Radhika Pandit: ಮಾನ್ಸೂನ್​ ಆರಂಭದ ಬೆನ್ನಲ್ಲೇ ಹಳೆ ನೆನಪು ಹಂಚಿಕೊಂಡ ರಾಧಿಕಾ ಪಂಡಿತ್

ಮಳೆಗಾಲ ಎಂದರೆ ಬಹುತೇಕರಿಗೆ ಇಷ್ಟವಾಗುತ್ತದೆ. ಮಳೆ ಬರುತ್ತಿರುವಾಗ ಬಾಲ್ಕನಿಯಲ್ಲಿ ನಿಂತು ಮಳೆ ಸುರಿಯುವುದನ್ನು ನೋಡುವುದು ಅನೇಕರಿಗೆ ಖುಷಿಯ ವಿಚಾರ. ನಟಿ ರಾಧಿಕಾ ಪಂಡಿತ್​ಗೂ ಮಳೆ ಎಂದರೆ ಸಾಕಷ್ಟು ಪ್ರೀತಿಯಂತೆ.

Radhika Pandit: ಮಾನ್ಸೂನ್​ ಆರಂಭದ ಬೆನ್ನಲ್ಲೇ ಹಳೆ ನೆನಪು ಹಂಚಿಕೊಂಡ ರಾಧಿಕಾ ಪಂಡಿತ್
ರಾಧಿಕಾ ಪಂಡಿತ್

Updated on: Jun 16, 2021 | 8:36 PM

ಮಾನ್ಸೂನ್​ ಆರಂಭವಾಗಿದೆ. ಪರಿಣಾಮ, ಕರ್ನಾಟಕದ ಬಹುತೇಕ ಕಡೆಗಳಲ್ಲಿ ಮಳೆ ಆಗುತ್ತಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಈ ಸಂದರ್ಭದಲ್ಲಿ ನಟಿ ರಾಧಿಕಾ ಪಂಡಿತ್​ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಮಳೆಗಾಲ ಎಂದರೆ ಬಹುತೇಕರಿಗೆ ಇಷ್ಟವಾಗುತ್ತದೆ. ಮಳೆ ಬರುತ್ತಿರುವಾಗ ಬಾಲ್ಕನಿಯಲ್ಲಿ ನಿಂತು ಮಳೆ ಸುರಿಯುವುದನ್ನು ನೋಡುವುದು ಅನೇಕರಿಗೆ ಖುಷಿಯ ವಿಚಾರ. ನಟಿ ರಾಧಿಕಾ ಪಂಡಿತ್​ಗೂ ಮಳೆ ಎಂದರೆ ಸಾಕಷ್ಟು ಪ್ರೀತಿಯಂತೆ. ಈ ಕಾರಣಕ್ಕೆ ಅವರು ಮೋಡ ಕವಿದ ವಾತಾವರಣದಲ್ಲಿ ಬಾಲ್ಕನಿಯಲ್ಲಿ ನಿಂತು ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ, ಅದಕ್ಕೆ ಕ್ಯಾಪ್ಶನ್​ಕೂಡ ನೀಡಿದ್ದಾರೆ.

‘ಹೆಲ್ಲೋ ಮಾನ್ಸೂನ್​. ಮಳೆ ಅನ್ನೋದು ತುಂಬಾನೇ ಸುಂದರವಾದುದು. ಸಂತೋಷವಿರಲಿ ಅಥವಾ ದುಃಖವೇ ಇರಲಿ ಒಟ್ಟಿನಲ್ಲಿ ಮಳೆ ದೃಶ್ಯ ಇಲ್ಲದ ಸಿನಿಮಾದಲ್ಲಿ ನಟಿಸಿದ್ದು ನನಗೆ ನೆನಪಿಲ್ಲ’ ಎಂದು ತಮ್ಮ ವೃತ್ತಿ ಜೀವನವನ್ನು ನೆನಪಿಸಿಕೊಂಡಿದ್ದಾರೆ. ಈ ಮೂಲಕ ಮಳೆ ಎಂದರೆ ಎಷ್ಟು ಪ್ರೀತಿ ಎಂಬುದನ್ನು ರಾಧಿಕಾ ನೆನೆದಿದ್ದಾರೆ.

ಇತ್ತೀಚೆಗೆ ಸಿನಿಮಾ ಕಾರ್ಮಿಕರಿಗೆ ಯಶ್ ದೊಡ್ಡ ಮೊತ್ತದ ಸಹಾಯ ಮಾಡಿದ್ದರು. ಇದಾದ ಬೆನ್ನಲ್ಲೇ ರಾಧಿಕಾ ಅಭಿಮಾನಿಗಳಲ್ಲಿ ಭರವಸೆ ಮೂಡುವ ರೀತಿಯಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದರು. ‘ಇದು ಕಷ್ಟದ ಸಮಯ. ನಾವೆಲ್ಲರೂ ತುಂಬ ನೋವು ಅನುಭವಿಸಿದ್ದೇವೆ. ಆತ್ಮೀಯರನ್ನು ಕಳೆದುಕೊಂಡಿದ್ದೇವೆ. ನಮ್ಮೆಲ್ಲರಿಗೂ ಭಯ, ಹತಾಶೆ ಕಾಡುತ್ತಿದೆ. ನಾಳೆ ಏನಾಗುತ್ತದೋ ಎಂಬ ಆತಂಕ ಇದೆ ಎಂಬುದು ನನಗೆ ತಿಳಿದಿದೆ. ಆದರೆ ದಯವಿಟ್ಟು ಒಂದು ಮಾತನ್ನು ಪ್ರತಿ ದಿನ ನಿಮಗೆ ನೀವೇ ಹೇಳಿಕೊಳ್ಳಿ. ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನಾವು ಭರವಸೆ ಇಡುತ್ತೇವೆ, ನಂಬಿಕೆ ಇಡುತ್ತೇವೆ, ಜೊತೆಯಾಗಿ ಹೋರಾಡುತ್ತೇವೆ. ಎಲ್ಲರೂ ಜೊತೆಯಾಗಿ ನಿಂತು ಈ ಕಷ್ಟದಿಂದ ಹೊರಬರುತ್ತೇವೆ’ ಎಂದು ರಾಧಿಕಾ ಪಂಡಿತ್​ ಬರೆದುಕೊಂಡಿದ್ದರು.

ಇದನ್ನೂ ಓದಿ: Radhika Pandit: ಯಶ್​ ಕೋಟ್ಯಂತರ ರೂಪಾಯಿ ಹಂಚಿದ ಬೆನ್ನಲ್ಲೇ ರಾಧಿಕಾ ಪಂಡಿತ್​ ಕಡೆಯಿಂದ ಬಂತು ಭರವಸೆಯ ಮಾತು

Loading...
Unable to load recommendations.
Follow Us