AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

QPL 2.0 ಲೋಗೋ ಬಿಡುಗಡೆ: ಸಾಥ್ ನೀಡಿದ ರಮ್ಯಾ, ಪ್ರಮೋದ್ ಶೆಟ್ಟಿ

ಈ ಸಲದ ಆವೃತ್ತಿಯು ಮಹಿಳಾ ತಾಂತ್ರಜ್ಞರಿಗೆ ಮತ್ತು ಪರದೆಯ ಹಿಂದೆ ಕೆಲಸ ಮಾಡುವವರಿಗೂ ವೇದಿಕೆ ಒದಗಿಸುತ್ತಿದೆ. ಇದು ಸಮಗ್ರ ಸಬಲೀಕರಣದತ್ತ ಹೆಜ್ಜೆ ಹಾಕುವ ಸಂಕೇತವಾಗಿದೆ. QPL 2.0 ಕಾರ್ಯಕ್ರಮವು ಯುವಜನತೆಗೆ ಡಿಜಿಟಲ್ ಮಾಧ್ಯಮದ ಮಿತಿ ಮೀರಿದ ಬಳಕೆಯ ಬದಲು ಶಾರೀರಿಕ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಸಂದೇಶ ನೀಡುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

QPL 2.0 ಲೋಗೋ ಬಿಡುಗಡೆ: ಸಾಥ್ ನೀಡಿದ ರಮ್ಯಾ, ಪ್ರಮೋದ್ ಶೆಟ್ಟಿ
Queens Premier League Logo Release Event
ಮದನ್​ ಕುಮಾರ್​
|

Updated on: Jul 07, 2025 | 7:24 PM

Share

ಕ್ವೀನ್ಸ್ ಪ್ರೀಮಿಯರ್ ಲೀಗ್ (QPL) ದ್ವಿತೀಯ ಆವೃತ್ತಿಯ ಕ್ರೀಡೋತ್ಸವ ಲೋಗೋವನ್ನು ಬೆಂಗಳೂರಿನಲ್ಲಿ ಅಧಿಕೃತವಾಗಿ ಅನಾವರಣ ಮಾಡಲಾಯಿತು. ಕಳೆದ ವರ್ಷ ಯಶಸ್ವಿಯಾಗಿ ನಡೆದ ಮೊದಲ ಆವೃತ್ತಿಗೆ ಸಿಕ್ಕ ಭರ್ಜರಿ ಪ್ರತಿಕ್ರಿಯ ಪರಿಣಾಮದಿಂದ ಈ ಬಾರಿಯ ಆವೃತ್ತಿಯಲ್ಲಿ 12 ಹೊಸ ಕ್ರೀಡೆಗಳನ್ನು ಸೇರಿಸಿಕೊಳ್ಳಲಾಗಿದೆ. ಹಾಗಾಗಿ ಇದು ಬರೀ ಕ್ರೀಡೆ ಮಾತ್ರವಲ್ಲದೇ ಮನರಂಜನೆಯ ಒಂದು ಹಬ್ಬವಾಗುತ್ತಿದೆ. 25 ಮಿಲಿಯನ್ ಡಿಜಿಟಲ್ ವೀಕ್ಷಣೆಗಳು ಮತ್ತು 5000ಕ್ಕೂ ಅಧಿಕ ಪ್ರೇಕ್ಷಕರು ಎಂಬ ಮೊದಲ ಆವೃತ್ತಿಯ ಭರ್ಜರಿ ಯಶಸ್ಸಿನ ಬಳಿಕ QPL 2.0 (Queens Premier League) ನಡೆಯುತ್ತಿದೆ.

ಲೋಗೋ ಅನಾವರಣ ಕಾರ್ಯಕ್ರಮದಲ್ಲಿ QPL ಸ್ಥಾಪಕ ಮಹೇಶ್ ಗೌಡ, ನಟಿ ರಮ್ಯಾ, ನಟ ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಮೋದ್ ಶೆಟ್ಟಿ ಅವರು QPL ಸಮಿತಿಯ ಸದಸ್ಯರಾಗಿದ್ದಾರೆ. ಬಾಲಿವುಡ್ ನಟಿ ಎಲಿ ಎವ್ರಾಮ್ ಕೂಡ ತಮ್ಮ ಬೆಂಬಲವನ್ನು ಸೂಚಿಸಲು ಬಂದಿದ್ದರು. ಕ್ರೀಡೆ, ಫ್ಯಾಷನ್ ಹಾಗೂ ಸಿನಿಮಾ ಲೋಕದ ಗಣ್ಯರು ಈ ವೇಳೆ ಹಾಜರಿದ್ದರು.

