Raghu Dixit: ಸೆಲ್ಫಿ ಕೇಳಿದಾಗ ರಘು ದೀಕ್ಷಿತ್ ಸಿಟ್ಟು ಮಾಡಿಕೊಳ್ಳೋದೇಕೆ? ಗಾಯಕನ ಮನದಾಳದ ಮಾತು

|

Updated on: Jun 02, 2023 | 7:03 AM

ಹಲವು ಕಡೆಗಳಲ್ಲಿ ರಘು ದೀಕ್ಷಿತ್ ಅವರು ಕಾರ್ಯಕ್ರಮ ನೀಡುತ್ತಾರೆ. ಅವರು ಇತ್ತೀಚೆಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು.

Raghu Dixit: ಸೆಲ್ಫಿ ಕೇಳಿದಾಗ ರಘು ದೀಕ್ಷಿತ್ ಸಿಟ್ಟು ಮಾಡಿಕೊಳ್ಳೋದೇಕೆ? ಗಾಯಕನ ಮನದಾಳದ ಮಾತು
ರಘು ದೀಕ್ಷಿತ್
Follow us on

ಸೆಲೆಬ್ರಿಟಿಗಳು ಕಂಡಾಗ ಫ್ಯಾನ್ಸ್ ಸೆಲ್ಫಿಗೆ ಮುತ್ತಿಕೊಳ್ಳೋದು ಸಾಮಾನ್ಯ. ಆದರೆ, ಕೆಲವೊಮ್ಮೆ ಅವರು ಚಿಂತೆಯಲ್ಲಿ ಇದ್ದರೆ ಸೆಲ್ಫಿ ಆಫರ್ ರಿಜೆಕ್ಟ್ ಮಾಡಬಹುದು. ಸಿಟ್ಟಲ್ಲಿ ಅಭಿಮಾನಿಗಳ ವಿರುದ್ಧ ಕಿಡಿಕಾರಬಹುದು. ರಘು ದೀಕ್ಷಿತ್ (Raghu Dixit) ಕೂಡ ಇದೇ ರೀತಿ ಮಾಡಿದ ಕೆಲವು ಉದಾಹರಣೆ ಇದೆ. ಹೀಗೇಕೆ ಎನ್ನುವ ಪ್ರಶ್ನೆಗೆ ಸ್ವತಃ ಅವರೇ ಉತ್ತರ ನೀಡಿದ್ದಾರೆ. ಇನ್​ಸ್ಟಾಗ್ರಾಮ್ (Instagram) ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡು ರಘು ದೀಕ್ಷಿತ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ವಿಡಿಯೋಗೆ ಬಗೆಬಗೆಯಲ್ಲಿ ಕಮೆಂಟ್ ಬಂದಿದೆ.

ರಘು ದೀಕ್ಷಿತ್ ಅವರು ಹಲವು ಸೂಪರ್ ಹಿಟ್ ಗೀತಿಗಳನ್ನು ನೀಡಿ ಫೇಮಸ್ ಆಗಿದ್ದಾರೆ. ಅವರ ಕಂಠದಿಂದ ಮೂಡಿಬಂದ ಹಲವು ಹಾಡುಗಳಿಗೆ ಈಗಲೂ ಬೇಡಿಕೆ ಇದೆ. ಕನ್ನಡ ಮಾತ್ರವಲ್ಲದೆ, ಹಿಂದಿಯಲ್ಲೂ ಅವರು ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕನ್ನಡದಲ್ಲಿ 2020ರಲ್ಲಿ ರಿಲೀಸ್ ಆದ ‘ಲವ್ ಮಾಕ್ಟೇಲ್​’ ಚಿತ್ರವೇ ಕೊನೆ, ಇದಾದ ಬಳಿಕ ಅವರು ಯಾವುದೇ ಕನ್ನಡ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿಲ್ಲ. ಹಲವು ಕಡೆಗಳಲ್ಲಿ ರಘು ದೀಕ್ಷಿತ್ ಅವರು ಕಾರ್ಯಕ್ರಮ ನೀಡುತ್ತಾರೆ. ಅವರು ಇತ್ತೀಚೆಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು.

