AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ’ಕ್ಕೆ 4 ವರ್ಷ: ರಿಷಬ್ ಪೋಸ್ಟ್‌ನಲ್ಲಿ ಹೊಂಬಾಳೆ ಹೆಸರಿಲ್ಲ, ಹೊಂಬಾಳೆ ಪೋಸ್ಟ್‌ನಲ್ಲಿ ರಿಷಬ್ ಇಲ್ಲ

‘ಕಾಂತಾರ’ ಸಿನಿಮಾ ತೆರೆಕಂಡು ನಾಲ್ಕು ವರ್ಷಗಳು ಪೂರೈಸಿವೆ. ಈ ಸಂಭ್ರಮದ ವೇಳೆಯಲ್ಲೂ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಡುವಿನ ವೈಮನಸ್ಸಿನ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಇಬ್ಬರೂ ಪರಸ್ಪರರ ಹೆಸರುಗಳನ್ನು ಉಲ್ಲೇಖಿಸದೇ ಇರುವುದು, ಇವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲವೇ ಎಂಬ ಅನುಮಾನವನ್ನು ದಟ್ಟವಾಗಿಸಿದೆ.

‘ಕಾಂತಾರ’ಕ್ಕೆ 4 ವರ್ಷ: ರಿಷಬ್ ಪೋಸ್ಟ್‌ನಲ್ಲಿ ಹೊಂಬಾಳೆ ಹೆಸರಿಲ್ಲ, ಹೊಂಬಾಳೆ ಪೋಸ್ಟ್‌ನಲ್ಲಿ ರಿಷಬ್ ಇಲ್ಲ
ರಿಷಬ್-ಹೊಂಬಾಳೆImage Credit source: Hombale Films
ರಾಜೇಶ್ ದುಗ್ಗುಮನೆ
|

Updated on:Oct 01, 2026 | 7:06 AM

Share

ಮುಖ್ಯಾಂಶಗಳು

  • ‘ಕಾಂತಾರ’ ಸಿನಿಮಾ ತೆರೆಕಂಡು ನಾಲ್ಕು ವರ್ಷ
  • ಸಂಭ್ರಮದ ನಡುವೆಯೂ ಕಾವೇರಿದ ವೈಮನಸ್ಸಿನ ವದಂತಿ
  • ಸೋಶಿಯಲ್ ಮೀಡಿಯಾ ಪೋಸ್ಟ್ ನೀಡಿದ ಸುಳಿವು

ರಿಷಬ್ ಶೆಟ್ಟಿ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ’ ಸಿನಿಮಾ 2022ರ ಸೆಪ್ಟೆಂಬರ್ 30ರಂದು ರಿಲೀಸ್ ಆಯಿತು. ಈ ಅದ್ಭುತ ಚಿತ್ರ ತೆರೆಗೆ ಬಂದು ನಾಲ್ಕು ವರ್ಷ. ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಹಲವು ದಾಖಲೆ ಮಾಡಿತು. ಕನ್ನಡ ಚಿತ್ರರಂಗದ ಪಾಲಿಗೆ ಈ ಸಿನಿಮಾ ವಿಶೇಷ ಸ್ಥಾನ ಪಡೆದುಕೊಂಡಿದೆ. ಆ ಬಳಿಕ ಬಂದ ಚಿತ್ರದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೂಡ ಇದೇ ರೀತಿಯ ದಾಖಲೆ ಮಾಡಿತು. ಆ ಬಳಿಕ ಹೊಂಬಾಳೆ ಹಾಗೂ ರಿಷಬ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಮಾತು ಕೇಳಿ ಬಂತು. ಇದು ಈಗ ನಿಜವಾಗಿದೆ. ನಾಲ್ಕು ವರ್ಷಗಳ ಸಂಭ್ರಮದ ಸಮಯದಲ್ಲಿ ಈ ವಿಷಯ ಬಹುತೇಕ ಖಚಿತವಾಗಿದೆ.

