ಬೆಂಗಳೂರು: ನಟ ದರ್ಶನ್ ಮತ್ತು ನನ್ನ ನಡುವೆ ಯಾವುದೇ ವೈರತ್ವ ಇಲ್ಲ. ಅವರು ನನ್ನನ್ನು ನಮ್ಮ ನಿರ್ಮಾಪಕ ಎಂದು ಕರೆದಿದ್ದಾರೆ. ನಾನು ಅವರನ್ನು ಅಣ್ಣ ಎಂದು ಹೇಳಿದ್ದೇನೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ಆರೋಪಗಳು ಎದುರಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು ನನ್ನ ತೇಜೋವಧೆ ಮಾಡಿಯಾಗಿದೆ. ಇನ್ನೇನೂ ಉಳಿದಿಲ್ಲ. ಆದರೆ ಈ ವಿಚಾರಗಳಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದಲೇ ನ್ಯಾಯಾಲಯದಿಂದ ಸ್ಟೇ ತರದೇ ಎಲ್ಲವನ್ನೂ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಆರೋಪ ಮಾಡುವವರೇನು ಸಾಚಾಗಳಲ್ಲ ಎಂದಿರುವ ಉಮಾಪತಿ, ನಾನು ಈ ಘಟನೆಗಳಿಂದ ಪಾಠ ಕಲಿತುಕೊಂಡೆ ಎಂದಿದ್ದಾರೆ. ದುಡ್ಡು ನೀಡಿ ಕೆಲಸ ಮಾಡಿಕೊಂಡ ನಂತರ ಅಲ್ಲಿಗೇ ಬಿಡಬೇಕು. ಮತ್ತೊಬ್ಬರನ್ನು ಉದ್ಧಾರ ಮಾಡಲು ಹೋದರೆ ಇಂತಹ ಪರಿಸ್ಥಿತಿಗಳು ಎದುರಾಗುತ್ತವೆ ಎಂದು ಅವರು ಹೇಳಿದ್ದಾರೆ. ನನಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಹಾಯ ಬೇಕಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ಒಬ್ಬನೇ ಎದುರಿಸುತ್ತೇನೆ ಎಂದು ಅವರು ಈ ವೇಳೆ ಸ್ಪಷ್ಟಪಡಿಸಿದ್ದಾರೆ.
ಅರುಣಾ ಕುಮಾರಿ ಲೋನ್ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಒಂದು ಘಟನೆಯನ್ನು ಉದಾಹರಿಸಿದ್ದಾರೆ. ‘ಮದಗಜ’ ಸಿನಿಮಾ ತಂಡಕ್ಕೆ ನಟ ದರ್ಶನ್ರಿಂದ ಪಾರ್ಟಿ ನೀಡಲಾಗಿತ್ತು. ಪಾರ್ಟಿಗೆ ನಿರ್ಮಾಪಕರು ಬರುತ್ತಾರೆ ಕಾರು ಬಿಡಿ ಎಂದಿದ್ದರು. ಆದರೆ, ನಾನು ಹೋದ ಸಂದರ್ಭದಲ್ಲಿ ನನ್ನ ಕಾರನ್ನು ತಡೆದಿದ್ದರು. ಅನಂತರ ನಟ ದರ್ಶನ್ ಅವರಿಗೆ ನಾನು ಕರೆ ಮಾಡಿದ್ದೆ. ಆಗ ದರ್ಶನ್ ಅವರು ಯಾರೋ ಒಬ್ಬರನ್ನು ಕಳಿಸಿದ್ದರು. ಆನಂತರವೇ ನನ್ನನ್ನು ಪಬ್ ಒಳಗೆ ಬಿಟ್ಟಿದ್ದರು. ಆದರೆ ಲಾಕ್ಡೌನ್ ವೇಳೆ ಅರುಣಾ ಕುಮಾರಿಗೆ ಪ್ರವೇಶ ಹೇಗೆ ನೀಡಲಾಗಿತ್ತು ಎಂಬುದನ್ನು ಅವರು ಪ್ರಶ್ನಿಸಿದ್ದಾರೆ.
ನಿರ್ಮಾಪಕ ಉಮಾಪತಿಯವರು ಮಾತನಾಡಿರುವ ವಿಡಿಯೊ:
ಇದನ್ನೂ ನೋಡಿ: ದರ್ಶನ್ ಗಲಾಟೆ: ಸಂದೇಶ್ ಹೋಟೆಲ್ನ ಸೆಕ್ಯುರಿಟಿ ಗಾರ್ಡ್ ತೆರೆದಿಟ್ಟರು ಸ್ಫೋಟಕ ವಿಚಾರ!
ಇದನ್ನೂ ನೋಡಿ: ದರ್ಶನ್ ಹಲ್ಲೆ ಆರೋಪ; ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡದ ಸಂದೇಶ್, ಹರ್ಷಾ ಮೆಲಂಟಾ ಹೇಳಿದ್ದೇನು?
(Producer Umpathy Srinivasa Gowda clarifies his views on actor Darshan incident)