ರುಕ್ಮಿಣಿ ವಸಂತ್​ಗೆ ಬಾಯ್​ಫ್ರೆಂಡ್ ಇದ್ದಾನಾ? ಅವರೇ ಹೇಳಿದ್ದಾರೆ

Rukmini Vasanth: ನಟಿ ರುಕ್ಮಿಣಿ ವಸಂತ್ ಕರ್ನಾಟಕದ ಹೊಸ ಕ್ರಶ್ ಎನಿಸಿಕೊಂಡಿದ್ದಾರೆ. ಆದರೆ ರುಕ್ಮಿಣಿಗೆ ಬಾಯ್​ಫ್ರೆಂಡ್ ಇದ್ದಾನೆ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಆ ಬಗ್ಗೆ ರುಕ್ಮಿಣಿ ಮಾತನಾಡಿದ್ದಾರೆ.

ರುಕ್ಮಿಣಿ ವಸಂತ್​ಗೆ ಬಾಯ್​ಫ್ರೆಂಡ್ ಇದ್ದಾನಾ? ಅವರೇ ಹೇಳಿದ್ದಾರೆ
ರುಕ್ಮಿಣಿ ವಸಂತ್
Follow us
ಮಂಜುನಾಥ ಸಿ.
|

Updated on: Sep 24, 2023 | 6:28 PM

ಸಪ್ತ ಸಾಗರದಾಚೆ ಎಲ್ಲೋ‘ (Sapta Sagaradache Ello) ಸಿನಿಮಾದ ಬಳಿಕ ನಟಿ ರುಕ್ಮಿಣಿ ವಸಂತ್ (Rukmini Vasanth) ಕರ್ನಾಟಕದ ಹೊಸ ಕ್ರಶ್ ಆಗಿ ಬದಲಾಗಿದ್ದಾರೆ. ಅವರ ಸರಳವಾದ ಸೌಂದರ್ಯ, ಸಂಯಮದ ನಟನೆಗೆ ಕನ್ನಡ ಪ್ರೇಕ್ಷಕರು ಮಾರು ಹೋಗಿದ್ದಾರೆ. ಹಲವು ಹುಡುಗರು, ರುಕ್ಮಿಣಿ ವಸಂತ್​ರ ಚಿತ್ರಗಳನ್ನು ಮೊಬೈಲ್ ವಾಲ್​ಪೇಪರ್ ಮಾಡಿಕೊಂಡಿದ್ದರೆ, ಹುಡುಗಿಯರು ಅವರ ಪ್ರೊಫೈಲ್ ಪಿಕ್ಚರ್​ಗಳನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ರುಕ್ಮಿಣಿ ಅವರ ಚಿತ್ರವೊಂದು ವೈರಲ್ ಆಗಿತ್ತು, ಆ ಚಿತ್ರದಲ್ಲಿ ಯುವಕನೊಬ್ಬನೊಟ್ಟಿಗೆ ರುಕ್ಮಿಣಿ ಆತ್ಮೀವಾಗಿ ಕಂಡಿದ್ದರು. ಆತ ರುಕ್ಮಿಣಿಯವರ ಬಾಯ್​ಫ್ರೆಂಡ್ ಎಂಬ ಸುದ್ದ ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು.

