ಪುನೀತ್ ಬಿಟ್ಟ ಆ ಚಿತ್ರ ಗಣೇಶ್​ಗೆ ಸಿಕ್ತು ಮತ್ತು ರಾತ್ರೋ ರಾತ್ರಿ ಸೂಪರ್​ಸ್ಟಾರ್ ಆದರು..

ಪುನೀತ್ ರಾಜ್ ಕುಮಾರ್ ಅವರು ನಿರಾಕರಿಸಿದ ‘ಮುಂಗಾರು ಮಳೆ’ ಚಿತ್ರ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಸಿಕ್ಕು ಅವರನ್ನು ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿ ಮಾಡಿತು.ಪುನೀತ್ ಅವರ ನಿರ್ಧಾರವು ಗಣೇಶ್ ಅವರಿಗೆ ಅಪಾರ ಯಶಸ್ಸನ್ನು ತಂದಿತು. ಆ ಬಗ್ಗೆ ಇಲ್ಲಿದೆ ವಿವರ.

ಪುನೀತ್ ಬಿಟ್ಟ ಆ ಚಿತ್ರ ಗಣೇಶ್​ಗೆ ಸಿಕ್ತು ಮತ್ತು ರಾತ್ರೋ ರಾತ್ರಿ ಸೂಪರ್​ಸ್ಟಾರ್ ಆದರು..
ಪುನೀತ್-ಗಣೇಶ್
Updated By: ರಾಜೇಶ್ ದುಗ್ಗುಮನೆ

Updated on: Jul 02, 2025 | 6:14 AM

ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಅವರು ಈಗ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ. ಗಣೇಶ್ ಅವರ ಬದುಕು ಬದಲಿಸಿದ್ದು ‘ಮುಂಗಾರು ಮಳೆ’ ಚಿತ್ರ. ಈ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಅವರು ನಟಿಸಬೇಕಿತ್ತು. ಆದರೆ, ಈ ಚಿತ್ರವು ಗಣೇಶ್ ಅವರ ಕೈ ಸೇರಿತು ಮತ್ತು ಸೂಪರ್ ಹಿಟ್ ಆಯಿತು. ಆ ಬಗ್ಗೆ ಇಲ್ಲಿದೆ ವಿವರ.

ಯೋಗರಾಜ್ ಭಟ್ ಅವರು ‘ಮುಂಗಾರು ಮಳೆ’ ಚಿತ್ರವನ್ನು ಮಾಡಲು ನಿರ್ಧರಿಸಿದ್ದರು. ಈ ಸಿನಿಮಾ ಅಷ್ಟು ದೊಡ್ಡ ಹಿಟ್ ಆಗುತ್ತದೆ ಎಂದು ಅವರು ಕೂಡ ಅಂದುಕೊಂಡು ಇರಲಿಲ್ಲ. ಈ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಅವರು ನಟಿಸಬೇಕಿತ್ತು. ಈ ಸಿನಿಮಾದ ಕಥೆಯನ್ನು ರಾಘಣ್ಣ ಮತ್ತು ಪುನೀತ್​ ಕಥೆ ಕೂಡ ಕೇಳಿದ್ದರು. ಆದರೆ, ಪುನೀತ್ ಈ ಚಿತ್ರವನ್ನು ಮಾಡದಿರಲು ನಿರ್ಧರಿಸಿದರು.

