Rachita Ram: ‘ಸಂಜು ವೆಡ್ಸ್​ ಗೀತಾ 2’ ಸಿನಿಮಾಗೆ ರಚಿತಾ ರಾಮ್​ ನಾಯಕಿ? ನಾಗಶೇಖರ್​ ಜೊತೆ ನಡೆದಿದೆ ಮಾತುಕತೆ

Sanju Weds Geetha 2: ನಾಗಶೇಖರ್ ಅವರ ಸಿನಿಮಾಗಳಲ್ಲಿ ನಾಯಕಿಯ ಪಾತ್ರಕ್ಕೆ ಸಖತ್​ ಪ್ರಾಮುಖ್ಯತೆ ಇರುತ್ತದೆ. ‘ಸಂಜು ವೆಡ್ಸ್​ ಗೀತಾ 2’ ಸಿನಿಮಾಗೆ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ.

Rachita Ram: ‘ಸಂಜು ವೆಡ್ಸ್​ ಗೀತಾ 2’ ಸಿನಿಮಾಗೆ ರಚಿತಾ ರಾಮ್​ ನಾಯಕಿ? ನಾಗಶೇಖರ್​ ಜೊತೆ ನಡೆದಿದೆ ಮಾತುಕತೆ
ಶ್ರೀನಗರ ಕಿಟ್ಟಿ, ರಚಿತಾ ರಾಮ್​

Updated on: Jul 18, 2023 | 1:28 PM

2011ರಲ್ಲಿ ತೆರೆಕಂಡ ‘ಸಂಜು ವೆಡ್ಸ್​ ಗೀತಾ’ ಸಿನಿಮಾ ಸೂಪರ್ ಹಿಟ್​ ಆಗಿತ್ತು. ಆ ಸಿನಿಮಾದ ಹಾಡುಗಳು ಇಂದಿಗೂ ಕೇಳುಗರ ಫೇವರಿಟ್​ ಲಿಸ್ಟ್​ನಲ್ಲಿವೆ. ನಾಗಶೇಖರ್​ ಅವರು ನಿರ್ದೇಶಿಸಿದ ಆ ಚಿತ್ರದಲ್ಲಿ ರಮ್ಯಾ ಮತ್ತು ಶ್ರೀನಗರ ಕಿಟ್ಟಿ (Srinagara Kitty) ಜೋಡಿಯಾಗಿ ನಟಿಸಿದ್ದರು. ಈಗ ಅದಕ್ಕೆ ಸೀಕ್ವೆಲ್​ ಬರುತ್ತಿದೆ. ಕೆಲವೇ ದಿನಗಳ ಹಿಂದೆ ‘ಸಂಜು ವೆಡ್ಸ್​ ಗೀತಾ 2’ (Sanju Weds Geetha 2) ಸಿನಿಮಾ ಅನೌನ್ಸ್​ ಆಯಿತು. ಈ ಬಾರಿ ಕೂಡ ಶ್ರೀನಗರ ಕಿಟ್ಟಿ ಅವರೇ ಹೀರೋ ಆಗಿ ನಟಿಸಲಿದ್ದಾರೆ ಎಂಬುದು ಪೋಸ್ಟರ್​ ಮೂಲಕ ಖಚಿತವಾಯಿತು. ಆದರೆ ನಾಯಕಿ ಯಾರು ಎಂಬ ಪ್ರಶ್ನೆಗೆ ಇನ್ನೂಉತ್ತರ ಸಿಕ್ಕಿಲ್ಲ. ನಟಿ ರಚಿತಾ ರಾಮ್​ (Rachita Ram) ಅವರ ಜೊತೆ ‘ಸಂಜು ವೆಡ್ಸ್​ ಗೀತಾ 2’ ಚಿತ್ರತಂಡದವರು ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಹಿರಂಗ ಆಗಿದೆ. ಈ ಕುರಿತು ‘ಸಿನಿಮಾ ಎಕ್ಸ್​ಪ್ರೆಸ್​’ವರದಿ ಮಾಡಿದೆ.

