Rajinikanth: ನಟ ರಜನಿಕಾಂತ್​ ಮೇಲೆ 50 ಸಾವಿರ ರೂಪಾಯಿ ಸುರಿಯಲು ಕಾದು ಕುಳಿತ ಅಭಿಮಾನಿ

Puneeth Rajkumar | Karnataka Ratna: ‘ರಜನಿಕಾಂತ್​ ನಟನೆಯ ಪ್ರತಿ ಚಿತ್ರವನ್ನೂ ನೋಡಿದ್ದೇವೆ. ಅವರನ್ನು ನೋಡಲು ನಾವು ಬರೀ ಕೈಯಲ್ಲಿ ಬಂದಿಲ್ಲ. ದುಡ್ಡು ತೆಗೆದುಕೊಂಡು ಬಂದಿದ್ದೇವೆ’ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

Rajinikanth: ನಟ ರಜನಿಕಾಂತ್​ ಮೇಲೆ 50 ಸಾವಿರ ರೂಪಾಯಿ ಸುರಿಯಲು ಕಾದು ಕುಳಿತ ಅಭಿಮಾನಿ
ರಜನಿಕಾಂತ್​ ಅಭಿಮಾನಿ ಬಿಲಾಲ್​ ಅಹ್ಮದ್​
Follow us
| Updated By: ಮದನ್​ ಕುಮಾರ್​

Updated on:Nov 01, 2022 | 4:21 PM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಇದರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ರಜನಿಕಾಂತ್​ ಅವರು ಬೆಂಗಳೂರಿಗೆ ಬಂದಿದ್ದಾರೆ. ರಜನಿಕಾಂತ್​ (Rajinikanth) ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಎಲ್ಲ ರಾಜ್ಯದಲ್ಲೂ, ಎಲ್ಲ ದೇಶದಲ್ಲೂ ‘ತಲೈವಾ’ ನಟನೆಯ ಸಿನಿಮಾಗಳು ಸದ್ದು ಮಾಡಿವೆ. ಅವರನ್ನು ಒಮ್ಮೆಯಾದರೂ ನೇರವಾಗಿ ನೋಡಬೇಕು ಎಂಬುದು ಎಲ್ಲ ಅಭಿಮಾನಿಗಳ ಆಸೆ. ಅಂಥ ಆಸೆಯನ್ನು ಈಡೇರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಭಿಮಾನಿಯೊಬ್ಬರು ಬೆಂಗಳೂರಿನ ಖಾಸಗಿ ಹೋಟೆಲ್​ ಎದುರು ಕಾದು ಕುಳಿತಿದ್ದಾರೆ. ತಮ್ಮ ನೆಚ್ಚಿನ ನಟನ ಮೇಲೆ 50 ಸಾವಿರ ರೂಪಾಯಿ ಸುರಿಯಬೇಕು ಎಂಬ ಆಸೆಯನ್ನೂ ಅವರು ಇಟ್ಟುಕೊಂಡಿದ್ದಾರೆ.

ಪ್ರತಿಯೊಬ್ಬರ ಅಭಿಮಾನಿಯ ಭಾವನೆಗಳು ಬೇರೆ ಬೇರೆ ರೀತಿಯಲ್ಲಿ ಇರುತ್ತವೆ. ಅನೇಕ ಸಂದರ್ಭಗಳಲ್ಲಿ ಇಂಥದ್ದೆಲ್ಲ ಅತಿರೇಕ ಎನಿಸುವುದೂ ಉಂಟು. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ರಜನಿಕಾಂತ್​ ಉಳಿದುಕೊಂಡಿದ್ದಾರೆ. ಆ ಹೋಟೆಲ್​ ಮುಂಭಾಗ ಅಭಿಮಾನಿಗಳು ಜಮಾಯಿಸಿದ್ದಾರೆ. ಅಚ್ಚರಿ ಎಂದರೆ ಬಿಲಾಲ್​ ಅಹ್ಮದ್ ಎಂಬ ಅಭಿಮಾನಿಯು ಜೇಬಿನಲ್ಲಿ ಬರೋಬ್ಬರಿ 50 ಸಾವಿರ ರೂಪಾಯಿ ಹಣ ತಂದಿದ್ದಾರೆ. ರಜನಿಕಾಂತ್​ ಸಿಕ್ಕರೆ ಅವರ ಮೇಲೆ ದುಡ್ಡಿ ಮಳೆ ಸುರಿಸಬೇಕು ಎಂಬುದು ಇವರ ಪ್ಲ್ಯಾನ್​. ಒಂದು ವೇಳೆ ರಜನಿಕಾಂತ್​ ಸಿಗದಿದ್ದರೆ, ಕನಿಷ್ಠ ಪಕ್ಷ ಅವರ ಕಾರಿನ ಮೇಲಾದರೂ ಹಣ ಸುರಿಯಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ.

