ಕಿರಿಯರನ್ನು ರಾಜ್​ಕುಮಾರ್ ಯಾವ ರೀತಿ ಕಾಣುತ್ತಿದ್ದರು? ಇಲ್ಲಿದೆ ನೋಡಿ ವಿಡಿಯೋ

ರಾಜ್‌ಕುಮಾರ್ ಅವರ ಹಳೆಯ ಸಂದರ್ಶನ ಒಂದು ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಅವರು ತಮ್ಮ ಸಹೋದ್ಯೋಗಿಗಳನ್ನು ಮತ್ತು ನಿರ್ಮಾಪಕರನ್ನು ಗೌರವಿಸುತ್ತಿದ್ದ ರೀತಿಯನ್ನು ತೋರಿಸುತ್ತದೆ. ವಯಸ್ಸಿನ ವ್ಯತ್ಯಾಸವನ್ನು ಲೆಕ್ಕಿಸದೆ ಎಲ್ಲರೊಂದಿಗೂ ಅವರ ನಮ್ರತೆ ಮತ್ತು ಗೌರವಯುತ ವರ್ತನೆ ಎಲ್ಲರ ಮನಸ್ಸನ್ನು ಗೆದ್ದಿದೆ .

ಕಿರಿಯರನ್ನು ರಾಜ್​ಕುಮಾರ್ ಯಾವ ರೀತಿ ಕಾಣುತ್ತಿದ್ದರು? ಇಲ್ಲಿದೆ ನೋಡಿ ವಿಡಿಯೋ
ರಾಜ್​ಕುಮಾರ್
Updated By: ರಾಜೇಶ್ ದುಗ್ಗುಮನೆ

Updated on: Mar 13, 2025 | 8:04 AM

ರಾಜ್​ಕುಮಾರ್ ಎಂದರೆ ಇಡೀ ಕರ್ನಾಟಕದ ಮಂದಿಗೆ ಗೊತ್ತು. ಅವರಿಗೆ ಸಾಕಷ್ಟು ಜನಪ್ರಿಯತೆ ಇತ್ತು. ಈಗಲೂ ಅವರನ್ನು ಆರಾಧಿಸುವವರ ಸಂಖ್ಯೆ ಸಾಕಷ್ಟಿದೆ. ರಾಜ್​ಕುಮಾರ್ ಹಾಕಿಕೊಟ್ಟ ಆದರ್ಶವೂ ಎಲ್ಲರಿಗೂ ಮಾದರಿ ಆಗುವಂತೆ ಇದೆ. ರಾಜ್​ಕುಮಾರ್ (Rajkumar) ನಿರ್ಮಾಪಕರು ಹಾಗೂ ನಿರ್ದೇಶಕರನ್ನು ನಡೆಸುಕೊಳ್ಳುತ್ತಿದ್ದ ರೀತಿ ನಿಜಕ್ಕೂ ಸ್ಮರಣೀಯ. ರಾಜ್​ಕುಮಾರ್ ಅವರ ಹಳೆಯ ಸಂದರ್ಶನ ಒಂದು ಈಗ ವೈರಲ್ ಆಗಿದೆ. ಇದರಲ್ಲಿ ಅವರು ಹೇಳಿದ ಮಾತು ಗಮನ ಸೆಳೆದಿದೆ.

ರಾಜ್​ಕುಮಾರ್ ಅವರು ವಯಸ್ಸಿನಲ್ಲಿ ಸಣ್ಣವರು ಹಾಗೂ ದೊಡ್ಡವರು ಎಂದು ನೋಡುತ್ತಲೇ ಇರಲಿಲ್ಲ. ಅವರು ಎಲ್ಲರನ್ನೂ ಗೌರವಿಸುತ್ತಿದ್ದರು. ಇದು ಅವರಿಗೆ ಮೊದಲಿನಿಂದಲೂ ಬಂದ ಸಂಪ್ರದಾಯ. ನಾಟಕಗಳಲ್ಲಿ ನಟಿಸಿ ಈ ರೀತಿ ಆದೆ ನಾನು ಎಂದು ರಾಜ್​ಕುಮಾರ್ ಸಂದರ್ಶನ ಒಂದರಲ್ಲಿ ಹೇಳಿದ್ದರು. ಅಭಿಮಾನಿಗಳು ಅದನ್ನು ಈಗ ವೈರಲ್ ಮಾಡುತ್ತಾ ಇದ್ದಾರೆ.

