ವಿಲೋಕ್ ಶೆಟ್ಟಿ ನಿರ್ದೇಶನದ ಬಹು ತಾರಾಗಣದ ‘ಚೇಸ್’ (Chase Movie) ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಪ್ರೇಕ್ಷಕರನ್ನು ‘ಚೇಸ್’ ಅಂಗಳಕ್ಕೆ ಬರ ಮಾಡಿಕೊಳ್ಳಲು ಚಿತ್ರತಂಡ ರೆಡಿಯಾಗಿದೆ. ಸೆನ್ಸಾರ್ ಅಂಗಳದಲ್ಲಿರುವ ಚಿತ್ರವು ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದ್ದು ಶೀಘ್ರದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿಕೊಡಲಿದೆ. ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇಂದು ಆಡಿಯೋ ಜೂಕ್ ಬಾಕ್ಸ್ (Chase Audio Juke Box) ಬಿಡುಗಡೆ ಮಾಡಿದೆ. ಒಂದಕ್ಕಿಂತ ಒಂದು ಕಲರ್ ಫುಲ್ ಸಾಂಗ್ ಹೊತ್ತ ಚೇಸ್ ಜೂಕ್ ಬಾಕ್ಸ್ ಬಿಡುಗಡೆಯಾಗಿ ಇದೀಗ ಚಿತ್ರಪ್ರೇಮಿಗಳ ಫೇವರೇಟ್ ಆಗಿದೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿವೆ. ಸಿನಿಮಾದಲ್ಲಿ ಸಂದರ್ಭಕ್ಕೆ ತಕ್ಕ ಹಾಗೆ ಅವುಗಳು ಮೂಡಿ ಬಂದಿದ್ದು, ಹಾಡುಗಳು ಕಥೆಯನ್ನು ಕ್ಯಾರಿ ಮಾಡಲಿವೆ.
ಚಿತ್ರದಲ್ಲಿ ನಾಲ್ಕು ಡ್ಯುಯೆಟ್ ಸಾಂಗ್, ಥ್ರಿಲ್ಲರ್ ಟ್ರ್ಯಾಕ್, ಟೈಟಲ್ ಟ್ರ್ಯಾಕ್ ಸೇರಿ ಒಟ್ಟು ಆರು ಹಾಡುಗಳಿವೆ. ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ, ಬಿನ್ನಿ ದಯಾಳ್, ಅನುರಾಧ ಭಟ್, ಹರೀಶ್ ವೆಂಕಟ್, ಮಕ್ಬೂಲ್ ಮನ್ಸೂರ್ ಮಹಮ್ಮದ್ ಹಾಡುಗಳಿಗೆ ದನಿಯಾಗಿದ್ದಾರೆ. ‘ಮತ್ತೆ ಮಳೆಯಾಗಿದೆ’ ಖ್ಯಾತಿಯ ಡಾ. ಉಮೇಶ್ ಪಿಲಿಕುಡೇಲು ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ಕಾರ್ತಿಕ್ ಆಚಾರ್ಯ ಸಂಗೀತ ನಿರ್ದೇಶನದಲ್ಲಿ ‘ಚೇಸ್’ ಸಿನಿಮಾದ ಕಲರ್ ಫುಲ್ ಹಾಡುಗಳು ಮೂಡಿ ಬಂದಿವೆ.
ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಚೇಸ್’ ಚಿತ್ರವು ಈಗಾಗಲೇ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಸಸ್ಪೆನ್ಸ್, ಕ್ರೈಂ, ಥ್ರಿಲ್ಲರ್ ಸಬ್ಜೆಕ್ಟ್ ಜೀವಾಳವಾಗಿರುವ ‘ಚೇಸ್’ ಚಿತ್ರದಲ್ಲಿ ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಸುಶಾಂತ್ ಪೂಜಾರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಅರ್ಜುನ್ ಯೋಗೇಶ್ ರಾಜ್, ಸುಶಾಂತ್ ಪೂಜಾರಿ, ಸುಧಾ ಬೆಳವಾಡಿ, ರಾಜೇಶ್ ನಟರಂಗ, ಅರವಿಂದ್ ಬೋಳಾರ್, ರೆಹಮಾನ್ ಹಾಸನ್ ಒಳಗೊಂಡ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ.
‘ಚೇಸ್’ ಜೂಕ್ ಬಾಕ್ಸ್ ಇಲ್ಲಿದೆ:
ಇದನ್ನೂ ಓದಿ: Thothapuri Movie: ‘ತೋತಾಪುರಿ’ ರುಚಿಗೆ ಪ್ರೇಕ್ಷಕರು ಫಿದಾ; ‘ದೇಸಿ ಫೈಲ್ಸ್’ ಎಂದು ಹೊಗಳಿಕೆ
ಕಾಂಪೀಟೇಶನ್ ಜಗತ್ತಲ್ಲೂ 50 ದಿನ ಪೂರೈಸಿದ ‘ಕನ್ನೇರಿ’: ಕಾರಣಕರ್ತರಿಗೆ ಚಿತ್ರತಂಡದಿಂದ ಧನ್ಯವಾದ