ಹೇಗಿದ್ದಾರೆ ನೋಡಿ ರಾಧಿಕಾ ಪಂಡಿತ್ ಅವರ ಕ್ಯೂಟ್ ಪ್ರಿನ್ಸೆಸ್; ಫೋಟೋ ಹಂಚಿಕೊಂಡ ಯಶ್ ಪತ್ನಿ
ರಾಧಿಕಾ ಪಂಡಿತ್ ಹಾಗೂ ಯಶ್ ಅವರು 2016ರಲ್ಲಿ ಮದುವೆ ಆದರು. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಆಯ್ರಾ ಹಾಗೂ ಯಥರ್ವ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿ ಹಲವು ಕಡೆ ತೆರಳುತ್ತಾ ಇರುತ್ತಾರೆ. ಮಕ್ಕಳನ್ನೂ ಅವರು ಕರೆದುಕೊಂಡು ಹೋಗುತ್ತಾರೆ. ಈಗ ರಾಧಿಕಾ ಅವರು ಹಂಚಿಕೊಂಡಿರುವ ಹೊಸ ಫೋಟೋ ಗಮನ ಸೆಳೆದಿದೆ.
ಕನ್ನಡದ ನಟಿ, ಯಶ್ ಪತ್ನಿ ರಾಧಿಕಾ ಪಂಡಿತ್ (Radhika Pandit) ಅವರು ನಟನೆಯಿಂದ ದೂರ ಉಳಿದಿದ್ದಾರೆ. ಅವರು ಮಕ್ಕಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಆಯ್ರಾ ಹಾಗೂ ಯಥರ್ವ್ ಜೊತೆ ಸಮಯ ಕಳೆಯುತ್ತಿದ್ದಾರೆ. ಮಕ್ಕಳ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಆಯ್ರಾ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಮಗಳನ್ನು ರಾಧಿಕಾ ಅವರು ಕ್ಯೂಟ್ ಪ್ರಿನ್ಸೆಸ್ ಎಂದು ಕರೆದಿದ್ದಾರೆ.
ರಾಧಿಕಾ ಪಂಡಿತ್ ಹಾಗೂ ಯಶ್ ಅವರು 2016ರಲ್ಲಿ ಮದುವೆ ಆದರು. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಆಯ್ರಾ ಹಾಗೂ ಯಥರ್ವ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿ ಹಲವು ಕಡೆ ತೆರಳುತ್ತಾ ಇರುತ್ತಾರೆ. ಮಕ್ಕಳನ್ನೂ ಅವರು ಕರೆದುಕೊಂಡು ಹೋಗುತ್ತಾರೆ. ಈಗ ರಾಧಿಕಾ ಅವರು ಹಂಚಿಕೊಂಡಿರುವ ಹೊಸ ಫೋಟೋ ಗಮನ ಸೆಳೆದಿದೆ.
ಆಯ್ರಾ ಅವರು ಸ್ನಾನದ ಬಳಿಕ ಹಾಕುವ ಡ್ರೆಸ್ ಹಾಕಿದ್ದಾರೆ. ಅವಳಿಗೆ ರಾಧಿಕಾ ಶೂ ಹಾಕುತ್ತಿದ್ದಾರೆ. ‘ನಮ್ಮ ಲಿಟ್ಲ್ ಪ್ರಿನ್ಸಸ್’ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಅನೇಕರಿಗೆ ಈ ಫೋಟೋ ನೋಡಿ ‘ಕೆಜಿಎಫ್’ ಸಿನಿಮಾ ನೆನಪಾಗಿದೆ. ಯಶ್ ಹೋಟೆಲ್ಗೆ ಬರುತ್ತಾರೆ. ಅಲ್ಲಿಗೆ ನಾಯಕಿಯ ಆಗಮನ ಆಗುತ್ತದೆ. ಆಗ ಅವರು ಯಶ್ ಇದೇ ರೀತಿಯ ಬಟ್ಟೆ ಧರಿಸಿದ್ದರು. ಆ ದೃಶ್ಯವನ್ನು ಅನೇಕರು ನೆನಪಿಸಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ಹೇಗಿತ್ತು ನೋಡಿ ಆಯ್ರಾ-ಯಥರ್ವ ರಕ್ಷಾ ಬಂಧನ ಆಚರಣೆ; ಫೋಟೋಗಳಲ್ಲಿ ವಿವರಿಸಿದ ರಾಧಿಕಾ ಪಂಡಿತ್
ರಾಧಿಕಾ ಪಂಡಿತ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ನಟನೆಗೆ ಮರಳಬೇಕು ಎಂಬುದು ಅನೇಕರ ಆಸೆ. ಆದರೆ, ಅದು ಸದ್ಯಕ್ಕೆ ಈಡೇರುವ ಸೂಚನೆ ಸಿಕ್ಕಿಲ್ಲ. ಇನ್ನು, ಯಶ್ ‘ಕೆಜಿಎಫ್ 2’ ಬಳಿಕ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಅವರು ಹೊಸ ಚಿತ್ರ ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಬಾಲಿವುಡ್ನಿಂದಲೂ ಯಶ್ಗೆ ಆಫರ್ಗಳು ಬರುತ್ತಿವೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