‘ನೀವು ಸೆಲ್ಫಿ ಕೇಳಿದ ಅಭಿಮಾನಿಗಳಿಗೆ ಎಂದಿಗೂ ತಿರಸ್ಕಾರ ಮಾಡಿಲ್ಲ. ಆದರೆ, ಕೆಲವೊಮ್ಮೆ ಅವರ ಮನವಿ ರಿಜೆಕ್ಟ್ ಮಾಡಿದ್ರಿ ಇದಕ್ಕೆ ಕಾರಣ?’ ಎನ್ನುವ ಪ್ರಶ್ನೆ ರಘು ದೀಕ್ಷಿತ್​ಗೆ ಎದುರಾಗುತ್ತದೆ. ಇದಕ್ಕೆ ಉತ್ತರಿಸುವ ಅವರು, ‘ಜನರು ಬಂದು ನಮಸ್ತೆ, ನಮಸ್ಕಾರ ಎಂದು ಹೇಳಿ, ತಮ್ಮನ್ನು ತಾವು ಪರಿಚಯಿಸಿಕೊಂಡು ನಂತರ ಸೆಲ್ಫಿ ಕೇಳಬೇಕು. ಆದರೆ, ಕೆಲವರು ಬರುತ್ತಾರೆ, ಅವರಿಗೆ ನನ್ನ ಜೊತೆ ಮಾತನಾಡುವ ವ್ಯವಧಾನವೂ ಇರುವುದಿಲ್ಲ. ಅವರಿಗೆ ಬೇಕಾಗಿರೋದು ಸೆಲ್ಫಿ ಮಾತ್ರ. ಸೋಶಿಯಲ್ ಮೀಡಿಯಾದಲ್ಲಿ ಶೋಆಫ್ ಮಾಡಲು’ ಎಂದು ಬೇಸರ ತೋಡಿಕೊಂಡಿದ್ದಾರೆ ಅವರು.

ಇದನ್ನೂ ಓದಿ: ‘ಒಳ್ಳೆಯ ಕೆಲಸಕ್ಕೆ ಇದು ಸ್ಫೂರ್ತಿ’; ನವನಕ್ಷತ್ರ ಸನ್ಮಾನ ಕುರಿತು ರಘು ದೀಕ್ಷಿತ್​ ಮಾತು

‘ಕೆಲವರನ್ನು ನಾನು ಮನ್ನಿಸುತ್ತೇನೆ. ಈ ರೀತಿ ಮಾಡಿದ ಬಳಿಕವೂ ಸೆಲ್ಫಿ ಕೊಡುತ್ತೇನೆ. ಆದರೆ, ಕೆಲವೊಮ್ಮೆ ತುಂಬಾನೇ ಕಿರಿಕಿರಿ ಎನಿಸಿಬಿಡುತ್ತದೆ. ಆಗ ಸೆಲ್ಫಿ ಬೇಡಿಕೆ ರಿಜೆಕ್ಟ್ ಮಾಡುತ್ತೇನೆ. ಮುಂದಿನ ಬಾರಿ ಸಿಕ್ಕಾಗ ನಮಸ್ತೆ ಅಥವಾ ಹೆಲೋ ಹೇಳಿ. ನಿಮ್ಮನ್ನು ನೀವು ಪರಿಚಯಿಸಿಕೊಳ್ಳಿ. ಆ ಬಳಿಕ ಸೆಲ್ಫಿ ಕೇಳಿ’ ಎಂದಿದ್ದಾರೆ ರಘು ದೀಕ್ಷಿತ್. ಕೆಲವರು ಇದು ಅತಿ ಆಯ್ತು ಎಂದಿದ್ದಾರೆ. ‘ಕೆಲವರಿಗೆ ನಮಸ್ತೆ ಹೇಳೋದೇ ಅತಿ ಆಗುತ್ತದೆ. ಏನೂ ಮಾಡೋಕೆ ಆಗಲ್ಲ’ ಎಂದು ಉತ್ತರಿಸಿದ್ದಾರೆ ರಘು ದೀಕ್ಷಿತ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