ಚಿತ್ರಮಂದಿರಗಳಿಗೆ ಹೇರಿದ್ದ ನಿರ್ಬಂಧ ತೆರವಿಗೆ ಪುನೀತ್ ರಾಜ್ಕುಮಾರ್ ತುಂಬಾನೇ ಹೋರಾಡಿದ್ದರು. ಪುನೀತ್ ಹಾಗೂ ಚಿತ್ರರಂಗದ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಿತ್ತು. ಇದಾದ ನಂತರ ರಿಲೀಫ್ ಆಗಿದ್ದ ಪುನೀತ್ ರಾಜ್ಕುಮಾರ್ ಮಂತ್ರಾಲಯಕ್ಕೆ ತೆರಳಿ ಗುರು ರಾಘವೇಂದ್ರ ರಾಯರ ದರ್ಶನ ಪಡೆದಿದ್ದಾರೆ. ಇವರಿಗೆ ನಟ ಜಗ್ಗೇಶ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಹೊಂಬಾಳೆ ಫಿಲ್ಮ್ಸ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸಾತ್ ನೀಡಿದ್ದಾರೆ.
ಇಂದು (ಏಪ್ರಿಲ್ 05) ಮುಂಜಾನೆಯೇ ಮಂತ್ರಾಲಯಕ್ಕೆ ತೆರಳುತ್ತಿರುವ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಮಾಡಿದ್ದರು. ಮಂತ್ರಾಲಯ ರಾಯರ ಬೃಂದಾವನದ ದರ್ಶನಕ್ಕೆ ಸಹೋದರ ಪುನೀತ್, ಸಂತೋಷ್ ಆನಂದರಾಮ್, ಕಾರ್ತಿಕ್ ಜೊತೆ ಹೊರಟಿದ್ದೇನೆ. ಶುಭದಿನ ಶುಭೋದಯ ಎಂದು ಕಾರಿನಲ್ಲಿ ಪ್ರಯಾಣಿಸುತ್ತಿರುವ ಫೋಟೋ ಹಂಚಿಕೊಂಡಿದ್ದರು.
ಮಂತ್ರಾಲಯ ರಾಯರ ಬೃಂದಾವನದ ದರ್ಶನಕ್ಕೆ ಸಹೋದರ ಪುನೀತ,
ಸಂತೋಷ ಆನಂದರಾಮ,
ಕಾರ್ತಿಕ್ ಜೊತೆ ಹೊರಟೆ..
ಶುಭದಿನ ಶುಭೋದಯ:)@PuneethRajkumar @SanthoshAnand15 @Karthik1423 @hombalefilms pic.twitter.com/BZAlSjQc5j— ನವರಸನಾಯಕ ಜಗ್ಗೇಶ್ (@Jaggesh2) April 5, 2021
ಮಧ್ಯಾಹ್ನದ ವೇಳೆಗೆ ರಾಯರ ದರ್ಶನಪಡೆಯುತ್ತಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನ ದರ್ಶನ ಮಾಡಿ, ಶ್ರೀಸುಭುದೇಂದ್ರ ತೀರ್ಥರ ಆಶೀರ್ವಾದ ಪಡೆದ #Yuvarathnaa ಚಿತ್ರತಂಡ ?
@PuneethRajkumar @Jaggesh2 @SanthoshAnand15 @Karthik1423 @yogigraj @hombalefilms @KRG_Connects pic.twitter.com/ur9ecaMaCP— KRG Connects (@KRG_Connects) April 5, 2021
ಪುನೀತ್ ರಾಜ್ಕುಮಾರ್ ನಟನೆಯ ಯುವರತ್ನ ಸಿನಿಮಾ ಗುರುವಾರಷ್ಟೇ (ಏಪ್ರಿಲ್ 1) ತೆರೆಗೆ ಬಂದಿತ್ತು. ಹೀಗಿರುವಾಗಲೇ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಹೊಸ ನಿಯಮ ಜಾರಿಗೆ ತಂದಿತ್ತು. ಚಿತ್ರಮಂದಿರದಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡುವ ಆದೇಶ ಹೊರಡಿಸಿತ್ತು. ಇದಕ್ಕೆ ಪುನೀತ್ ರಾಜ್ಕುಮಾರ್ ಅಸಮಾಧಾನ ಹೊರ ಹಾಕಿದ್ದರು. ಜತೆಗೆ ಹೌಸ್ಫುಲ್ಗೆ ಅವಕಾಶ ಕೋರಿದ್ದರು. ಸರ್ಕಾರ ಈ ಒತ್ತಾಯಕ್ಕೆ ಮಣಿದು, ಏಪ್ರಿಲ್ 6ರವರೆಗೆ ಚಿತ್ರಮಂದಿರ ಹೌಸ್ಫುಲ್ಗೆ ಅವಕಾಶ ನೀಡಿದೆ.
ಜಗ್ಗೇಶ್ ತೋತಾಪುರಿ ಹಾಗೂ ರಂಗನಾಯಕ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಪುನೀತ್ ರಾಜ್ಕುಮಾರ್ ಶೀಘ್ರವೇ ಜೇಮ್ಸ್ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಟೈಗರ್ ಪ್ರಭಾಕರ್ ಜನ್ಮದಿನ: ಅಣ್ಣನಂತೆ ಭುಜಕೊಟ್ಟರು; ಅಮ್ಮ ತೀರಿಕೊಂಡಾಗ ಸಂತೈಸಿದರು! ಜಗ್ಗೇಶ್ಗೆ ಪ್ರಭಣ್ಣನ ನೆನಪು
Yuvarathnaa: ಮೃತ ಮಗನ ಫೋಟೋ ಜೊತೆ ಯುವರತ್ನ ನೋಡಿದ ಪಾಲಕರು; ಪುನೀತ್ ಭಾವುಕ!
Published On - 7:46 pm, Mon, 5 April 21