ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಎಷ್ಟೇ ಹೇಳಿದರೂ ಸಾಕಾಗುವುದಿಲ್ಲ. ಅವರು ಅನೇಕರಿಗೆ ಮಾದರಿ. ಅವರು ಫೇವರಿಟ್ ನಟ ಮಾತ್ರವಲ್ಲ ಫೇವರಿಟ್ ವ್ಯಕ್ತಿ ಕೂಡ ಹೌದು. ಅವರು ಇಲ್ಲ ಎಂಬುದನ್ನು ಅನೇಕರಿಗೆ ನಂಬೋಕೆ ಈಗಲೂ ಸಾಧ್ಯವಾಗುತ್ತಿಲ್ಲ. ಈಗ ಪ್ರಿಯಾ ಆನಂದ್ ಅವರು ಪುನೀತ್ ರಾಜ್ಕುಮಾರ್ ಬಗ್ಗೆ ಮಾತನಾಡಿದ್ದಾರೆ. ಅವರನ್ನು ಬಾಯ್ತುಂಬ ಹೊಗಳಿದ್ದಾರೆ.
ಪ್ರಿಯಾ ಆನಂದ್ ಅವರು ಪುನೀತ್ ರಾಜ್ಕುಮಾರ್ ಜೊತೆ ಮೊದಲ ಬಾರಿ ನಟಿಸಿದ್ದು ‘ರಾಜಕುಮಾರ’ ಸಿನಿಮಾದಲ್ಲಿ. ಈ ಸಿನಿಮಾ ಪುನೀತ್ ಅವರು ನಟಿಸಿದ ವಿಶೇಷ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆ. ಸಂತೋಷ್ ಆನಂದ್ರಾಮ್ ನಿರ್ದೇಶನದ ಈ ಸಿನಿಮಾಗೆ ಪ್ರಿಯಾ ಆನಂದ್ ನಾಯಕಿ. ಪ್ರಿಯಾ ಅವರು ಪುನೀತ್ನ ಸೆಟ್ನಲ್ಲಿ ಹತ್ತಿರದಿಂದ ಕಂಡವರು. ಆ ಬಳಿಕ ‘ಜೇಮ್ಸ್’ ಸಿನಿಮಾದಲ್ಲಿ ಪ್ರಿಯಾ ಆನಂದ್ ಅವರು ಪುನೀತ್ ಜೊತೆ ನಟಿಸಿದ್ದರು. ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆಯಿತು. ‘ಜೇಮ್ಸ್’ ಸಿನಿಮಾದ ಕೆಲಸಗಳು ಪೂರ್ಣಗೊಳ್ಳುವ ಮೊದಲೇ ಪುನೀತ್ ನಿಧನ ಹೊಂದಿದ್ದು ಬೇಸರದ ಸಂಗತಿ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಪುನೀತ್ ಅವರನ್ನು ಹೊಗಳೋದು ಸಾಮಾನ್ಯ. ಅವರ ಬಗ್ಗೆ ಮಾತನಾಡೋದು ಸಾಮಾನ್ಯ. ಅದೇ ರೀತಿ ಪರಭಾಷೆಯವರು ಬೇರೆ ರಾಜ್ಯದಲ್ಲಿ ಈ ಹೀರೋನ ಮೆಚ್ಚುತ್ತಿದ್ದಾರೆ. ಪ್ರಿಯಾ ಆನಂದ್ ಅವರಿಗೆ ಪುನೀತ್ ಬಗ್ಗೆ ಇರುವ ಗೌರವ ಎಂಥದ್ದು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.
ಸಿನಿಮಾ ಪ್ರಚಾರಕ್ಕೆ ಕಾಲೇಜ್ ಒಂದಕ್ಕೆ ಪ್ರಿಯಾ ತೆರಳಿದ್ದರು. ಈ ವೇಳೆ ಅವರು ಟ್ರುತ್ ಆ್ಯಂಡ್ ಡೇರ್ ಆಡಿದ್ದಾರೆ. ‘ಟ್ರುತ್’ ಆಯ್ಕೆ ಅವರಿಗೆ ಬಂದಿದೆ. ‘ಇಷ್ಟದ ಕೋ ಸ್ಟಾರ್ ಯಾರು’ ಎಂದು ಕೇಳಲಾಯಿತು. ಇದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ನಿತ್ಯಾನಂದ ಜತೆ ಮದುವೆ ಆಗ್ತೀನಿ ಅಂತ ‘ಜೇಮ್ಸ್’ ನಟಿ ಪ್ರಿಯಾ ಆನಂದ್ ಹೇಳಿದ್ದೇಕೆ?
‘ನನ್ನ ಫೇವರಿಟ್ ಆ್ಯಕ್ಟರ್ ಎಂದರೆ ಅದು ಪುನೀತ್ ರಾಜ್ಕುಮಾರ್. ಅವರು ಫೇವರಿಟ್ ವ್ಯಕ್ತಿ ಕೂಡ ಹೌದು. ರಾಜಕುಮಾರ ಸಿನಿಮಾದಲ್ಲಿ ನಾನು ನಟಿಸಿದ್ದೆ. ಅವರ ಜೊತೆ ಕಳೆದು ಹೋದೆ’ ಎಂದಿದ್ದಾರೆ ಅವರು. ಪುನೀತ್ ರಾಜ್ಕುಮಾರ್ ಅವರು 2021ರ ಅಕ್ಟೋಬರ್ನಲ್ಲಿ ನಿಧನ ಹೊಂದಿದರು. ಹೃದಯಾಘಾತದಿಂದ ಅವರ ಕೊನೆಯುಸಿರು ಎಳೆದಿದ್ದಾರೆ. ಪ್ರಿಯಾ ಆನಂದ್ ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ಇತ್ತೀಚೆಗೆ ಕನ್ನಡದ ‘ಕರಟಕ ಧಮನಕ’ ಸಿನಿಮಾದಲ್ಲಿ ಶಿವಣ್ಣ ಜೊತೆ ತೆರೆ ಹಂಚಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:54 am, Sat, 10 August 24