‘ಸು ಫ್ರಮ್ ಸೋ’ ಓವರ್ ಹೈಪ್ ಎಂದವರಿಗೆ ರಾಜ್ ಬಿ. ಶೆಟ್ಟಿ ಕೊಟ್ಟರು ಖಡಕ್ ಉತ್ತರ

ರಾಜ್ ಬಿ. ಶೆಟ್ಟಿ ಅವರ 'ಸು ಫ್ರಮ್ ಸೋ' ಸಿನಿಮಾ ಅಪಾರ ಯಶಸ್ಸು ಕಂಡಿದೆ. ಈ ಸಿನಿಮಾ 50 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡುವ ನಿರೀಕ್ಷೆಯಿದೆ. ಆದರೆ, ಕೆಲವರು ಈ ಚಿತ್ರವನ್ನು ಓವರ್ ಹೈಪ್ ಎಂದು ಕರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್, ಸ್ಪಷ್ಟ ಉತ್ತರ ನೀಡಿದ್ದಾರೆ.

‘ಸು ಫ್ರಮ್ ಸೋ’ ಓವರ್ ಹೈಪ್ ಎಂದವರಿಗೆ ರಾಜ್ ಬಿ. ಶೆಟ್ಟಿ ಕೊಟ್ಟರು ಖಡಕ್ ಉತ್ತರ
ಸು ಫ್ರಮ್ ಸೋ ಸಿನಿಮಾ ಪೋಸ್ಟರ್ ಹಾಗೂ ರಾಜ್ ಬಿ. ಶೆಟ್ಟಿ

Updated on: Aug 02, 2025 | 8:50 AM

‘ಸು ಫ್ರಮ್ ಸೋ’ ಸಿನಿಮಾ (Su From So Movie) ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಚಿತ್ರ ಕರ್ನಾಟಕದ ಬಾಕ್ಸ್ ಆಫೀಸ್​ನಲ್ಲೇ 50 ಕೋಟಿ ರೂಪಾಯಿ ಬಾಚಿಕೊಳ್ಳುವ ಸೂಚನೆ ಇದೆ. ಸಿನಿಮಾದ ಕಲೆಕ್ಷನ್ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾಗೆ ಈಗಾಗಲೇ 40 ಸಾವಿರ ಮಂದಿ ವೋಟ್ ಮಾಡಿದ್ದು, 9.5 ರೇಟಿಂಗ್ ಸಿಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಒಂದು ಇಷ್ಟು ಒಳ್ಳೆಯ ಮೆಚ್ಚುಗೆ ಪಡೆದಿದ್ದು ಇದೇ ಮೊದಲು. ಈ ಮಧ್ಯೆ ಕೆಲವರು ‘ಸು ಫ್ರಮ್ ಸೋ’ ಚಿತ್ರವನ್ನು ಓವರ್ ಹೈಪ್ಡ್ ಸಿನಿಮಾ ಎಂದು ಕರೆದಿದ್ದಾರೆ. ಇದಕ್ಕೆ ರಾಜ್ ಬಿ. ಶೆಟ್ಟಿ ಖಡಕ್ ಉತ್ತರ ಕೊಟ್ಟಿದ್ದಾರೆ.

ಯೂಟ್ಯೂಬರ್​ಗಳ ಜೊತೆ ರಾಜ್ ಬಿ. ಶೆಟ್ಟಿ ಮಾತನಾಡಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಂದು ಸಿನಿಮಾ ಮಾಡಿದ ಮೇಲೆ ಅದು ಯಾವ ರೀತಿಯ ಚಿತ್ರ ಎಂದು ಗುರುತಿಸಿ ಆ ರೀತಿಯ ಆಡಿಯನ್ಸ್​ಗೆ ತಲುಪಿಸೋ ಕೆಲಸ ಮಾಡಬೇಕು ಎಂಬುದು ರಾಜ್ ಅವರ ಆಲೋಚನೆ.

ಇದನ್ನೂ ಓದಿ
ಸಮಂತಾ ಕೈಯಲ್ಲಿ ಹೊಸ ಉಂಗುರ; ಹುಟ್ಟಿತು ನಿಶ್ಚಿತಾರ್ಥದ ಚರ್ಚೆ
‘ಕೊತ್ತಲವಾಡಿ’ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?
ಗಂಟೆಗೆ 11 ಸಾವಿರ ಟಿಕೆಟ್ ಮಾರಿದ ಸು ಫ್ರಮ್ ಸೋ; ಶುಕ್ರವಾರ ದಾಖಲೆ ಕಲೆಕ್ಷನ್
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

