ರಾಜ್ ಬಿ. ಶೆಟ್ಟಿ ಮುಂದಿನ ಸಿನಿಮಾ ‘ಜುಗಾರಿ ಕ್ರಾಸ್‌’: ಗುರುದತ್ತ ಗಾಣಿಗ ನಿರ್ದೇಶನ

‘ಸು ಫ್ರಮ್ ಸೋ’ ಸಿನಿಮಾದ ಯಶಸ್ಸಿನ ಬಳಿಕ ರಾಜ್ ಬಿ. ಶೆಟ್ಟಿ ಹೊಸ ಸಿನಿಮಾ ಘೋಷಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಆಧಾರಿತ ‘ಜುಗಾರಿ ಕ್ರಾಸ್’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ನಟಿಸಲಿದ್ದಾರೆ. ‘ಕರಾವಳಿ’ ಖ್ಯಾತಿಯ ಗುರುದತ್ತ ಗಾಣಿಗ ಅವರು ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.

ರಾಜ್ ಬಿ. ಶೆಟ್ಟಿ ಮುಂದಿನ ಸಿನಿಮಾ ‘ಜುಗಾರಿ ಕ್ರಾಸ್‌’: ಗುರುದತ್ತ ಗಾಣಿಗ ನಿರ್ದೇಶನ
Jugari Cross, Raj B Shetty

Updated on: Oct 16, 2025 | 8:54 PM

ಪೂರ್ಣಚಂದ್ರ ತೇಜಸ್ವಿ ‘ಜುಗಾರಿ ಕ್ರಾಸ್’ (Jugari Cross) ಕಥೆಯನ್ನು ಸಿನಿಮಾದ ರೂಪದಲ್ಲಿ ನೋಡಬೇಕು ಎಂಬ ಆಸೆ ಬಹುತೇಕರಿಗೆ ಇದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಅಂತೆ-ಕಂತೆಗಳು ಹಬ್ಬಿದ್ದವು. ಇತ್ತೀಚೆಗೆ ನಿರ್ದೇಶಕ ಗುರುದತ್ತ ಗಾಣಿಗ (Gurudatha Ganiga) ಅವರು ‘ಜುಗಾರಿ ಕ್ರಾಸ್’ ಸಿನಿಮಾ ಮಾಡುವುದಾಗಿ ಘೋಷಿಸಿದರು. ಈಗ ಈ ಸಿನಿಮಾದ ಬಗ್ಗೆ ದೊಡ್ಡ ಅಪ್​ಡೇಟ್ ಸಿಕ್ಕಿದೆ. ಚಿತ್ರಕ್ಕೆ ನಾಯಕ ಯಾರು ಎಂಬುದನ್ನು ರಿವೀಲ್ ಮಾಡಲಾಗಿದೆ. ಹೌದು, ಈ ಸಿನಿಮಾಗೆ ರಾಜ್ ಬಿ. ಶೆಟ್ಟಿ (Raj B Shetty) ಅವರು ಹೀರೋ ಆಗಿದ್ದಾರೆ. ಟೈಟಲ್ ಟೀಸರ್ ಜೊತೆಗೆ ಈ ನ್ಯೂಸ್ ನೀಡಲಾಗಿದೆ.

ನಿರ್ದೇಶಕ ಗುರುದತ್ತ ಗಾಣಿಗ ಅವರು ಈಗಾಗಲೇ ‘ಕರಾವಳಿ’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈಗ ‘ಜುಗಾರಿ ಕ್ರಾಸ್’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕನ್ನಡದ ಸಾಹಿತ್ಯ ಪ್ರಿಯರಿಗೆ ‘ಜುಗಾರಿ ಕ್ರಾಸ್’ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಪೂರ್ಣಚಂದ್ರ ತೇಜಸ್ವಿ ಅವರು ಬರೆದ ಈ ಕಾದಂಬರಿಯಲ್ಲಿ ಸಿಕ್ಕಾಪಟ್ಟೆ ರೋಚಕತೆ ಇದೆ. ಹಲವು ಟ್ವಿಸ್ಟ್​ಗಳು ಇವೆ. ಈ ಕಥೆಗೆ ಈಗ ಸಿನಿಮಾ ರೂಪ ಸಿಗುತ್ತಿದೆ.

