70ರ ವಸಂತಕ್ಕೆ ಕಾಲಿಟ್ಟ ಸೂಪರ್ ಸ್ಟಾರ್, ದರ್ಬಾರ್ ಟ್ರೇಲರ್ ರಿಲೀಸ್ ಮಡೋಕೆ ಪ್ಲ್ಯಾನ್
ಟಾಲಿವುಡ್ ಸೂಪರ್ ಸ್ಟಾರ್.. ಅಭಿಮಾನಿಗಳ ಪಾಲಿನ ಆರಾಧ್ಯ ದೈವ, ತಲೈವಾ ರಜನಿಕಾಂತ್ಗೆ ಹುಟ್ಟು ಹಬ್ಬದ ಸಂಭ್ರಮ. 70ರ ವಸಂತಕ್ಕೆ ಕಾಲಿಟ್ಟಿರೋ ಸೂಪರ್ ಸ್ಟಾರ್ರ ಈ ಬಾರಿಯ ಹುಟ್ಟುಹಬ್ಬ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಸ್ಟೈಲ್ ಕಿಂಗ್ ರಜಿನಿಕಾಂತ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡ್ರೆ ಸಾಕು, ಇಡೀ ಥಿಯೇಟರ್ಗೆ ಥಿಯೇಟರ್ ಶಿಳ್ಳೆ ಚಪ್ಪಾಳೆಯಿಂದ ಮಾರ್ದನಿಸುತ್ತೆ. ತಲೈವಾ ಫ್ಯಾನ್ಸ್ ಹುಚ್ಚೆದ್ದು ಕುಣೀತಾರೆ. ತಮಿಳುನಾಡಿನ ಸಿನಿರಸಿಕರಿಗೆ ಮಾತ್ರವಲ್ಲಾ ಭಾರತೀಯ ಚಿತ್ರರಂಗಕ್ಕೂ ಪಡೆಯಪ್ಪನೇ ಆರಾಧ್ಯ ದೈವ. ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳಲ್ಲಿ ಹೇಗೆ ಸ್ಟೈಲ್ ಕಿಂಗ್ […]
ಟಾಲಿವುಡ್ ಸೂಪರ್ ಸ್ಟಾರ್.. ಅಭಿಮಾನಿಗಳ ಪಾಲಿನ ಆರಾಧ್ಯ ದೈವ, ತಲೈವಾ ರಜನಿಕಾಂತ್ಗೆ ಹುಟ್ಟು ಹಬ್ಬದ ಸಂಭ್ರಮ. 70ರ ವಸಂತಕ್ಕೆ ಕಾಲಿಟ್ಟಿರೋ ಸೂಪರ್ ಸ್ಟಾರ್ರ ಈ ಬಾರಿಯ ಹುಟ್ಟುಹಬ್ಬ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.
ಸ್ಟೈಲ್ ಕಿಂಗ್ ರಜಿನಿಕಾಂತ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡ್ರೆ ಸಾಕು, ಇಡೀ ಥಿಯೇಟರ್ಗೆ ಥಿಯೇಟರ್ ಶಿಳ್ಳೆ ಚಪ್ಪಾಳೆಯಿಂದ ಮಾರ್ದನಿಸುತ್ತೆ. ತಲೈವಾ ಫ್ಯಾನ್ಸ್ ಹುಚ್ಚೆದ್ದು ಕುಣೀತಾರೆ. ತಮಿಳುನಾಡಿನ ಸಿನಿರಸಿಕರಿಗೆ ಮಾತ್ರವಲ್ಲಾ ಭಾರತೀಯ ಚಿತ್ರರಂಗಕ್ಕೂ ಪಡೆಯಪ್ಪನೇ ಆರಾಧ್ಯ ದೈವ.
ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳಲ್ಲಿ ಹೇಗೆ ಸ್ಟೈಲ್ ಕಿಂಗ್ ಆಗಿ, ದಾನಸೂರ ಕರ್ಣನಂತೆ ಕಂಗೊಳಿಸ್ತಾರೋ ತೆರೆ ಹಿಂದೆಯೂ ಥೇಟ್ ಕಲಿಯುಗದ ಕರ್ಣನೇ ಸರಿ. ಅಭಿಮಾನಿಗಳ ಹೃದಯ ಸಿಂಹಾಸನಾಧೀಶ್ವರ ರಜಿನಿಯ ಹುಟ್ಟುಹಬ್ಬ ಅಂದ್ರೆ ಅದೊಂದು ಹಬ್ಬವೇ ಸರಿ. 70ನೇ ವರ್ಷಕ್ಕೆ ಕಾಲಿಟ್ಟಿರೋ ರಜಿನಿಕಾಂತ್ಗೆ ಈ ಬಾರಿ ಬರ್ತ್ ಡೇ ಯಂದೇ ಹೊಸ ಸಿನಿಮಾ ಸೆಟ್ಟೇರ್ತಿದೆ. ರಜನಿಯ 168ನೇ ಸಿನಿಮಾದ ಮುಹೂರ್ಥ ನೆರವೇರಿದೆ. ಈ ಚಿತ್ರದಲ್ಲಿ ನಟಿ ಮೀನಾ ಮತ್ತು ಖುಷ್ಬೂ ಪಡೆಯಪ್ಪನಿಗೆ ಜೊತೆಯಾಗಿರೋದು ಮತ್ತೊಂದು ವಿಶೇಷ.
ಇನ್ನೂ ರಜನಿಯ ಹುಟ್ಟುಹಬ್ಬದ ಅಂಗವಾಗಿ ದರ್ಬಾರ್ ಸಿನಿಮಾದ ಟ್ರೇಲರ್ ರಿಲೀಸ್ ಮಾಡೋ ಪ್ಲ್ಯಾನ್ನಲ್ಲಿದೆ ಚಿತ್ರತಂಡ. ಎ.ಆರ್.ಮುರುಗದಾಸ್ ನಿರ್ದೇಶನದ ದರ್ಬಾರ್ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟು ಹಾಕಿದ್ದು, ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರ್ತಿದೆ. ಮತ್ತೊಂದು ವಿಶೇಷ ಅಂದ್ರೆ, ಸೂಪರ್ ಹಿಟ್ ಚಿತ್ರ “ಬಾಷಾ” ಕೂಡ ಬರ್ತ್ ಡೇ ಯಂದು ರೀ ರಿಲೀಸ್ ಆಗ್ತಿದೆ.
ಇನ್ನು ರಜಿನಿ ಹುಟ್ಟು ಹಬ್ಬ ಅಂದ್ರೆ ಅಭಿಮಾನಿಗಳಿಗೆ ದೊಡ್ಡ ಜಾತ್ರೆ ಇದ್ದಂತೆ. ಆದ್ರೆ, ಈ ಬಾರಿ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ದುಂದು ವೆಚ್ಚ ಮಾಡೋದು ಬೇಡ ಎಂದಿದ್ದಾರೆ. ಹುಟ್ಟುಹಬ್ಬಕ್ಕೆ ಖರ್ಚು ಮಾಡೋ ಹಣವನ್ನ ಸಾಮಾಜಿಕ ಕಾರ್ಯಗಳಿಗೆ ಬಳಸಿ ಎಂದು ಸಲಹೆ ನೀಡಿದ್ದಾರೆ.
Published On - 11:24 am, Thu, 12 December 19