ಹಿರಿಯ ನಟ ಲೋಹಿತಾಶ್ವ ಆರೋಗ್ಯ ಈಗ ಹೇಗಿದೆ? ಅಪ್ಪನ ಹೆಲ್ತ್​ ಅಪ್​ಡೇಟ್​ ಕೊಟ್ಟ ಪುತ್ರ

ಹಿರಿಯ ನಟ ಲೋಹಿತಾಶ್ವ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರ ಆರೋಗ್ಯದ ಸ್ಥಿತಿಗತಿ ಬಗ್ಗೆ ಪುತ್ರ ಟಿವಿ9ಗೆ ಮಾಹಿತಿ ನೀಡಿದ್ದಾರೆ.

ಹಿರಿಯ ನಟ ಲೋಹಿತಾಶ್ವ ಆರೋಗ್ಯ ಈಗ ಹೇಗಿದೆ? ಅಪ್ಪನ ಹೆಲ್ತ್​ ಅಪ್​ಡೇಟ್​ ಕೊಟ್ಟ ಪುತ್ರ
ಲೋಹಿತಾಶ್ವ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Oct 14, 2022 | 9:05 PM

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸ್ಯಾಂಡಲ್​ವುಡ್​ನ ಹಿರಿಯ ನಟ ಲೋಹಿತಾಶ್ವ (Lohitashwa) ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಈ ಬಗ್ಗೆ ಟಿವಿ9ಗೆ ಹಿರಿಯ ನಟ ಲೋಹಿತಾಶ್ವ ಪುತ್ರ ರಾಹುಲ್​ ಮಾಹಿತಿ ನೀಡಿದ್ದಾರೆ

ಲೋಹಿತಾಶ್ವ ಆರೋಗ್ಯದಲ್ಲಿ ನಿನ್ನೆಯಿಂದ(ಅ.13) ಸ್ವಲ್ಪ ಚೇತರಿಕೆ ಕಂಡುಬಂದಿದ್ದು, ಕಣ್ಣು ಬಿಟ್ಟು ನೋಡಿದ್ದಾರೆ. ಅಲ್ಲದೇ ಇಂದು ವೆಂಟಿಲೇಟರ್​ ರಿಮೂವ್​ ಮಾಡಲಾಗಿದ್ದು. ಸಹಜವಾಗಿ ಉಸಿರಾಡುತ್ತಿದ್ದಾರೆ ಎಂದು ಲೋಹಿತಾಶ್ವ ಪುತ್ರ ರಾಹುಲ್​ ಸ್ಪಷ್ಟಪಡಿಸಿದ್ದಾರೆ.

ಐಸಿಯುನಲ್ಲಿರುವ ಹಿರಿಯ ನಟ ಲೋಹಿತಾಶ್ವ ಪರಿಸ್ಥಿತಿ ಈಗ ಹೇಗಿದೆ? ಹೆಲ್ತ್​ ಅಪ್​ಡೇಟ್​ ನೀಡಿದ ವೈದ್ಯರು

ಸದ್ಯ ಇನ್ನು ಎರಡು ದಿನಗಳ ಕಾಲ ವೈದ್ಯರು ಅಬ್ಸರ್ವೆಷನ್ ನಲ್ಲಿ ಇಟ್ಟಿದ್ದಾರೆ ಎಂದು ರಾಹುಲ್ ತಿಳಿಸಿದ್ರು.

ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯ ಬಳಲುತ್ತಿದ್ದ ಲೋಹಿತಾಶ್ವ ಅವರನ್ನು ಅಕ್ಟೋಬರ್​ 4ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಸಂದರ್ಭದಲ್ಲಿ ಅವರ ಪರಿಸ್ಥಿತಿ ಮನ್ನಷ್ಟು ಬಿಗಡಾಯಿಸಿತು. ಇದರಿಂದ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು.

ಇದೀಗ ಅವರ ಪುತ್ರ ಹೇಳಿದಂತೆ ಲೋಹಿತಾಶ್ವ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದ್ದು, ಅವರು ವೆಂಟಿಲೇಟರ್​ ಸಹಾಯವಿಲ್ಲದೇ ಉಸಿರಾಡುತ್ತಿದ್ದಾರೆ. ಹಿರಿಯ ನಟ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಆಪ್ತರು ಮತ್ತು ಸೆಲಬ್ರಿಟಿಗಳು ಪ್ರಾರ್ಥಿಸುತ್ತಿದ್ದು, ಇದೀಗ ಅವರ ಪ್ರಾರ್ಥನೆ ಫಲಿಸಿದೆ.

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