ರಕ್ಷ್ ಬರ್ತ್​ಡೇಗೆ ಬಂತು ‘ಬರ್ಮ’ ಸಿನಿಮಾ ಹೊಸ ಪೋಸ್ಟರ್​; ಎಲ್ಲಾ ರಕ್ತಸಿಕ್ತ

|

Updated on: Jan 08, 2024 | 2:27 PM

‘ಬರ್ಮ’ ಹೊಸ ಪೋಸ್ಟರ್ ಗಮನ ಸೆಳೆಯುತ್ತಿದೆ. ರಕ್ಷ್ ಅವರ ಕೈಯಲ್ಲಿ ಕೊಡಲಿ ಇದೆ. ರಕ್ತಸಿಕ್ತ ಅವತಾರದಲ್ಲಿರುವ ಅವರು, ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ‘ಬರ್ಮ’ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಇರಲಿದೆ ಎಂದು ತಂಡ ಹೇಳಿಕೊಂಡಿದೆ.

ರಕ್ಷ್ ಬರ್ತ್​ಡೇಗೆ ಬಂತು ‘ಬರ್ಮ’ ಸಿನಿಮಾ ಹೊಸ ಪೋಸ್ಟರ್​; ಎಲ್ಲಾ ರಕ್ತಸಿಕ್ತ
ಬರ್ಮ
Follow us on

‘ಗಟ್ಟಿಮೇಳ’ ಧಾರಾವಾಹಿ (Gattimela Serial) ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡವರು ರಕ್ಷ್ ರಾಮ್. ಅವರಿಗೆ ಇಂದು (ಜನವರಿ 8) ಜನ್ಮದಿನದ ಸಂಭ್ರಮ. ಸಾಮಾನ್ಯವಾಗಿ ಹೀರೋಗಳ ಜನ್ಮದಿನದಂದು ಅವರು ನಟಿಸುತ್ತಿರುವ ಸಿನಿಮಾ ಕಡೆಯಿಂದ ಸರ್​ಪ್ರೈಸ್ ಸಿಗುತ್ತದೆ. ಅದೇ ರೀತಿ ರಕ್ಷ್ ಅವರ ಮುಂದಿನ ಸಿನಿಮಾ ‘ಬರ್ಮ’ ಚಿತ್ರದ ಹೊಸ ಲುಕ್ ರಿವೀಲ್ ಆಗಿದೆ. ರಕ್ತಸಿಕ್ತ ಅವತಾರದಲ್ಲಿ ರಕ್ಷ್ ಅವರು ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಅಭಿಮಾನಿಗಳಿಗೆ ಇಷ್ಟವಾಗಿದೆ.

‘ಬರ್ಮ’ ಹೊಸ ಪೋಸ್ಟರ್ ಗಮನ ಸೆಳೆಯುತ್ತಿದೆ. ರಕ್ಷ್ ಅವರ ಕೈಯಲ್ಲಿ ಕೊಡಲಿ ಇದೆ. ರಕ್ತಸಿಕ್ತ ಅವತಾರದಲ್ಲಿರುವ ಅವರು, ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ‘ಬರ್ಮ’ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಇರಲಿದೆ ಎಂದು ತಂಡ ಹೇಳಿಕೊಂಡಿದೆ. ಅದಕ್ಕೆ ಪೂರಕವಾಗಿ ಪೋಸ್ಟರ್ ಮೂಡಿ ಬಂದಿದೆ. ಈ ಚಿತ್ರದ ಮೂಲಕ ಕಿರುತೆರೆ ನಟ ರಕ್ಷ್ ಅವರು ಪ್ಯಾನ್ ಇಂಡಿಯಾ ಹೀರೋ ಆಗುತ್ತಿದ್ದಾರೆ. ಈ ಚಿತ್ರವನ್ನು ರಕ್ಷ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ‘ಶ್ರೀ ಸಾಯಿ ಆಂಜನೇಯ’ ಬ್ಯಾನರ್ ಮೂಲಕ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಮೊದಲು ‘ಜೇಮ್ಸ್’, ‘ಭರ್ಜರಿ’ ರೀತಿಯ ಸಿನಿಮಾಗಳನ್ನು ನೀಡಿದ ಚೇತನ್​ ಕುಮಾರ್ ಅವರು ‘ಬರ್ಮ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಮೊದಲು ‘ಭರ್ಜರಿ’ ಹಾಗೂ ‘ಬಹದ್ದೂರ್’ ಸಿನಿಮಾಗಳಲ್ಲಿ ಚೇತನ್ ಕುಮಾರ್ ಹಾಗೂ ಹರಿಕೃಷ್ಣ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಇವರು ಮೂರನೇ ಬಾರಿಗೆ ಒಂದಾಗಿದ್ದಾರೆ. ‘ಜೇಮ್ಸ್​’ ಚಿತ್ರವನ್ನು ಹೊರತುಪಡಿಸಿ ಚೇತನ್ ಕುಮಾರ್ ನಿರ್ದೇಶನ ಮಾಡಿದ ‘ಬಹದ್ದೂರ್’, ‘ಭರ್ಜರಿ’ ಹಾಗೂ ‘ಭರಾಟೆ’ ಸಿನಿಮಾ ‘ಬ’ ಅಥವಾ ‘ಭ’ ಅಕ್ಷರದಿಂದ ಪ್ರಾರಂಭ ಆಗಿದ್ದವು. ‘ಬರ್ಮ’ದಲ್ಲೂ ಅದು ಮುಂದುವರಿದಿದೆ.

ಇದನ್ನೂ ಓದಿ: ‘ಬರ್ಮ’ನಲ್ಲಿ ಬಾಲಿವುಡ್ ನಟ: ಮತ್ತೆ ಕನ್ನಡಕ್ಕೆ ಬಂದ ನಟ ಶಾವರ್ ಅಲಿ

‘ಬರ್ಮ’ ಸಿನಿಮಾದಲ್ಲಿ ಶಾವರ್ ಅಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾ ಬಳಗ ಇದೆ. ‘ಬರ್ಮ’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ ಅನ್ನೋದು ವಿಶೇಷ. ರಕ್ಷ್ ಅವರು ನಟಿಸುತ್ತಿದ್ದ ‘ಗಟ್ಟಿಮೇಳ’ ಧಾರಾವಾಹಿ ಇತ್ತೀಚೆಗೆ ಪೂರ್ಣಗೊಂಡಿದೆ. ಈಗ ಅವರು ಹಿರಿತೆರೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಅವರನ್ನು ದೊಡ್ಡ ಪರದೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ‘ಬರ್ಮ’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:26 pm, Mon, 8 January 24