‘ನಾನು ಸಿನಿಮಾಗೆ ಮಾರ್ಕೆಟ್ ಮಾಡಲ್ಲ. ಸಿನಿಮಾದ ಇಂಟೆನ್ಶನ್ ಜನರ ಎದುರು ಇಟ್ಟಿದ್ದೇವೆ. ಟೋಬಿ ಸಿನಿಮಾ ಮಾಡುವಾಗ ಮಾಸ್ ಸಿನಿಮಾ ಎಂಬುದನ್ನು ಜನರಿಗೆ ಹೇಳಬೇಕಿತ್ತು, ಹಾಗೆಯೇ ಮಾಡಿದ್ದೆ. ಹೊಸಬರ ಸಿನಿಮಾ ನೋಡಲ್ಲ ಎಂಬ ಮಾತಿತ್ತು. ಕೆಲವರು ಸಿನಿಮಾಗೆ ಓವರ್ ಹೈಪ್ ನೀಡಲಾಗಿದೆ ಎಂದು ಹೇಳಿದ್ದು ಇದೆ. ಆದರೆ, ಸಿನಿಮಾ ಚೆನ್ನಾಗಿದೆ ನೋಡಿ ಎಂದು ನಾವು ಎಲ್ಲಿಯೂ ಹೇಳಿಲ್ಲ’ ಎಂದಿದ್ದಾರೆ ರಾಜ್.

ರಾಜ್ ಬಿ ಶೆಟ್ಟಿ ಮಾತು

‘ಬಸಳೆ ಸೊಪ್ಪನ್ನು ಬಸಳೆ ಸೊಪ್ಪು ತಿನ್ನುವವರಿಗೆ ಮಾತ್ರ ಮಾರಬೇಕು. ಮೀನನ್ನು ಮೀನು ತಿನ್ನುವವರಿಗೆ ಮಾತ್ರ ಮಾರಬೇಕು. ನಾವು ಒಂದು ಪ್ರಾಡಕ್ಟ್ ಮಾಡಿ ಎಲ್ಲರೂ ಬರಬೇಕು ಎಂದುಕೊಳ್ಳುತ್ತಿದ್ದೇವೆ. ಎಲ್ಲಾ ವರ್ಗದ ಸಿನಿಮಾಗಳಿಗೂ ಅಭಿಮಾನಿಗಳು ಇದ್ದಾರೆ. ಗರುಡ ಗಮನ ಮಾಡುವಾಗ ಮಕ್ಕಳನ್ನು ಕರೆದುಕೊಂಡು ಬರಬೇಡಿ ಎಂದೆ. ಸ್ವಾತಿ ಮುತ್ತಿನ ಮಳೆ ಹನಿಯೆ ಮಾಡಿದಾಗ ಟೈಮ್ ಪಾಸ್​ಗೆ ಸಿನಿಮಾಗೆ ಬರಬೇಡಿ ಎಂದೆ. ನನಗೆ ಸಿನಿಮಾ ಏನು ಎಂಬುದು ಗೊತ್ತಿತ್ತು’ ಎನ್ನುತ್ತಾರೆ ರಾಜ್. ಯಾರ ಟೇಸ್ಟ್ ಹೇಗಿದೆ ಎಂಬುದನ್ನು ನೋಡಿಕೊಂಡು ಅವರ ಎದುರು ಸಿನಿಮಾ ಇಡಬೇಕು ಎಂಬುದು ಅವರ ಮಾತಿನ ಅರ್ಥ.

ಇದನ್ನೂ ಓದಿ: ಗಂಟೆಗೆ 11 ಸಾವಿರ ಟಿಕೆಟ್ ಮಾರಾಟ: ‘ಸು ಫ್ರಮ್ ಸೋ’ ಶುಕ್ರವಾರ ದಾಖಲೆಯ ಕಲೆಕ್ಷನ್

‘ದುಡ್ಡಾಗಬೇಕು ಎನ್ನುವ ಕಾರಣಕ್ಕೆ ಸುಳ್ಳು ಹೇಳಬಾರದು. ನಮಗೆ ಎಷ್ಟಾಗುತ್ತೋ ಅಷ್ಟು ಒಳ್ಳೆಯ ಸಿನಿಮಾ ಮಾಡಿದ್ದೇವೆ. ನಾನು ಹೇಳಿದರೆ ಅದು ವರ್ಕ್ ಆಗಲ್ಲ, ಜನರು ಹೇಳಬೇಕು. ನಾವು ಪೇಡ್ ಪ್ರಮೋಷನ್ ಮಾಡಿಲ್ಲ’ ಎಂಬುದು ರಾಜ್ ಮಾತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.