‘ಒಳ್ಳೆಯ ಕಥೆ ಇದ್ರೆ ಹೇಳಿ ಸಿನಿಮಾ ಮಾಡೋಣ’; ರಾಜ್​ ಬಿ ಶೆಟ್ಟಿಗೆ ಅಕ್ಷಯ್ ಕುಮಾರ್ ಬುಲಾವ್

ರಾಜ್ ಬಿ ಶೆಟ್ಟಿ ಅವರ ‘ಸು ಫ್ರಮ್ ಸೋ’ ಚಿತ್ರ ಭಾರೀ ಯಶಸ್ಸು ಕಂಡಿದೆ. ಅವರು ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಸಿನಿಮಾ ಸಹಯೋಗದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

‘ಒಳ್ಳೆಯ ಕಥೆ ಇದ್ರೆ ಹೇಳಿ ಸಿನಿಮಾ ಮಾಡೋಣ’; ರಾಜ್​ ಬಿ ಶೆಟ್ಟಿಗೆ ಅಕ್ಷಯ್ ಕುಮಾರ್ ಬುಲಾವ್
ಅಕ್ಷಯ್-ರಾಜ್

Updated on: Sep 13, 2025 | 12:33 PM

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಚಿತ್ರದ ಬಳಿಕ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಈಗ ರಾಜ್ ಬಿ ಶೆಟ್ಟಿ ಅವರು ಬಾಲಿವುಡ್​ ನಟ ಅಕ್ಷಯ್ ಕುಮಾರ್ (Akshay Kumar) ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ರಾಜ್ ಹಾಗೂ ಅಕ್ಷಯ್ ಭೇಟಿಯ ಫೋಟೋಗಳು ವೈರಲ್ ಆಗಿವೆ.

‘ಸು ಫ್ರಮ್ ಸೋ’ ಸಿನಿಮಾ ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಮೆಚ್ಚುಗೆ ಪಡೆದಿದೆ. ಈ ಚಿತ್ರ ಹಿಂದಿಗೂ ರಿಮೇಕ್ ಆಗುತ್ತಿದ್ದು, ಇದರ ಹಕ್ಕು ಮಾರಾಟ ಆಗಿದೆ. ಈ ಮೊದಲು ‘ಸು ಫ್ರಮ್ ಸೋ’ ಸಿನಿಮಾ ಗೆಲುವಿನ ಬಳಿಕ ಸಿನಿಮಾ ನಿರ್ದೇಶಕ ಜೆಪಿ ಅವರು ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ಭೇಟಿ ಮಾಡಿದ್ದರು. ಈಗ ರಾಜ್ ಅವರು ಅಕ್ಷಯ್​ ಕುಮಾರ್​ನ ಭೇಟಿ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಅವರು ‘ಹೈವಾನ್’ ಹೆಸರಿನ ಹಿಂದಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕನ್ನಡದ ಕೆವಿಎನ್ ನಿರ್ಮಾಣ ಮಾಡುತ್ತಿದೆ. ಸಿನಿಮಾದ ಶೂಟ್ ಊಟಿಯಲ್ಲಿ ನಡೆಯುತ್ತಿದೆ. ಚಿತ್ರದ ಸೆಟ್ಟಲ್ಲಿ ರಾಜ್ ಬಿ  ಶೆಟ್ಟಿ ಅವರು ಅಕ್ಷಯ್​ನ ಭೇಟಿ ಆಗಿದ್ದಾರೆ.

ಇದನ್ನೂ ಓದಿ
ಆ ಒಂದು ಶಬ್ದ ಬಳಕೆ ಮಾಡಿದ್ದಕ್ಕೆ ಆಕ್ರೋಶ; ಕಪಿಲ್ ಶೋ ನಿಲ್ಲಿಸೋ ಎಚ್ಚರಿಕೆ
‘ನೀವು ಊಹಿಸಿದಂತೆ ಕಥೆ ನಡೆಯಲ್ಲ’; ‘ಕರ್ಣ’ ಬಗ್ಗೆ ಕಿರಣ್ ರಾಜ್ ಹಿಂಟ್
ಜೀ ಕನ್ನಡ ವೇದಿಕೆ ಮೇಲೆ ಅನುಶ್ರೀ ಮಡಿಲು ತುಂಬಿದ ತಾರಾ; ಮಗಳಂತೆ ಭಾವುಕ
‘ತಾಳ್ಮೆಯಿಂದ ಕಾದಿದ್ದಕ್ಕೆ ಅರ್ಥಪೂರ್ಣವಾದ ತಾಳಿ ಬಿದ್ದಿದೆ’; ಅನುಶ್ರೀ

‘ಸು ಫ್ರಮ್ ಸೋ’ ನೋಡಿ ಅಕ್ಷಯ್ ಕುಮಾರ್ ಕೊಂಡಾಡಿದ್ದಾರೆ. ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ ಎಂದು ರಾಜ್ ಬಿ. ರಾಜ್ ಬಿ ಶೆಟ್ಟಿ ಅವರನ್ನು ಅಕ್ಷಯ್ ಕುಮಾರ್‌ ಕೇಳಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕನ್ನಡಿಗರ ಪಾಲಿಗೆ ವಿಶೇಷ ಹೆಮ್ಮೆ ತಂದಿದೆ.

ಇದನ್ನೂ ಓದಿ: ‘ಗುಟ್ಕಾ ತಿನ್ನೋದು ಕೆಟ್ಟದ್ದು’: ಜನರಿಗೆ ಸಂದೇಶ ನೀಡಿದ ನಟ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಅವರು ಬಾಲಿವುಡ್​ನ ಸ್ಟಾರ್ ಹೀರೋ. ಹಲವು ಸಿನಿಮಾ ಕೆಲಸಗಳನ್ನು ಅವರು ಒಟ್ಟಾಗಿ ಮಾಡುತ್ತಾರೆ. ಈಗಾಗಲೇ ರಾಜ್ ಅವರು ಸ್ಟಾರ್​ಗಳ ಜೊತೆ ಸಿನಿಮಾ ಮಾಡೋದಿಲ್ಲ ಎಂದು ಹೇಳಿಯಾಗಿದೆ. ಅವರ ಕಾಲ್​ಶೀಟ್​ಗಾಗಿ ಒದ್ದಾಡೋದು ಅವರಿಗೆ ಇಷ್ಟವಿಲ್ಲವಂತೆ. ಹೀಗಾಗಿ, ಅವರು ಅಕ್ಷಯ್ ಜೊತೆ ಸಿನಿಮಾ ಮಾಡೋದು ಅನುಮಾನ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 12:31 pm, Sat, 13 September 25