‘ಸು ಫ್ರಮ್ ಸೋ’ ಬಳಿಕ ಭಾನು ಜೊತೆ ಹೊಸ ಪ್ರಾಜೆಕ್ಟ್ ಘೋಷಿಸಿದ ರಾಜ್ ಬಿ ಶೆಟ್ಟಿ

ಲೈಟರ್ ಬುದ್ಧ ಪ್ರೊಡಕ್ಷನ್ಸ್‌ನ 'ಸು ಫ್ರಮ್ ಸೋ' ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆ ಹೊಸ ಕಿರುಚಿತ್ರವನ್ನು ಬಿಡುಗಡೆ ಮಾಡುತ್ತಿದೆ. 'ಹಿಂದೆ ಗಾಳಿ ಮುಂದೆ ಮತ್ತೆ' ಎಂಬ ಈ ಕಿರುಚಿತ್ರವನ್ನು ರಘು ಆರವ್ ನಿರ್ದೇಶಿಸಿದ್ದು, 'ಸು ಫ್ರಮ್ ಸೋ'ದ ಭಾನು ಪಾತ್ರದ ಸಂಧ್ಯಾ ಅರೆಕೆರೆ ಮುಖ್ಯ ಪಾತ್ರದಲ್ಲಿದ್ದಾರೆ.

‘ಸು ಫ್ರಮ್ ಸೋ’ ಬಳಿಕ ಭಾನು ಜೊತೆ ಹೊಸ ಪ್ರಾಜೆಕ್ಟ್ ಘೋಷಿಸಿದ ರಾಜ್ ಬಿ ಶೆಟ್ಟಿ
ಸಂಧ್ಯಾ

Updated on: Sep 16, 2025 | 8:38 AM

‘ಸು ಫ್ರಮ್ ಸೋ’ ಸಿನಿಮಾ (Su From So Movie) ಮೂಲಕ ರಾಜ್ ಬಿ ಶೆಟ್ಟಿ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಹೀಗಿರುವಾಗಲೇ ರಾಜ್ ಅವರ ಒಡೆತನದ ನಿರ್ಮಾಣ ಸಂಸ್ಥೆ ‘ಲೈಟರ್ ಬುದ್ಧ ಪ್ರೊಡಕ್ಷನ್’ ಹೊಸ ಪ್ರಾಜೆಕ್ಟ್ ಒಂದು ಘೋಷಿಸಿದೆ. ‘ಸು ಫ್ರಮ್ ಸೋ’ ಸಿನಿಮಾದ ಭಾನು ಪಾತ್ರ ಖ್ಯಾತಿ ಸಂಧ್ಯಾ ಅರೆಕೆರೆ ಅವರು ಇದರಲ್ಲಿ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕಿರುಚಿತ್ರ. ಹಾಗಂತ ಇದನ್ನು ‘ಲೈಟರ್ ಬುದ್ಧ ಪ್ರೊಡಕ್ಷನ್ಸ್’ ಸಂಸ್ಥೆ ನಿರ್ಮಾಣ ಮಾಡಿಲ್ಲ, ಬದಲಿಗೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅದನ್ನು ರಿಲೀಸ್ ಮಾಡುತ್ತಿದೆ.

‘ಸು ಫ್ರಮ್ ಸೋ’ ಸಿನಿಮಾನ ‘ಲೈಟರ್ ಬುದ್ಧ ಪ್ರೊಡಕ್ಷನ್ಸ್’ ನಿರ್ಮಾಣ ಮಾಡಿತ್ತು. ಈ ಚಿತ್ರದಿಂದ ದೊಡ್ಡ ಮಟ್ಟದಲ್ಲಿ ಲಾಭ ಆಗಿದೆ. ಆ ಬಳಿಕ ಅವರು ಹಂಚಿಕೆ ಮಾಡಿದ ಮಲಯಾಳಂನ ‘ಲೋಕಃ’ ಸಿನಿಮಾ ಕರ್ನಾಟಕದಲ್ಲಿ ಒಳ್ಳೆಯ ಲಾಭ ಮಾಡಿದೆ. ಹೀಗಿರುವಾಗಲೇ ಹೊಸ ಕಿರುಚಿತ್ರ ಬಿಡುಗಡೆ ಮಾಡೋದಾಗಿ ನಿರ್ಮಾಣ ಸಂಸ್ಥೆ ಹೇಳಿದೆ.

‘ಹಿಂದೆ ಗಾಳಿ ಮುಂದೆ ಮತ್ತೆ’ ಎಂಬುದು ಕಿರುಚಿತ್ರದ ಹೆಸರು. ರಘು ಆರವ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ‘ಸು ಫ್ರಮ್ ಸೋ’ ಚಿತ್ರದಲ್ಲಿ ಭಾನು ಆಗಿ ಸಂಧ್ಯಾ ಅವರು ಗಮನ ಸೆಳೆದಿದ್ದರು. ಅವರು ಈ ಕಿರುಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 19ರಂದು ‘ಲೈಟರ್ ಬುದ್ಧ ಯೂಟ್ಯೂಬ್’ ಚಾನೆಲ್ ಮೂಲಕ ಈ ಕಿರುಚಿತ್ರ ಬಿಡುಗಡೆ ಕಾಣಲಿದೆ.

ಇದನ್ನೂ ಓದಿ
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?
ವಿಷ್ಣು, ರಾಜ್, ಅಂಬಿ; ಒಂದೇ ವೇದಿಕೆ ಮೇಲೆ ಅಪೂರ್ವ ಸಂಗಮದ ಕ್ಷಣವಿದು
ಸಿನಿಮಾ ಪ್ರಚಾರಕ್ಕಾಗಿ ಇಷ್ಟು ಕೀಳು ಮಟ್ಟಕ್ಕೆ ಇಳಿಬಾರದು; ಧನುಶ್​ಗೆ ಛೀಮಾರಿ
‘ಸು ಫ್ರಮ್ ಸೋ’ ಬಳಿಕ ಮತ್ತೊಂದು ಹಿಟ್ ಚಿತ್ರ; ‘ಏಳುಮಲೆ’ ಕಲೆಕ್ಷನ್ ಎಷ್ಟು?

ಇದನ್ನೂ ಓದಿ: ‘ಒಳ್ಳೆಯ ಕಥೆ ಇದ್ರೆ ಹೇಳಿ ಸಿನಿಮಾ ಮಾಡೋಣ’; ರಾಜ್​ ಬಿ ಶೆಟ್ಟಿಗೆ ಅಕ್ಷಯ್ ಕುಮಾರ್ ಬುಲಾವ್

ರಾಜ್ ಅವರು ಸದ್ಯ ಮುಂದಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಯಾವುದೇ ಅಪ್​ಡೇಟ್ ನೀಡಿಲ್ಲ. ಶೀಘ್ರವೇ ಅವರ ಹೊಸ ಪ್ರಾಜೆಕ್ಟ್ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.