‘ಜುಗಾರಿ ಕ್ರಾಸ್’ ಟೈಟಲ್ ಟೀಸರ್​​ನಲ್ಲಿ ಹಲವು ಅಂಶಗಳು ಕಾಣಿಸಿವೆ. ತಲೆಬುರಡೆಗಳ ರಾಶಿ, ಹರಿಯುತ್ತಿರುವ ನೆತ್ತರು, ಪಳಪಳ ಹೊಳೆಯುವ ಕೆಂಪು ಬಣ್ಣದ ರತ್ನ ಸೇರಿದಂತೆ ಅನೇಕ ಅಂಶಗಳು ಹೈಲೈಟ್ ಆಗಿವೆ. ಹಿನ್ನೆಲೆ ಸಂಗೀತ ಕೂಡ ಕಿಕ್ ನೀಡುವಂತಿದೆ. ಈ ಎಲ್ಲದರಿಂದ ‘ಜುಗಾರಿ ಕ್ರಾಸ್’ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ರಾಜ್ ಬಿ. ಶೆಟ್ಟಿ ಅವರು ಪ್ರಮುಖ ಪಾತ್ರ ಮಾಡುತ್ತಾರೆ ಎಂಬುದು ತಿಳಿದ ಬಳಿಕ ಹೈಪ್ ಡಬಲ್ ಆಗಿದೆ.

‘ಜುಗಾರಿ ಕ್ರಾಸ್’ ಸಿನಿಮಾ ಟೈಟಲ್ ಟೀಸರ್:

ಗುರುದತ್ತ ಗಾಣಿಗ ಮತ್ತು ರಾಜ್ ಬಿ. ಶೆಟ್ಟಿ ಅವರು ಈಗಾಗಲೇ ‘ಕರಾವಳಿ’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿರುವಾಗಲೇ ‘ಜುಗಾರಿ ಕ್ರಾಸ್’ ಸಿನಿಮಾದಲ್ಲೂ ಅವರಿಬ್ಬರು ಕೈ ಜೋಡಿಸಿದ್ದಾರೆ. ಸಿನಿಮಾ ಮತ್ತು ಪಾತ್ರಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿರುವ ರಾಜ್ ಬಿ. ಶೆಟ್ಟಿ ಅವರು ‘ಜುಗಾರಿ ಕ್​ರಾಸ್’ ಒಪ್ಪಿಕೊಂಡು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: ‘ಸು ಫ್ರಮ್ ಸೋ’ ಬಳಿಕ ಭಾನು ಜೊತೆ ಹೊಸ ಪ್ರಾಜೆಕ್ಟ್ ಘೋಷಿಸಿದ ರಾಜ್ ಬಿ ಶೆಟ್ಟಿ

‘ಕರಾವಳಿ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿರುವುದರಿಂದ ಗುರುದತ್ತ ಗಾಣಿಗ ಅವರ ಕೆಲಸದ ಮೇಲೆ ರಾಜ್ ಬಿ. ಶೆಟ್ಟಿ ಅವರಿಗೆ ಭರವಸೆ ಇದೆ. ಆ ಕಾರಣದಿಂದು ಅವರು ‘ಜುಗಾರಿ ಕ್ರಾಸ್’ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಸದ್ಯದಲ್ಲೇ ಶೂಟಿಂಗ್ ಆರಂಭ ಆಗಲಿದೆ. ಅಭಿಮನ್ಯು ಸದಾನಂದನ್ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಸಚಿನ್ ಬಸ್ರೂರು ಸಂಗೀತ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:23 pm, Thu, 16 October 25