ಮಹೇಶ್ ಗೌಡ ಅವರು ಮಾತನಾಡಿ, ‘QPL 2.0 ಮೂಲಕ ನಾವು ಕೇವಲ ಮುಂದಿನ ಹಂತಕ್ಕೆ ಹೋಗುತ್ತಿಲ್ಲ. ಮಹಿಳೆಯರಿಗಾಗಿ ಕ್ರೀಡೆ ಮತ್ತು ಮನರಂಜನೆ ಕ್ಷೇತ್ರವನ್ನು ಪೂರ್ತಿಯಾಗಿ ಬದಲಾಯಿಸುತ್ತಿದ್ದೇವೆ’ ಎಂದರು. ಈ ಸೀಸನ್ನಲ್ಲಿ 50 ಮಿಲಿಯನ್ ಡಿಜಿಟಲ್ ವೀಕ್ಷಣೆಗಳ ಗುರಿಯನ್ನು ಅವರು ಹೊಂದಿದ್ದೇವೆ. ‘ಭಾರತದೆಲ್ಲೆಡೆ ವಿಸ್ತರಿಸಲು ತಯಾರಾಗಿದ್ದೇವೆ. ಸಿನಿ ತಾರೆಗಳು ತಾವು ಫಿಟ್ ಆಗಿ ಇರಲು ಸಮಯ ಒದಗಿಸುತ್ತಿರುವುದೇ ಯುವ ಜನತೆಗೆ ಪ್ರೇರಣೆಯಾಗಿದೆ’ ಎಂದು ಅವರು ಹೇಳಿದರು.

ನಟಿ ರಮ್ಯಾ ಅವರು ಮಾತನಾಡಿ, ‘QPL ಮಹಿಳಾ ಕಲಾವಿದರನ್ನು ಬೆಂಬಲಿಸಿ, ಅವರನ್ನು ಉತ್ತೇಜಿಸುತ್ತಿರುವ ರೀತಿ ನನಗೆ ತುಂಬಾ ಇಷ್ಟವಾಗಿದೆ. ಈ ವೇದಿಕೆಯ ಮೂಲಕ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಜೊತೆಗೆ ಮಹಿಳೆಯರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿತರಾಗಬೇಕು. ಇದು ನಮಗೆ ದೈಹಿಕವಾಗಿ ಆರೋಗ್ಯಕರವಾಗಿರುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಆನ್‌ಲೈನ್ ಗೇಮಿಂಗ್ ಮತ್ತು ಸೋಶಿಯಲ್ ಮೀಡಿಯಾದಿಂದ ದೂರವಿರಲು ನೆರವಾಗುತ್ತದೆ. ಇದಕ್ಕೆ ನನ್ನ ಸಹಯೋಗ ಇರುವುದಕ್ಕೆ ನನಗೆ ಸಂತೋಷವಾಗಿದೆ’ ಎಂದರು.

ಇದನ್ನೂ ಓದಿ: ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ: ನಟಿ ರಮ್ಯಾ

QPL ಎಂದರೆ ಕ್ರೀಡೆಯೊಂದೇ ಅಲ್ಲ. ಇದು ಗುರಿಯನ್ನು ಹೊಂದಿರುವ ಮನರಂಜನೆ ಎಂದು ಪ್ರಮೋದ್ ಶೆಟ್ಟಿ ಹೇಳಿದರು. ಇದು ಸಿನಿಮಾ ಕ್ಷೇತ್ರ ಮತ್ತು ಕಾರ್ಪೊರೇಟ್ ಜಗತ್ತನ್ನು ಒಂದು ವೇದಿಕೆಯಲ್ಲಿ ತಂದುಕೊಂಡು, ಫಿಟ್ನೆಸ್, ಮಹಿಳಾ ಸಬಲೀಕರಣ ಹಾಗೂ ಚೈತನ್ಯಮಯ ಒಗ್ಗಟ್ಟು ಒದಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.