ಇದನ್ನೂ ಓದಿ
ಬೇಸರದಲ್ಲಿರೋ ಸೋನು ನಿಗಮ್ ಬೆಂಬಲಕ್ಕೆ ನಿಂತ ಸಂಗೀತಾ ಶೃಂಗೇರಿ
ಯಶ್​ ಬಗ್ಗೆ ಗುಣಗಾನ ಮಾಡಿದ ಹಾಲಿವುಡ್ ತಂತ್ರಜ್ಞ; ಕನ್ನಡ ಚಿತ್ರರಂಗದ ಹೆಮ್ಮೆ
‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್​ನಲ್ಲಿ ರಜನಿ ಮಾತು
ಮತ್ತೆ ಚಂದನ್ ಶೆಟ್ಟಿ ತಬ್ಬಿಕೊಂಡು ಕಣ್ಣೀರು ಹಾಕಿದ ನಿವೇದಿತಾ ಗೌಡ

‘ನಾಗಾಭರಣ್, ಶಂಕರ್​ನಾಗ್ ವಯಸ್ಸಿನಲ್ಲಿ ಸಣ್ಣವರು. ಆಗ ಏನೂ ಅನಿಸಲಿಲ್ಲವೇ’ ಎಂದು ರಾಜ್​ಕುಮಾರ್ ಅವರಿಗೆ ಕೇಳಲಾಯಿತು. ಇದಕ್ಕೆ ರಾಜ್​ಕುಮಾರ್ ಅವರು ನೀಡಿದ್ದ ಉತ್ತರ ಸಾಕಷ್ಟು ವಿಶೇಷವಾಗಿ ಇತ್ತು. ‘ಅವರು ಕಿರಿಯವರು ಹೇಗೆ ಆಗ್ತಾರೆ? ಹಿರಿಯರು ಆಗಿದ್ದರಿಂದಲೇ ಅಲ್ಲಿಗೆ ಬಂದಿದ್ದಾರೆ. ನಿರ್ದೇಶಕ ಸೂತ್ರಧಾರ. ನಾಟಕ ಕಂಪನಿಯಲ್ಲಿ ಇದ್ದು ಅಭ್ಯಾಸ ಆಗಿದೆ. ಯಜಮಾನ ಆದವನಿಗೆ ಅದೇ ಸ್ಥಾನ ಕೊಡುತ್ತೇವೆ. ಕಷ್ಟದ ಸ್ಥಿತಿಯಲ್ಲಿ ಇದ್ದವರು ಸಿನಿಮಾ ಮಾಡಿ ನಮಗೆ ಅನ್ನ ಹಾಕಿದಾರೆ. ಯಜಮಾನ ಎನ್ನೋದನ್ನು ತೆಗೆದು ಹಾಕೋಕೆ ಆಗುತ್ತಿಲ್ಲ. ಚಿಕ್ಕದಿಂದಾಗಿನಿಂದ ಅದು ಬಂದಿದೆ’ ಎಂದು ಅಣ್ಣಾವ್ರು ಹೇಳಿದ್ದರು.

ರಾಜ್​ಕುಮಾರ್ ಅವರು ತಮ್ಮ ನಿರ್ಮಾಪಕರನ್ನು ವಿಶೇಷವಾಗಿ ಗೌರವಿಸುತ್ತಿದ್ದರು. ಅವರು ಅನ್ನ ಕೊಟ್ಟ ಧಣಿಗಳು ಎನ್ನುವ ಅಭಿಪ್ರಾಯ ರಾಜ್​ಕುಮಾರ್ ಅವರದ್ದಾಗಿತ್ತು. ಅಲ್ಲದೆ, ತಮ್ಮಿಂದ ಯಾರಿಗೋ ಸಹಾಯ ಆಗುತ್ತಿದೆ ಎಂದರೆ ರಾಜ್​ಕುಮಾರ್ ಅದನ್ನು ತಡೆಯುತ್ತಾ ಇರಲಿಲ್ಲ.

ಇದನ್ನೂ ಓದಿ: ‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್​ನಲ್ಲಿ ರಜನಿ ಮಾತು; ಇಲ್ಲಿದೆ ಹಳೆಯ ವಿಡಿಯೋ

ಒಮ್ಮೆ ರಾಜ್​ಕುಮಾರ್ ಸಿನಿಮಾ ಬಗ್ಗೆ ಪತ್ರಿಕೆಯಲ್ಲಿ ಕೆಟ್ಟದಾಗಿ ಬರೆಯಲಾಗಿತ್ತು. ಈ ಬಗ್ಗೆ ರಾಜ್​ಕುಮಾರ್ ಬಳಿ ಪಾರ್ವತಮ್ಮ ಅವರು ಕೇಳಿದ್ದರು. ಆ ಪತ್ರಕರ್ತನ ಕರೆಸಿ ಮಾತನಾಡೋಣವೇ ಎಂದು ಕೇಳಿದ್ದರು ಅವರು. ಆದರೆ, ಇದಕ್ಕೆ ರಾಜ್​ಕುಮಾರ್ ಒಪ್ಪಿರಲಿಲ್ಲ. ನಮ್ಮಿಂದ ಅವರ ಬಾಳು ನಡೆಯುತ್ತಿದೆಯಲ್ಲ, ಬಿಡು ಎಂದು ಹೇಳಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.