‘ನಟ ಭಯಂಕರ’ ಪೋಸ್ಟರ್​ ರಿಲೀಸ್ ಮಾಡುವಾಗ ಬೆಚ್ಚಿದ ಸಿದ್ದರಾಮಯ್ಯ; ಕಾರಣ ವಿವರಿಸಿದ ಪ್ರಥಮ್​

ರಾಜಕೀಯ ಕ್ಷೇತ್ರದವರಿಗೂ ಸಿನಿಮಾ ರಂಗದವರಿಗೂ ಒಳ್ಳೆಯ ನಂಟಿರುತ್ತದೆ. ಅದೇ ರೀತಿ ಸಿದ್ದರಾಮಯ್ಯ ಅವರಿಗೂ ಚಿತ್ರರಂಗದ ಜತೆ ಉತ್ತಮ ಬಾಂಧವ್ಯ ಇದೆ. ಪ್ರಥಮ್​ ಅವರನ್ನು ಕಂಡರೆ ಸಿದ್ದರಾಮಯ್ಯ ಅವರಿಗೆ ಅಚ್ಚುಮೆಚ್ಚು.

‘ನಟ ಭಯಂಕರ’ ಪೋಸ್ಟರ್​ ರಿಲೀಸ್ ಮಾಡುವಾಗ ಬೆಚ್ಚಿದ ಸಿದ್ದರಾಮಯ್ಯ; ಕಾರಣ ವಿವರಿಸಿದ ಪ್ರಥಮ್​
‘ನಟ ಭಯಂಕರ’ ಪೋಸ್ಟರ್​ ರಿಲೀಸ್​ ಮಾಡಿದ ಸಿದ್ದರಾಮಯ್ಯ
Edited By:

Updated on: Feb 24, 2022 | 3:09 PM

‘ಬಿಗ್​ ಬಾಸ್​’ (Bigg Boss) ವಿನ್​ ಆಗೋ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ನಟ ‘ಒಳ್ಳೇ ಹುಡುಗ’ ಪ್ರಥಮ್ (Olle Hudga Pratham)​. ಅವರು ಈಗ ನಟನಾಗಿ, ನಿರ್ದೇಶಕನಾಗಿ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇಂದು (ಫೆಬ್ರವರಿ 24) ಅವರ ಬರ್ತ್​ಡೇ. ಈ ಪ್ರಯುಕ್ತ ಅವರು ನಿರ್ದೇಶಿಸಿ, ನಟಿಸುತ್ತಿರುವ ‘ನಟ ಭಯಂಕರ’ ಸಿನಿಮಾದ (Nata Bhayankara) ಪೋಸ್ಟರ್​ ರಿಲೀಸ್​ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪೋಸ್ಟರ್​ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಇದನ್ನು ರಿಲೀಸ್​ ಮಾಡುವಾಗ ಒಂದು ನಿಮಿಷ ಅವರು ಬೆಚ್ಚಿದರಂತೆ. ಇದಕ್ಕೆ ಕಾರಣವನ್ನು ವಿವರಿಸಿದ್ದಾರೆ ಪ್ರಥಮ್​.

ರಾಜಕೀಯ ಕ್ಷೇತ್ರದವರಿಗೂ ಸಿನಿಮಾ ರಂಗದವರಿಗೂ ಒಳ್ಳೆಯ ನಂಟಿರುತ್ತದೆ. ಅದೇ ರೀತಿ ಸಿದ್ದರಾಮಯ್ಯ ಅವರಿಗೂ ಚಿತ್ರರಂಗದ ಜತೆ ಉತ್ತಮ ಬಾಂಧವ್ಯ ಇದೆ. ಪ್ರಥಮ್​ ಅವರನ್ನು ಕಂಡರೆ ಸಿದ್ದರಾಮಯ್ಯ ಅವರಿಗೆ ಅಚ್ಚುಮೆಚ್ಚು. ಅವರು ಮಾಡುವ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ ಸಿದ್ದರಾಮಯ್ಯ. ಇಂದು ಪ್ರಥಮ್​ ಬರ್ತ್​ಡೇ ಹಿನ್ನೆಲೆಯಲ್ಲಿ ‘ನಟ ಭಯಂಕರ’ ಪೋಸ್ಟರ್​ ಬಿಡುಗಡೆ ಮಾಡಿ ಚಿತ್ರತಂಡದವರಿಗೆ ವಿಶ್​ ಮಾಡಿದ್ದಾರೆ. ಈ ಬಗ್ಗೆ ಪ್ರಥಮ್​ ಮಾಹಿತಿ ನೀಡಿದ್ದಾರೆ.