ರುಕ್ಮಿಣಿ ವಸಂತ್​ಗೆ ಬಾಯ್​ಫ್ರೆಂಡ್ ಇದ್ದಾನೆ ಎಂಬ ಸುದ್ದಿಗೆ ಸ್ವತಃ ರುಕ್ಮಿಣಿ ವಸಂತ್ ಪ್ರತಿಕ್ರಿಯೆ ನೀಡಿದ್ದು, ಆ ವೈರಲ್ ಆಗಿರುವ ಚಿತ್ರದಲ್ಲಿರುವುದು ನನ್ನ ಗೆಳೆಯ, ನಾನು ಇನ್ನೂ ಸಿಂಗಲ್ ಎಂದು ಸ್ಪಷ್ಟನೆ ನೀಡಿದ್ದಾರೆ. ಹೊಸಬಳಾಗಿದ್ದರೂ ನನ್ನ ಸಿನಿಮಾಗಳ ಬಗ್ಗೆ, ನನ್ನ ಖಾಸಗಿ ಜೀವನದ ಬಗ್ಗೆ ಜನ ಕೇರ್ ಮಾಡುತ್ತಿರುವುದು ಖುಷಿ ಆಗುತ್ತದೆ. ಇದೇ ಸಮಯದಲ್ಲಿ ಸುಳ್ಳು ಸುದ್ದಿಗಳು, ನೆಗೆಟಿವ್ ಕಮೆಂಟ್​ಗಳು ಬೇಸರವನ್ನು ತರಿಸುತ್ತವೆ” ಎಂದಿದ್ದಾರೆ.

”ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಬಗೆಯ ಟ್ರೋಲ್​ಗಳು ಈಗ ಸಾಮಾನ್ಯ. ಪಾಸಿಟಿವ್ ಟ್ರೋಲ್ ಅಥವಾ ಪೋಸ್ಟ್​ಗಳನ್ನು ನೋಡಿದಾಗ ಖುಷಿಯಾಗುತ್ತದೆ. ನಾವು ಮಾಡಿದ ಕೆಲಸ ಅವರಿಗೆ ಸ್ಪೂರ್ತಿ ತಂದಿದೆ. ಅವರ ಬದುಕಿನಲ್ಲಿ ಬದಲಾವಣೆಗೆ ನಮ್ಮ ಕೆಲಸ ಕಾರಣವಾಗಿದೆ ಎಂಬುದು ಖುಷಿ ಎನಿಸುತ್ತದೆ. ಆದರೆ ನೆಗೆಟಿವ್ ಟ್ರೋಲ್​ಗಳು ಬಂದಾಗ ಬೇಸರವೂ ಆಗುತ್ತದೆ. ಆದರೆ ಇಷ್ಟೋಂದು ಜನ ಪಾಸಿಟಿವ್ ಆಗಿ ಪೋಸ್ಟ್ ಹಾಕುತ್ತಿರುವಾಗ ಒಬ್ಬರ ನೆಗೆಟಿವ್ ಕಮೆಂಟ್​ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಳ್ಳಬಾರದು ಎಂದಿದ್ದಾರೆ.

ಇದನ್ನೂ ಓದಿ:ವೀರ ಯೋಧ ವಸಂತ್ ವೇಣುಗೋಪಾಲ್ ಪುತ್ರಿ ರುಕ್ಮಿಣಿ ವಸಂತ್ ಹಿನ್ನೆಲೆ ಏನು?

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಿಂದ ದೊಡ್ಡ ಯಶಸ್ಸನ್ನು ರುಕ್ಮಿಣಿ ವಸಂತ್ ಗಳಿಸಿದ್ದಾರೆ. ಇದೀಗ ಅವರ ಮತ್ತೊಂದು ಸಿನಿಮಾ ತೆರೆಗೆ ಬರಲು ತಯಾರಾಗಿದೆ. ಗಣೇಶ್ ನಟನೆಯ ‘ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ‘ಬಾನ ದಾರಿಯಲ್ಲಿ’ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು ಸಿನಿಮಾದ ಪ್ರಚಾರ ಕಾರ್ಯದಲ್ಲಿ ರುಕ್ಮಿಣಿ ನಿರತರಾಗಿದ್ದಾರೆ.

‘ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಜೊತೆಗೆ ರೀಷ್ಮಾ ನಾಣಯ್ಯ ಸಹ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾವು ಅಪ್ಪಟ ಪ್ರೇಮಕತೆಯಾಗಿದೆ. ಸಿನಿಮಾವನ್ನು ಕೀನ್ಯಾ, ಗೋವಾ ಸೇರಿದಂತೆ ಇನ್ನು ಹಲವು ಸುಂದರವಾದ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