ನಾಗಶೇಖರ್ ಅವರ ಸಿನಿಮಾಗಳಲ್ಲಿ ನಾಯಕಿಯ ಪಾತ್ರಕ್ಕೆ ಸಖತ್​ ಪ್ರಾಮುಖ್ಯತೆ ಇರುತ್ತದೆ. ಹಾಗಾಗಿ ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದಲ್ಲಿ ಯಾರು ನಾಯಕಿ ಆಗುತ್ತಾರೆ ಎಂಬ ಕೌತುಕ ಅಭಿಮಾನಿಗಳಲ್ಲಿ ಇದೆ. ರಚಿತಾ ರಾಮ್​ ಅವರು ಕನ್ನಡ ಚಿತ್ರರಂಗದ ಬೇಡಿಕೆಯ ನಟಿ. ಅವರ ಜೊತೆ ನಿರ್ದೇಶಕ ನಾಗಶೇಖರ್​ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಇನ್ನೂ ಬಾಕಿ ಇದೆ.

ಇದನ್ನೂ ಓದಿ: ರಮ್ಯಾ ಮಾಡಿದ ಸಹಾಯ ಸ್ಮರಿಸಿದ ನಾಗಶೇಖರ್, ಹಂಚಿಕೊಂಡರು; ಸಂಜು ವೆಡ್ಸ್ ಗೀತಾ ಸಿನಿಮಾದ ಅಪರೂಪದ ವಿಷಯ

ರಚಿತಾ ರಾಮ್​ ಅವರಿಗೆ ಈ ಸಿನಿಮಾದಲ್ಲಿ ನಟಿಸಲು ಉತ್ಸಾಹ ಇದೆ ಎಂದು ಹೇಳಲಾಗುತ್ತಿದೆ. ಅವರಿಂದ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರಬೀಳಬೇಕಿದೆ. ನಾಗಶೇಖರ್​ ಅವರೇ ‘ಸಂಜು ವೆಡ್ಸ್​ ಗೀತಾ 2’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2024ರ ದಸರಾ ಹಬ್ಬಕ್ಕೆ ಈ ಚಿತ್ರವನ್ನು ತೆರೆಕಾಣಿಸಬೇಕು ಎಂಬುದು ಪ್ಲ್ಯಾನ್​. ಈ ಚಿತ್ರದ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ಸಂಜು ವೆಡ್ಸ್ ಗೀತಾ 2 ಸಿನಿಮಾ ಘೋಷಣೆ: ಕಿಟ್ಟಿ ಜೊತೆಗೆ ರಮ್ಯಾ ಇರ್ತಾರಾ?

ನಟಿ ರಚಿತಾ ರಾಮ್​ ಅವರ ಕೈಯಲ್ಲಿ ಅನೇಕ ಪ್ರಾಜೆಕ್ಟ್​ಗಳಿವೆ. ‘ಶಬರಿ’, ‘ಮ್ಯಾಟ್ನಿ’, ‘ಲವ್​ ಮಿ ಆರ್​ ಹೇಟ್​ ಮಿ’ ಮುಂತಾದ ಸಿನಿಮಾಗಳಿಗೆ ಅವರು ನಾಯಕಿ ಆಗಿದ್ದಾರೆ. ‘ಅಯೋಗ್ಯ’ ಚಿತ್ರದ ಬಳಿಕ ಸತೀಶ್​ ‘ನೀನಾಸಂ’ ಮತ್ತು ರಚಿತಾ ರಾಮ್​ ಅವರು ‘ಮ್ಯಾಟ್ನಿ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸುತ್ತಿರುವುದು ವಿಶೇಷ. ಈ ಚಿತ್ರದ ಮೊದಲ ಹಾಡು ಜುಲೈ 21ರಂದು ಬಿಡುಗಡೆ ಆಗಲಿದೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ರಚಿತಾ ರಾಮ್​ಗೆ ಬೇಡಿಕೆ ಇದೆ. ‘ಭರ್ಜರಿ ಬ್ಯಾಚುಲರ್​’ ರಿಯಾಲಿಟಿ ಶೋನಲ್ಲಿ ಅವರು ಜಡ್ಜ್​ ಆಗಿ ಭಾಗವಹಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us