AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಡರ್​​​ವಾಟರ್​​ನಲ್ಲಿ ಲಿಪ್​ಲಾಕ್​ ಮಾಡಿದ ಪ್ರೆಗ್ನೆಂಟ್ ನಟಿ; ​ಫೋಟೋ ವೈರಲ್

ನಟಿ ಜೆನಿಫರ್​ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ ಅವರು.

ಅಂಡರ್​​​ವಾಟರ್​​ನಲ್ಲಿ ಲಿಪ್​ಲಾಕ್​ ಮಾಡಿದ ಪ್ರೆಗ್ನೆಂಟ್ ನಟಿ; ​ಫೋಟೋ ವೈರಲ್
ಪತಿ ಜತೆ ಜೆನಿಫರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 14, 2021 | 8:12 PM

ಪ್ರೆಗ್ನೆಂಟ್​ ಆದಮೇಲೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ತೆಗೆದುಕೊಳ್ಳುವ ಆಹಾರದ​ ಬಗ್ಗೆ ಸಾಕಷ್ಟು ಗಮನ ನೀಡಲಾಗುತ್ತದೆ. ಆರೋಗ್ಯ ಕೈ ಕೊಡಬಹುದು ಎನ್ನುವ ಕಾರಣಕ್ಕೆ ಮಳೆಯಲ್ಲಿ ನೆನೆಯೋಕೆ ಗರ್ಭಿಣಿಯರು ಹಿಂದೇಟು ಹಾಕುತ್ತಾರೆ. ಆದರೆ, ತಮಿಳು ನಟಿಯೊಬ್ಬರು ಅಂಡರ್​ವಾಟರ್​ನಲ್ಲಿ ಫೋಟೋಶೂಟ್​ ಮಾಡಿಸಿದ್ದಾರೆ. ಇದು ತುಂಬಾನೇ ವೈರಲ್​ ಆಗಿದೆ. ಅವರು ಈ ಬೋಲ್ಡ್​ ಲುಕ್​ ನೋಡಿ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಕೆಲವರು ಆರೋಗ್ಯದ ಬಗ್ಗೆ ಗಮನಹರಿಸಿ ಎಂದು ಕೋರಿದ್ದಾರೆ.  

ನಟಿ ಜೆನಿಫರ್​ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ ಅವರು. ಹಿರಿಯ ಕೊರಿಯೋಗ್ರಾಫರ್​ ಚಿನ್ನಾ ಅವರ ಮಗಳು ಜೆನಿಫರ್​. ವಿಶೇಷ ಸಾಂಗ್​ಗಳಲ್ಲೂ ಅವರು ಹೆಜ್ಜೆ ಹಾಕಿದ್ದಾರೆ. 2008ರಲ್ಲಿ ಚಿತ್ರರಂಗದಿಂದ ಬ್ರೇಕ್​ ತೆಗೆದುಕೊಂಡಿದ್ದ ಜೆನಿಫರ್, 2013ರಲ್ಲಿ ಮತ್ತೆ ಕಮ್​ಬ್ಯಾಕ್​ ಮಾಡಿದ್ದರು. ಇತ್ತೀಚೆಗೆ ಅವರು ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಗರ್ಭಿಣಿ ಆದ ನಂತರ ಜೆನಿಫರ್ ನಟನೆಯಿಂದ ದೂರವೇ ಉಳಿದಿದ್ದಾರೆ. ಈಗ ಅವರು ಫೋಟೋಶೂಟ್​ ಒಂದನ್ನು ಮಾಡಿಸಿದ್ದು ಸಾಕಷ್ಟು ವೈರಲ್​ ಆಗಿದೆ.

ನಟಿ ಜೆನಿಫರ್​ ಪತಿ ಜತೆ ನೀರಿನ ಒಳಗೆ ಮುಳುಗಿದ್ದಾರೆ. ಈ ವೇಳೆ ಫೋಟೋಶೂಟ್​ ಮಾಡಲಾಗಿದೆ. ಅಲ್ಲದೆ, ನೀರಿನಲ್ಲಿ ಅವರು ಲಿಪ್​ಲಾಕ್​ ಮಾಡಿದ್ದಾರೆ. ಈ ಫೋಟೋ ನೋಡಿದ ಸಾಕಷ್ಟು ಮಂದಿ ಅಚ್ಚರಿ ಹೊರ ಹಾಕಿದ್ದಾರೆ. ಪ್ರೆಗ್ನೆನ್ಸಿ ಸಂದರ್ಭದಲ್ಲಿ ಅವರು ಇಷ್ಟು ದೊಡ್ಡ ರಿಸ್ಕ್​ ಹೇಗೆ ತೆಗೆದುಕೊಂಡರು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಫೋಟೋ ಪೋಸ್ಟ್ ಮಾಡಿದ ಎರಡೇ ಗಂಟೆಯಲ್ಲಿ 15 ಸಾವಿರ ಲೈಕ್ಸ್​ ಗಿಟ್ಟಿಸಿಕೊಂಡಿದೆ. ಉಳಿದ ಫೋಟೋಗಳಿಗಿಂತ ಈ ಫೋಟೋವನ್ನು ಅಭಿಮಾನಿಗಳು ಹೆಚ್ಚು ಇಷ್ಟಪಟ್ಟಿದ್ದಾರೆ.

ಪ್ರೆಗ್ನೆಂಟ್​ ಆದ ನಂತರದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಆದರೆ, ಜೆನಿಫರ್ ಈ ರೀತಿ ನೀರಿನಲ್ಲಿ ನೆನೆದಿದ್ದು ಅನೇಕರ ಚಿಂತೆಗೆ ಕಾರಣವಾಗಿದೆ. ‘ಅಭಿಮಾನಿಗಳಾಗಿ ಹೇಳುತ್ತಿದ್ದೇವೆ, ಇಂತಹ ರಿಸ್ಕ್​ ತೆಗೆದುಕೊಳ್ಳಬೇಡಿ’ ಎಂದು ಕೆಲ ಫ್ಯಾನ್ಸ್​ ಕೋರಿದ್ದಾರೆ.

ಇದನ್ನೂ ಓದಿ: ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ‘ಕನ್ಯಾದಾನ’; ಈ ಸೀರಿಯಲ್​ ಕಥೆ ಏನು?

Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