ರಚಿತಾ ರಾಮ್​ಗೆ ವಿಶೇಷವಾಗಿ ಥ್ಯಾಂಕ್ಸ್ ಹೇಳಿದ ದರ್ಶನ್; ನಟಿಯ ಪ್ರತಿಕ್ರಿಯೆ ಏನು?

ರಚಿತಾ ರಾಮ್ ಅವರು ದರ್ಶನ್ ಅವರ ಬಂಧನದ ಸಮಯದಲ್ಲಿ ಅವರ ಪರವಾಗಿ ನಿಂತಿದ್ದರು. ಈಗ ದರ್ಶನ್ ಅವರು ರಚಿತಾ ಸೇರಿದಂತೆ ಕೆಲವರಿಗೆ ವಿಡಿಯೋ ಮೂಲಕ ಧನ್ಯವಾದ ಹೇಳಿದ್ದಾರೆ. ರಚಿತಾ ಅವರು ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ .

ರಚಿತಾ ರಾಮ್​ಗೆ ವಿಶೇಷವಾಗಿ ಥ್ಯಾಂಕ್ಸ್ ಹೇಳಿದ ದರ್ಶನ್; ನಟಿಯ ಪ್ರತಿಕ್ರಿಯೆ ಏನು?
ರಚಿತಾ-ದರ್ಶನ್

Updated on: Feb 08, 2025 | 3:49 PM

ನಟಿ ರಚಿತಾ ರಾಮ್ ಹಾಗೂ ದರ್ಶನ್ ಮಧ್ಯೆ ಒಳ್ಳೆಯ ಒಡನಾಟ ಇದೆ. ಚಿತ್ರರಂಗದಲ್ಲಿ ಮಿಂಚಲು ಅವಕಾಶ ಕೊಟ್ಟಿದ್ದು ದರ್ಶನ್ ಎಂಬ ವಿಶೇಷ ಗೌರವ ನಟಿಗೆ ಇದೆ. ಈ ಕಾರಣದಿಂದಲೇ ರಚಿತಾ ರಾಮ್ ಅವರು ಸದಾ ದರ್ಶನ್ ಪರ ನಿಂತಿರುತ್ತಾರೆ. ದರ್ಶನ್ ಬಂಧನದಲ್ಲಿ ಇದ್ದಾಗಲೂ ಅವರ ಪರ ಮಾತನಾಡಿದ್ದರು. ಈಗ ದರ್ಶನ್ ಅವರು ವಿಶೇಷ ವಿಡಿಯೋ ಮಾಡಿದ್ದು, ರಚಿತಾಗೆ ಧನ್ಯವಾದ ಹೇಳಿದ್ದಾರೆ. ಇದಕ್ಕೆ ರಚಿತಾ ರಾಮ್ ಪ್ರತಿಕ್ರಿಯಿಸಿದ್ದಾರೆ.

ರಚಿತಾ ಪೋಸ್ಟ್

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೆ ಒಳಗಾದ ಬಳಿಕ ಅನೇಕರು ದರ್ಶನ್ ಪರವಾಗಿ ಮಾತನಾಡಲು ಭಯಬಿದ್ದು ಮೌನ ವಹಿಸಿದ್ದರು. ಆಗ ರಚಿತಾ ದರ್ಶನ್ ಪರ ಮಾತನಾಡಿದ್ದರು. ‘ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ದರ್ಶನ್‌ ಅವರು ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ. ಅವರು ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದನ್ನು ನಂಬಲು ಸ್ವಲ್ಪ ಕಷ್ಟ ಆಗುತ್ತಿದೆ. ಸತ್ಯ ಪೊಲೀಸ್‌ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ’ ಎಂದು ರಚಿತಾ ಪೋಸ್ಟ್ ಮಾಡಿದ್ದರು.

ದರ್ಶನ್ ಧನ್ಯವಾದ

ನಟ ದರ್ಶನ್ ಅವರು ರಚಿತಾಗೆ ವಿಶೇಷ ಧ್ಯನವಾದ ಹೇಳಿದ್ದಾರೆ. ಅಭಿಮಾನಿಗಳಿಗಾಗಿ ಮಾಡಿರೋ ವಿಡಿಯೋದಲ್ಲಿ ಅವರು ಮೂವರಿಗೆ ಧನ್ಯವಾದ ಹೇಳಿದ್ದಾರೆ. ದರ್ಶನ್ ಜೈಲಿನಲ್ಲಿ ಇದ್ದಾಗ ಅವರನ್ನು ನೋಡಲು ಸಾಕಷ್ಟು ಬಾರಿ ಬಂದ ಹಾಗೂ ದರ್ಶನ್ ಕುಟುಂಬದ ಪರ ನಿಂತ ಧನ್ವೀರ್​ಗೆ ಧನ್ಯವಾದ ಹೇಳಿದ್ದಾರೆ. ಇದರ ಜೊತೆಗೆ ರಚಿತಾ ರಾಮ್ ಹಾಗೂ ರಕ್ಷಿತಾಗೂ ದರ್ಶನ್ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ‘ಎಷ್ಟೇ ವರ್ಷ ನನ್ನ ಹಿಂದೆ ಬಂದರೂ ನಿಮಗೆ ಬೀಳಲ್ಲ’; ನೇರವಾಗಿ ಹೇಳಿದ ರಚಿತಾ ರಾಮ್

ಪ್ರತಿಕ್ರಿಯೆ

ದರ್ಶನ್ ಹಂಚಿಕೊಂಡಿರೋ ವಿಡಿಯೋಗೆ ರಚಿತಾ ರಾಮ್ ಪ್ರತಿಕ್ರಿಯಿಸಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಈ ವಿಡಿಯೋ ಹಂಚಿಕೊಂಡಿರೋ ಅವರು ‘ದರ್ಶನ್ ಬಾಸ್’ ಎಂದು ಕೈ ಮುಗಿಯುತ್ತಿರುವ ಎಮೋಜಿಯನ್ನು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:48 pm, Sat, 8 February 25