‘ಕಾಂತಾರ’ ಚಿತ್ರಕ್ಕೆ ನಾಲ್ಕು ವರ್ಷ ಪೂರ್ಣಗೊಂಡ ಸಂಭ್ರಮದಲ್ಲಿ ಪೋಸ್ಟ್ ಮಾಡಿರುವ ರಿಷಬ್, ‘ಮನದಾಳದ ಕಥೆಯನ್ನು ಪರದೆ ಮೇಲೆ ತರಲು ನನ್ನೊಂದಿಗೆ ಹೆಜ್ಜೆ ಹಾಕಿದ, ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪರಿಶ್ರಮ, ನಂಬಿಕೆ ಮತ್ತು ಪ್ರೀತಿಯೇ ಕಾಂತಾರವನ್ನು ನನಗಿಂತ ದೊಡ್ಡದಾಗಿಸಿತು. ನನ್ನ ಈ ಪ್ರಯತ್ನವನ್ನು ಕೊಂಡಾಡಿ, ಅದನ್ನು ಗಡಿದಾಟಿಸಿ , ಕನ್ನಡದ ಹೆಮ್ಮೆಯ ಸಿನಿಮಾವಾಗಿ ಇಡೀ ಪ್ರಪಂಚಕ್ಕೆ ತಲುಪಿಸಿದ ಪ್ರತಿಯೊಬ್ಬ ಪ್ರೇಕ್ಷಕನಿಗೂ ನಾನು ಎಂದೆಂದಿಗೂ ಚಿರಋಣಿ’ ಎಂದು ರಿಷಬ್ ಪೋಸ್ಟ್ ಮಾಡಿದ್ದಾರೆ.

‘ಕಾಂತಾರಕ್ಕೆ 4 ವರ್ಷ. ಈ ಪಯಣವನ್ನು ಇಷ್ಟು ಸುಂದರವಾಗಿಸಿದ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು’ ಎಂದು ಹೊಂಬಾಳೆ ಪೋಸ್ಟ್ ಮಾಡಿದೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ, ರಿಷಬ್ ಶೆಟ್ಟಿ ಪೋಸ್ಟ್​​ನಲ್ಲಿ ಹೊಂಬಾಳೆ ಫಿಲ್ಮ್ಸ್ ಹೆಸರಿಲ್ಲ. ಪೋಸ್ಟರ್​​​ನಲ್ಲಿ ಎಲ್ಲಿಯೂ ಹೊಂಬಾಳೆ ಹೆಸರು ಉಲ್ಲೇಖ ಆಗಿಲ್ಲ. ಇನ್ನು, ಹೊಂಬಾಳೆ ಮಾಡಿರುವ ಪೋಸ್ಟ್​​ನಲ್ಲಿಯೂ ರಿಷಬ್ ಹೆಸರು ಉಲ್ಲೇಖ ಆಗಿಲ್ಲ. ಇಬ್ಬರ ಮಧ್ಯೆ ಸರಿ ಇಲ್ಲ ಎಂಬುದು ಇದರಲ್ಲಿ ಸ್ಪಷ್ಟವಾಗಿದೆ.

ಇದನ್ನೂ ಓದಿ:‘ಕಾಂತಾರ’ ಕಲೆಕ್ಷನ್ ಮೀರಿಸಿದ ‘ಹನುಮಾನ್ ಅಂಶ್’: ವಿಶ್ವಾದ್ಯಂತ 400 ಕೋಟಿ ರೂಪಾಯಿ ಗಳಿಕೆ 

‘ಕಾಂತಾರ: ಚಾಪ್ಟರ್ 1’ ರಿಲೀಸ್ ಬಳಿಕ ಈ ರೀತಿಯ ಚರ್ಚೆ ಜೋರಾಗಿತ್ತು. ಈಗ ಅದು ಬಹುತೇಕ ಖಚಿತ ಎಂಬಂತಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:03 am, Thu, 1 October 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More