
ಕನ್ನಡದ ಚಿತ್ರರಂಗದಲ್ಲಿ ರಾಜ್ಕುಮಾರ್ ಅವರು ಸಾಕಷ್ಟು ಹೆಸರು ಮಾಡಿದ್ದರು. ಅದೇ ರೀತಿ ನಟ ಕಲ್ಯಾಣ್ ಕುಮಾರ್ ಕೂಡ ಸಾಕಷ್ಟು ಹೆಸರು ಮಾಡಿದ್ದರು. ಅವರು ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದರು. 71ನೇ ವಯಸ್ಸಿಗೆ ಕಲ್ಯಾಣ್ ನಿಧನ ಹೊಂದಿದರು. ಅವರ ನಿಧನದ ಬಳಿಕ ರಾಜ್ಕುಮಾರ್ ಅವರು ಕಲ್ಯಾಣ್ ಬಗ್ಗೆ ಮಾತನಾಡಿದ್ದರು. ಇದರ ಅಪರೂಪದ ವಿಡಿಯೋ ವೈರಲ್ ಆಗಿದೆ. ಈ ವೇಳೆ ರಾಜ್ಕುಮಾರ್ ಭಾವುಕರಾಗಿದ್ದರು.
60 ಹಾಗೂ 70ರ ದಶಕದಲ್ಲಿ ಕಲ್ಯಾಣ್ ಕುಮಾರ್ ಹಾಗೂ ರಾಜ್ಕುಮಾರ್ ಅವರು ಚಿತ್ರರಂಗ ಡಾಮಿನೇಟ್ ಮಾಡಿದ್ದರು. ಕಲ್ಯಾಣ್ ಅವರು ನಟನೆ ಜೊತೆಗೆ ಸಿನಿಮಾ ನಿರ್ದೇಶನ, ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ಅವರು 1999ರಲ್ಲಿ ನಿಧನ ಹೊಂದಿದಾಗ ರಾಜ್ಕುಮಾರ್ ಅವರು ಕಣ್ಣೀರು ಹಾಕುತ್ತಾ ಮಾತನಾಡಿದ್ದರು. ಆ ಅಪರೂಪದ ವಿಡಿಯೋ ಇಲ್ಲಿದೆ.
‘ದೊಡ್ಡ ವ್ಯಕ್ತಿ, ಆತ್ಮೀಯರು. ಬೇಡರ ಕಣ್ಣಪ್ಪ ಸಿನಿಮಾ ಸಂದರ್ಭದಲ್ಲಿ ಮೂರು ಕುಮಾರಗಳು ಒಟ್ಟಿಗೆ ಸೇರಿದ್ದೆವು. ಉದಯ್ ಕುಮಾರ್ ಹೊರಟು ಹೋದ್ರು. ಇವರೂ ಎದ್ದುಬಿಟ್ಟರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ರಾಜ್ಕುಮಾರ್ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ‘ಆತ್ಮವನ್ನು ನೋಡಿದವರು ಯಾರೂ ಇಲ್ಲ. ಬದುಕಿರುವಾಗಲೇ ಏನಿದೆ ಅನ್ನೋದು ಗೊತ್ತಾಗುತ್ತಿತ್ತು. ಕರೆಂಟೇ ಹೋದ್ಮೇಲೆ ಏನೇ ಹೇಳಿದ್ರೂ ವೇಸ್ಟ್. ನೆನಪೊಂದೇ ಯಾವಾಗಲೂ ಇರುತ್ತೆ’ ಎಂದಿದ್ದರು ರಾಜ್ಕುಮಾರ್. ಲಿಂಕ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
ರಾಜ್ಕುಮಾರ್ ಅವರಿಗೆ ಎಲ್ಲಾ ಕಲಾವಿದರ ಬಗ್ಗೆ ಒಳ್ಳೆಯ ಭಾವನೆ ಇತ್ತು. ಯಾವುದೇ ಕಲಾವಿದರ ಬಗ್ಗೆ ಅವರು ಕೆಟ್ಟದಾಗಿ ಮಾತನಾಡಿದವರಲ್ಲ. ಎಲ್ಲಾ ಕಲಾವಿದರನ್ನು ಸಮವಾಗಿ ಕಾಣುತ್ತಿದ್ದರು. ಹೊಸ ಕಲಾವಿದರನ್ನು ಕೂಡ ಅವರು ತುಂಬಾನೇ ಗೌರವ ನೀಡುತ್ತಿದ್ದರು. ರಾಜ್ಕುಮಾರ್ ಹಾಕಿಕೊಟ್ಟ ಮಾರ್ಗದರ್ಶನ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ; ನಾಲ್ಕು ವರ್ಷಗಳ ಹಿಂದೆ ನಿಜಕ್ಕೂ ನಡೆದಿದ್ದೇನು?
ರಾಜ್ಕುಮಾರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಕುಟುಂಬದವರು ಹಾಗೂ ಕುಟುಂಬ ಸಾಗುತ್ತದೆ. ರಾಜ್ಕುಮಾರ್ ಪುತ್ರ ಪುನೀತ್ ರಾಜ್ಕುಮಾರ್ ಅವರು ಸರಳತೆಗೆ ಮತ್ತೊಂದು ಹೆಸರಾಗಿದ್ದರು. ಅವರು ಕೂಡ ನಮ್ಮನ್ನು ಬಿಟ್ಟು ಹೋಗಿದ್ದು ಬೇಸರದ ವಿಚಾರ. ಶಿವಣ್ಣ ಅವರು ಸಿನಿಮಾಗಳನ್ನು ಮಾಡುತ್ತಿದ್ದಾರೆ. ರಾಜ್ಕುಮಾರ್ ಮೊಮ್ಮಕ್ಕಳು ಕೂಡ ಚಿತ್ರರಂಗಕ್ಕೆ ಬಂದು ಹೆಸರು ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:49 am, Thu, 13 November 25