‘ರಜನಿಕಾಂತ್​ ಮತ್ತು ಡಾ. ರಾಜ್​ಕುಮಾರ್​ ನಡುವೆ ಮೊದಲಿನಿಂದಲೂ ಬಾಂಧವ್ಯ ಇದೆ. ಇಂದು ಬೆಂಗಳೂರಿಗೆ ಅವರು ಬಂದಿರುವುದರಿಂದ ನಮಗೆ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಅವರ ಪ್ರತಿ ಸಿನಿಮಾವನ್ನೂ ನೋಡಿ ನಾವು ಎಂಜಾಯ್​ ಮಾಡಿದ್ದೇವೆ. ಅವರನ್ನು ನೋಡಲು ನಾವು ಬರೀ ಕೈಯಲ್ಲಿ ಬಂದಿಲ್ಲ. ದುಡ್ಡು ತೆಗೆದುಕೊಂಡು ಬಂದಿದ್ದೇವೆ. ಅವರ ಮೇಲೆ ದುಡ್ಡಿನ ಮಳೆ ಸುರಿಸುತ್ತೇವೆ. ಅಷ್ಟು ಅಭಿಮಾನ ನಮಗೆ ಇದೆ’ ಎಂದು ಬಿಲಾಲ್​ ಅಹ್ಮದ್ ಹೇಳಿದ್ದಾರೆ.

ಇದನ್ನೂ ಓದಿ
Image
Puneeth Rajkumar: ಪುನೀತ್​ ರಾಜ್​ಕುಮಾರ್ ಇಲ್ಲದೇ ಕಳೆಯಿತು 11 ತಿಂಗಳು; ಸಮಾಧಿ ಬಳಿ ಕಣ್ಣೀರು ಹಾಕಿದ ಫ್ಯಾನ್ಸ್​
Image
ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್​ಕುಮಾರ್ ಮಾಲಾರ್ಪಣೆ
Image
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
Image
ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’; ಸಚಿವ ಸುನೀಲ್ ಕುಮಾರ್ ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ

‘ಸಿನಿಮಾಗಳಲ್ಲಿ ರಜನಿಕಾಂತ್​ ಅವರು ಸ್ಟೈಲಿಶ್​ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ರಿಯಲ್​ ಲೈಫ್​ನಲ್ಲಿ ತುಂಬ ಸರಳತೆ ಮೆರೆಯುತ್ತಾರೆ. ರಜನಿಕಾಂತ್​ ಅವರು ಕೊಡುಗೈ ದಾನಿ. ಅವರ ಕಾಲಿಗೆ ಬೀಳಲು ನಾವು ಸಿದ್ಧರಿದ್ದೇವೆ’ ಎಂದಿದ್ದಾರೆ ಬಿಲಾಲ್​ ಅಹ್ಮದ್.

ವಿಧಾನಸೌಧದ ಮುಂಭಾಗದಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅವರ ಪರವಾಗಿ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಕ್ಷಣಕ್ಕೆ ರಜನಿಕಾಂತ್ ಸಾಕ್ಷಿ ಆಗುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:21 pm, Tue, 1 November 22

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್