‘ನಾವು ಆರೆಂಟು ನಿರ್ಮಾಪಕರಿಗೆ ಹೇಳಿದ್ದೆವು. ಸಿನಿಮಾಗೆ ಏನು ಬೇಕೋ ಅದು ಇದೆ ಎಂದು ಅಪ್ಪು ಹಾಗೂ ರಾಘಣ್ಣ ಹೇಳಿದರು. ಈಗ ಪುನೀತ್ ಅವರ ಇಮೇಜ್​ಗೆ ತಕ್ಕಂತೆ ಸಿನಿಮಾ ಮಾಡಲು ಹೋಗಿ ಕಥೆಯನ್ನು ಗಬ್ಬೆಬಿಸಬೇಡಿ ಎಂದು ಅಪ್ಪು ಕೋರಿಕೊಂಡರು. ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಿ ಎಂದು ಸಜೇಶನ್ ಕೊಟ್ಟರು. ಅವರು ಕೊಟ್ಟಿದ್ದು ಅರ್ಥಪೂರ್ಣ ನಿರ್ದೇಶನ ಆಗಿತ್ತು’ ಎಂದಿದ್ದಾರೆ ಅವರು.

ಇದನ್ನೂ ಓದಿ
‘ತನ್ನದೇ ಮೂತ್ರ ಕುಡಿಯುವ ವ್ಯಕ್ತಿ, ಪ್ರಚಾರಕ್ಕಾಗಿ ಇಷ್ಟು ಮಾಡಲ್ವಾ?’
‘ಮನೆ ಬಾಡಿಗೆ ಏರಿದಂತೆ..’; ಬಿಗ್ ಬಾಸ್ ಸಂಭಾವನೆ ಬಗ್ಗೆ ಕಿಚ್ಚನ ನೇರ ಮಾತು
‘ಒಳ ಉಡುಪು ಹಾಕಿದ್ದೀನಾ, ಇಲ್ಲವಾ ಎಂಬುದನ್ನು ನೀವು ನೋಡಿದ್ದೀರಾ?’;ಖುಷಿ
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

ಪುನೀತ್ ರಾಜ್​ಕುಮಾರ್ ಅವರೇ ಮುಂಗಾರು ಮಳೆಯನ್ನು ಮಾಡಿದ್ದರೆ ಅವರ ಹೆಸರಿಗೆ ಮತ್ತೊಂದು ಯಶಸ್ಸು ಸೇರ್ಪಡೆ ಆಗಿರುತ್ತಿತ್ತು. ಆದರೆ, ಅವರು ಅದನ್ನು ಮಾಡಲಿಲ್ಲ. ಹೊಸಬರಿಗೆ ಬರಲು ಅವಕಾಶ ಮಾಡಿಕೊಟ್ಟರು. ಪುನೀತ್ ರಾಜ್​ಕುಮಾರ್ ಅವರು ಈ ಸಿನಿಮಾವನ್ನು ಬಿಡದೆ ಇದ್ದಿದ್ದರೆ ಅದು ಗಣೇಶ್​ಗೆ ಸಿಗುತ್ತಿರಲಿಲ್ಲವೇನೋ. ಇಂದು ಗಣೇಶ್ ಸೂಪರ್ ಹಿಟ್ ಆಗಲು ಅವರು ಕೂಡ ಒಂದು ಕಾರಣ ಆದರು.

ಇದನ್ನೂ ಓದಿ: ಗಣೇಶ್ ಜನ್ಮದಿನ: ಮನೆ ಬಳಿ ಬರಬೇಡಿ ಎಂದು ಕೋರಿದ ಗೋಲ್ಡನ್ ಸ್ಟಾರ್

ಗಣೇಶ್ ಅವರು ಸದ್ಯ ಹಲವು ಹಿಟ್ ಚಿತ್ರಗಳನ್ನು ನಡೆದಿದ್ದಾರೆ. ಕಳೆದ ವರ್ಷ ಬಂದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ಸೂಪರ್ ಹಿಟ್ ಆಯಿತು. ಈ ಚಿತ್ರ ಗಮನ ಸೆಳೆದಿತ್ತು. ಸಿನಿಮಾದ ಹಾಡುಗಳು ಹಿಟ್ ಆಯಿತು. ಈಗ ‘ಪಿನಾಕ’ ಹಾಗೂ ‘ಯುವರ್ ಸಿನ್ಸಿಯರ್ಲಿ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.