‘ಸಿದ್ದರಾಮಯ್ಯ ಅವರು ಬೆಳಗ್ಗೆ ದೆಹಲಿಗೆ ತೆರಳುವವರಿದ್ದರು. ಅದಕ್ಕೂ ಮೊದಲು ಮನೆಗೆ ಬರೋಕೆ ಹೇಳಿದ್ದರು. ನಾವು ತಂಡದ ಜತೆ ಅವರ ಮನೆಗೆ ತೆರಳಿದೆವು. ದೆವ್ವದ ಪಾತ್ರ ಮಾಡಿದವರು ಕೂಡ ಇದ್ದರು. ಸರ್​ ಅವರ ಪಕ್ಕ ನಿಲ್ಲಬೇಡಿ, ಅವಳು ದೆವ್ವ ಎಂದೆ. ಅವರು ಒಮ್ಮೆ ಗಾಬರಿ ಆದರು. ಸಿದ್ದರಾಮಯ್ಯ ಅವರೇ ಅವಳು ಸಿನಿಮಾದಲ್ಲಷ್ಟೇ ದೆವ್ವ ಎಂದೆ. ಆಗ ಕೊಂಚ ರಿಲೀಫ್​ ಆದರು’ ಎಂದು ಘಟನೆ ವಿವರಿಸಿದರು ಪ್ರಥಮ್.

‘ಈ ಪೋಸ್ಟರ್​ ವಿಶೇಷವಾಗಿದೆ. ರಾಮನ ಭಕ್ತ ಹನುಮಂತ ಹಾಗೂ ದೆವ್ವದ ನಡುವೆ ನಡೆಯುವ ಕಾಳಗದ ಪೋಸ್ಟರ್​ ಇದು. ಪೋಸ್ಟರ್​ ನೋಡಿ ಖುಷಿಪಟ್ಟರು. ನಮ್ಮ ಜತೆ ಬಂದ ಎಲ್ಲರ ಜತೆಗೂ ಮಾತನಾಡಿದರು. ನಿನ್ನ ಡೈರೆಕ್ಷನ್​ ಸಿನಿಮಾ ಎಂದರೆ ಪೂರ್ತಿಯಾಗಿ ನೋಡುತ್ತೇನೆ ಎಂಬುದಾಗಿ ಸಿದ್ದರಾಮಯ್ಯ ಅವರು ಪ್ರಾಮಿಸ್​ ಮಾಡಿದ್ದಾರೆ’ ಎಂದರು ಪ್ರಥಮ್​.

ಮಾರ್ಚ್​ 17ರಂದು ‘ಜೇಮ್ಸ್​’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಹಲವು ವಾರಗಳ ಕಾಲ ಈ ಸಿನಿಮಾದ ಹವಾ ಇರಲಿದೆ. ಹೀಗಾಗಿ, ಏಪ್ರಿಲ್​ ತಿಂಗಳಲ್ಲಿ ‘ನಟ ಭಯಂಕರ​’ ಸಿನಿಮಾ ತೆರೆಗೆ ತರಲು ನಿರ್ದೇಶಕರು ಪ್ಲ್ಯಾನ್​ ರೂಪಿಸಿದ್ದಾರೆ. ರಿಲೀಸ್​ ದಿನಾಂಕ ಶೀಘ್ರವೇ ಘೋಷಣೆ ಆಗಲಿದೆ.

ಪ್ರಥಮ್​, ಸುಷ್ಮಿತಾ ಜೋಶಿ, ನಿಹಾರಿಕಾ ಶೆಣೋಯ್​, ಸಾಯಿಕುಮಾರ್​, ಲೀಲಾವತಿ, ಶೋಭರಾಜ್​, ಕುರಿ ಪ್ರತಾಪ್​, ಓಂ​ ಪ್ರಕಾಶ್​ ರಾವ್​, ಬೀರಾದಾರ್​ ಮೊದಲಾದವರು ನಟಿಸಿದ್ದಾರೆ.

ಇದನ್ನೂ ಓದಿ: ‘ಬೇರೆಯವರ ದುಡ್ಡಲ್ಲಿ ನಾನೇಕೆ ಬಿಲ್ಡಪ್​ ತೆಗೆದುಕೊಳ್ಳಲಿ?’; ಸ್ವಂತ ಖರ್ಚಲ್ಲಿ ‘ನಟ ಭಯಂಕರ’ ಸಿನಿಮಾ ಕಾರ್ಮಿಕರಿಗೆ ಪ್ರಥಮ್​ ಸಹಾಯ

Meghana Raj: ಮೇಘನಾ ರಾಜ್​ ಎರಡನೇ ಮದುವೆ ಬಗ್ಗೆ ಸುಳ್ಳು ಸುದ್ದಿ; ನಟ ಪ್ರಥಮ್​ ಆಕ್ರೋಶ

Published On - 3:08 pm, Thu, 24 February 22