‘ಬಾವ ಬಂದರೋ..’ ಹಾಡಿಗೆ ಈಗೊಂದು ಕಳೆ ಬಂತು; ರಾಜ್ ಬಿ. ಶೆಟ್ಟಿ ಗ್ಯಾಂಗ್​ನಿಂದ ಭರ್ಜರಿ ಸ್ಟೆಪ್

‘ಸು ಫ್ರಮ್ ಸೋ’ ಸಿನಿಮಾಗೆ ದೊಡ್ಡ ಯಶಸ್ಸು ಸಿಕ್ಕಿದೆ. ಚಿತ್ರದ ‘ಬಾವ ಬಂದರೋ..’ ಹಾಡಿಗೆ ರಾಜ್ ಬಿ ಶೆಟ್ಟಿ ಮತ್ತು ತಂಡ ಸ್ಟೆಪ್ಸ್ ಹಾಕಿದೆ. ಈ ವಿಡಿಯೋ ವೈರಲ್ ಆಗಿದೆ. ಚಿತ್ರದ ಯಶಸ್ಸು ಮತ್ತು ಈ ಹಾಡಿನ ಜನಪ್ರಿಯತೆಯಿಂದ ನಿರ್ಮಾಪಕರು ಖುಷಿಯಾಗಿದ್ದಾರೆ.

‘ಬಾವ ಬಂದರೋ..’ ಹಾಡಿಗೆ ಈಗೊಂದು ಕಳೆ ಬಂತು; ರಾಜ್ ಬಿ. ಶೆಟ್ಟಿ ಗ್ಯಾಂಗ್​ನಿಂದ ಭರ್ಜರಿ ಸ್ಟೆಪ್
ರಾಜ್ ಬಿ ಶೆಟ್ಟಿ ಆ್ಯಂಡ್ ಟೀಂ

Updated on: Aug 01, 2025 | 7:01 AM

‘ಸು ಫ್ರಮ್ ಸೋ’ ಸಿನಿಮಾ (Su From So) ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರದ ಸಕ್ಸಸ್​ನಕದ ರಾಜ್ ಬಿ ಶೆಟ್ಟ ಹಾಗೂ ಟೀಂ ಖುಷಿಪಟ್ಟಿದೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಜೆಪಿ ತುಮಿನಾಡ್ ಅವರು ಸಾಕಷ್ಟು ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರದಲ್ಲಿ ಬರೋ ‘ಬಂದರು ಬಂದರು ಬಾವ ಬಂದರು..’ ಹಾಡಿಗೆ ಈಗ ತೂಕ ಬಂದಿದೆ. ಇದಕ್ಕೆ ಕಾರಣ ರಾಜ್ ಬಿ. ಶೆಟ್ಟಿ ಹಾಗೂ ಗ್ಯಾಂಗ್ ಈ ಹಾಡಿಗೆ ಸ್ಟೆಪ್ ಹಾಕಿದೆ. ಈ ವಿಡಿಯೋ ವೈರಲ್ ಆಗಿದೆ.

ಸಿನಿಮಾದಲ್ಲಿ ಬರೋ ‘ಬಾವ’ ಪಾತ್ರ ತುಂಬಾನೇ ಪ್ರಾಮುಖ್ಯತೆ ಪಡೆದಿದೆ. ತೆರೆಮೇಲೆ ಇದ್ದಷ್ಟು ಹೊತ್ತು ನಗಿಸುವ ಕೆಲಸವನ್ನು ಈ ಪಾತ್ರ ಮಾಡುತ್ತದೆ. ‘ಬಂದರು ಬಂದರು ಬಾವ ಬಂದರು..’ ಹಾಡನ್ನು ವಿಶೇಷವಾಗಿ ಬಾವನಿಗಾಗಿಯೇ ಸಂಯೋಜಿಸಲಾಗಿದೆ. ಈ ಕಾರಣದಿಂದಲೇ ಬಾವನ ಎಂಟ್ರಿ ವಿಶೇಷ ಎನಿಸಿಕೊಂಡಿದೆ. ಅಲ್ಲದೆ, ಸಾಂಗ್ ಕೂಡ ಫೇಮ್ ಆಗಿದೆ.

ಇದನ್ನೂ ಓದಿ
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?
ಈ ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸಿ
ಫೇಕ್ ಅಕೌಂಟ್ ಮಾಡಿದವರಿಗೆ ಸೂರ್ಯವಂಶ ಸ್ಟೈಲ್​ನಲ್ಲಿ ಎಸ್. ನಾರಾಯಣ್ ಕೌಂಟರ್
ವಾರದ ಮಧ್ಯವೂ ‘ಸು ಫ್ರಮ್ ಸೋ’ ಅಬ್ಬರದ ಕಲೆಕ್ಷನ್; ಹಲವು ದಾಖಲೆಗಳು ಉಡೀಸ್

ರಾಜ್ ಬಿ ಶೆಟ್ಟಿ ಆ್ಯಂಡ ಟೀಂನ ಡ್ಯಾನ್ಸ್

ಈಗ ರಾಜ್ ಬಿ ಶೆಟ್ಟಿ, ಶನೀಲ್ ಗೌತಮ್ ಹಾಗೂ ನಟ, ನಿರ್ದೇಶಕ ಜೆಪಿ ತುಮಿನಾಡ ಅವರು ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಯಾವುದೇ ಕೊರಿಯೋಗ್ರಫಿ ಇಲ್ಲದೆ, ತಮ್ಮದೆ ಸ್ಟೈಲ್​ನಲ್ಲಿ ರಸ್ತೆ ಮೇಲೆ ‘ಬಾವ’ ಹಾಡಿಗೆ ಸ್ಟೆಪ್ ಹಾಕಿದ್ದಾರೆ ಇವರು. ಈ ವಿಡಿಯೋ ಸಖತ್ ವೈರಲ್ ಆಗಿ ಗಮನ ಸೆಳೆದಿದೆ.

ಇದನ್ನೂ ಓದಿ: ಕಾಲೇಜು ಹೋಗೋ ವಯಸ್ಸಲ್ಲಿ ‘ಸು ಫ್ರಮ್ ಸೋ’ಗೆ ಮ್ಯೂಸಿಕ್​ ಮಾಡಿದ ​ಸುಮೇಧ್; ಇಲ್ಲಿದೆ ಹಿನ್ನೆಲೆ

‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಯಿತು. ಒಂದು ವಾರದಲ್ಲಿ ಸಿನಿಮಾ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿ ಆಗಿದೆ. ಈ ಚಿತ್ರದಿಂದ ನಿರ್ಮಾಪಕರ ಮೊಗದಲ್ಲಿ ನಗುವಿನ ಅಲೆ ಮೂಡಿದೆ. ಈ ಚಿತ್ರದ ಅಬ್ಬರ ಇನ್ನೂ ಕೆಲವು ದಿನಗಳು ಮುಂದುವರಿಯುವ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಾಸ್ಯದ ಜೊತೆಗೆ ಒಂದು ಗಂಭಿರವಾದ ಸಂದೇಶವನ್ನು ಕೂಡ ಹೇಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us