ ಮಾಡಲು ಸಾಧ್ಯವೇ ಇಲ್ಲವಂತೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಈ ಮೊದಲು ಹೇಳಿಕೊಂಡಿದ್ದರು. ಕಪ್ಪು ಎಂದರೆ ಅವರಿಗೆ ಇಷ್ಟ. ಅವರಿಗೆ ಕಲರ್ಫುಲ್ ಅಂದರೆ ಇಷ್ಟ ಆಗೋದಿಲ್ಲ.
ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ನ ಶಾರ್ಟ್ ಆಗಿ ಒಸಿಡಿ ಎಂದು ಕರೆಯಲಾಗುತ್ತದೆ. ಬಣ್ಣಗಳ ವಿಚಾರದಲ್ಲಿ ಪ್ರಶಾಂತ್ ನೀಲ್ ಅವರಿಗೆ ಈ ಒಸಿಡಿ ಇದೆ. ಅಂದರೆ ಅವರಿಗೆ ಹೆಚ್ಚಿನ ಬಣ್ಣ ಇಷ್ಟ ಆಗುವುದಿಲ್ಲ. ಅದರಲ್ಲೂ ಡಾರ್ಕ್ ಬಣ್ಣ ಎಂದರೆ ದೂರವೇ ಇರುತ್ತಾರೆ. ಅದುವೇ ಸಿನಿಮಾದಲ್ಲೂ ರಿಫ್ಲೆಕ್ಟ್ ಆಗಿದೆ.
ಸಲಾರ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಒಂದು ಕುರ್ತಾ ತಂದುಕೊಟ್ಟರು. ಅದು ಕಪ್ಪು ಬಣ್ಣದಲ್ಲಿ ಇತ್ತು. ಆ ಬಳಿಕ ಇಷ್ಟ ಆಗಿಲ್ಲ ಎಂದಾಗ ಮತ್ತೊಂದು ತಂದರು. ಅದು ಕಪ್ಪು ಬಣ್ಣ ಹೊಂದಿತ್ತು. ನಂತರ ತಂದಿದ್ದೂ ಕಪ್ಪು ಬಣ್ಣದಲ್ಲೇ ಇತ್ತು. ಈ ಚಿತ್ರದ ಬಹುತೇಕ ದೃಶ್ಯಗಳಲ್ಲಿ ಪೃಥ್ವಿರಾಜ್ ಅವರು ಕಪ್ಪು ಬಣ್ಣದ ಡ್ರೆಸ್ನಲ್ಲೇ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ‘ಸಲಾರ್’ ಸಿನಿಮಾ ಬಗ್ಗೆ ಅಸಮಾಧಾನ ಹೊರ ಹಾಕಿದ ಪ್ರಶಾಂತ್ ನೀಲ್
ಬಟ್ಟೆಗಳ ವಿಚಾರದಲ್ಲೂ ಪ್ರಶಾಂತ್ ನೀಲ್ ಅವರಿಗೆ ಹೆಚ್ಚು ಕಲರ್ಸ್ ಇಷ್ಟ ಆಗೋದಿಲ್ಲ. ಇದನ್ನು ಅವರು ಅನೇಕ ಬಾರಿ ಹೇಳಿದ್ದರು. ಹೀಗಾಗಿ, ಅವರು ಕಲರ್ಫುಲ್ ಡ್ರೆಸ್ಗಳನ್ನು ಧರಿಸಿಯೇ ಇರಲಿಲ್ಲ. ಸದ್ಯ ಅವರು ‘ಸಲಾರ್ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಜೂನಿಯರ್ ಎನ್ಟಿಆರ್ ಚಿತ್ರದಲ್ಲೂ ಅವರು ತೊಡಗಿಕೊಳ್ಳಬೇಕಿದೆ. ‘ಕೆಜಿಎಫ್ 3’ ಬಗ್ಗೆ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.