
ಆರ್ ಚಂದ್ರು (R Chandru) ಅವರು ಇತ್ತೀಚೆಗೆ ‘ಆರ್ಸಿ ಸ್ಟುಡಿಯೋ’ ಆರಂಭಿಸಿ ಬ್ಯಾಕ್ ಟು ಬ್ಯಾಕ್ ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಈ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಈಗ ಈ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಆರನೇ ಸಿನಿಮಾ ಅನೌನ್ಸ್ ಆಗಿದೆ. ಈಗ ಅವರು ಶಿವರಾಜ್ಕುಮಾರ್ ಜೊತೆ ಕೈ ಜೋಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
2010ರಲ್ಲಿ ಶಿವರಾಜ್ಕುಮಾರ್ ನಟನೆಯ ‘ಮೈಲಾರಿ’ ಸಿನಿಮಾ ರಿಲೀಸ್ ಆಯಿತು. ಆರ್ ಚಂದ್ರು ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಮುಹೂರ್ತ ನಡೆದು ಇಂದಿಗೆ (ಏಪ್ರಿಲ್ 1) 14 ವರ್ಷಗಳು ಕಳೆದಿವೆ. ಈ ಬಗ್ಗೆ ಆರ್ ಚಂದ್ರು ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ಜೊತೆಗೆ ಅವರ ಜೊತೆ ಹೊಸ ಸಿನಿಮಾ ಘೋಷಿಸಿದ್ದಾರೆ.
ಕನ್ನಡದ ಸೂಪರ್ ಹಿಟ್ ಚಿತ್ರ ಮೈಲಾರಿ ಮುಹೂರ್ತಕ್ಕೆ 14 ವರ್ಷಗಳು ತುಂಬಿದ ಈ ಶುಭ ಸಂದರ್ಭದಲ್ಲಿ, ಕರುನಾಡ ಚಕ್ರವರ್ತಿ ಡಾ||ಶಿವರಾಜ್ ಕುಮಾರ್ ರವರಿಗೆ ಹೊಸ ಚಿತ್ರ ಆರಂಭಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ತಮ್ಮೆಲ್ಲರ ಆಶೀರ್ವಾದ ಇರಲಿ
ಧನ್ಯವಾದಗಳುಆರ್ ಸಿ ಸ್ಟುಡಿಯೋಸ್#nimmashivarajkumar pic.twitter.com/WmW6O1TU84
— R.Chandru (@rchandru_movies) April 1, 2024
‘ಕನ್ನಡದ ಸೂಪರ್ ಹಿಟ್ ಚಿತ್ರ ಮೈಲಾರಿ ಮುಹೂರ್ತಕ್ಕೆ 14 ವರ್ಷಗಳು ತುಂಬಿವೆ. ಈ ಶುಭ ಸಂದರ್ಭದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಅವರ ಜೊತೆ ಹೊಸ ಚಿತ್ರ ಆರಂಭಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ತಮ್ಮೆಲ್ಲರ ಆಶೀರ್ವಾದ ಇರಲಿ. ಧನ್ಯವಾದಗಳು, ಆರ್ ಸಿ ಸ್ಟುಡಿಯೋಸ್’ ಎಂದು ಅವರು ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ಚಂದ್ರು ಕೇವಲ ನಿರ್ಮಾಣ ಮಾಡುತ್ತಿದ್ದಾರೋ ಅಥವಾ ನಿರ್ದೇಶನ ಕೂಡ ಅವರೇ ಮಾಡುತ್ತಾರೋ ಎನ್ನುವ ಕುತೂಹಲ ಮೂಡಿದೆ.
ಇದನ್ನೂ ಓದಿ: ‘ಕಬ್ಜ 2’ ಬರಲ್ಲ ಎಂದು ಟ್ರೋಲ್ ಮಾಡಿದವರಿಗೆ ಸರಿಯಾಗಿ ಉತ್ತರ ಕೊಟ್ಟ ಆರ್. ಚಂದ್ರು
ಆರ್ ಚಂದ್ರು ಅವರು ಈ ಮೊದಲು ‘ಕಬ್ಜ’ ಸಿನಿಮಾ ಮಾಡಿದ್ದರು. ಉಪೇಂದ್ರ ನಟನೆಯ ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಹಾಗೂ ಸುದೀಪ್ ಅತಿಥಿ ಪಾತ್ರ ಮಾಡಿದ್ದರು. ಈಗಾಗಲೇ ಸುದೀಪ್ ಜೊತೆ ಚಂದ್ರು ಸಿನಿಮಾ ಘೋಷಣೆ ಮಾಡಿದ್ದರು. ಈಗ ಅವರು ಶಿವಣ್ಣ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ. ಶಿವರಾಜ್ಕುಮಾರ್ ಅವರು ಸದ್ಯ ಎಲೆಕ್ಷನ್ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಗೀತಾ ಶಿವರಾಜ್ಕುಮಾರ್ ಅವರು ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಅವರ ಪರವಾಗಿ ಶಿವಣ್ಣ ಪ್ರಚಾರ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