ಆಗ ‘ಕಿರಿಕ್​ ಪಾರ್ಟಿ’, ಈಗ ‘ಬ್ಯಾಚುಲರ್ ಪಾರ್ಟಿ’; ರಕ್ಷಿತ್​ ಶೆಟ್ಟಿ ಬಳಗದಿಂದ ಹೊಸ ಸಿನಿಮಾ

|

Updated on: Dec 13, 2023 | 6:15 PM

‘ಬ್ಯಾಚುಲರ್ ಪಾರ್ಟಿ’ ಹೇಗಿರಲಿದೆ ಎಂಬುದರ ಝಲಕ್ ತೋರಿಸಲು ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ದಿಗಂತ್, ಲೂಸ್ ಮಾದ ಯೋಗಿ ಮತ್ತು ಅಚ್ಯುತ್ ಕುಮಾರ್ ಅವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಅಭಿಜಿತ್ ಮಹೇಶ್ ನಿರ್ದೇಶನ ಮಾಡುತ್ತಿದ್ದು, ರಕ್ಷಿತ್ ಶೆಟ್ಟಿ ಮತ್ತು ಅಮಿತ್ ಗುಪ್ತ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಆಗ ‘ಕಿರಿಕ್​ ಪಾರ್ಟಿ’, ಈಗ ‘ಬ್ಯಾಚುಲರ್ ಪಾರ್ಟಿ’; ರಕ್ಷಿತ್​ ಶೆಟ್ಟಿ ಬಳಗದಿಂದ ಹೊಸ ಸಿನಿಮಾ
ದಿಗಂತ್​, ಅಚ್ಯುತ್​ ಕುಮಾರ್​, ಯೋಗಿ, ರಕ್ಷಿತ್​ ಶೆಟ್ಟಿ
Follow us on

2016ರ ಡಿಸೆಂಬರ್​ನಲ್ಲಿ ತೆರೆಕಂಡ ‘ಕಿರಿಕ್​ ಪಾರ್ಟಿ’ (Kirik Party) ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು. ಆ ಸಿನಿಮಾವನ್ನು ನಿರ್ಮಿಸುವ ಮೂಲಕ ರಕ್ಷಿತ್ ಶೆಟ್ಟಿ (Rakshit Shetty) ಅವರು ಭರ್ಜರಿ ಯಶಸ್ಸು ಕಂಡಿದ್ದರು. ಅಂಥದ್ದೇ ಮತ್ತೊಂದು ಸಿನಿಮಾ ಬರಲಿ ಎಂಬುದು ಪ್ರೇಕ್ಷಕರ ಬಯಕೆ ಆಗಿತ್ತು. ಈಗ ಅಂಥವರಿಗೆಲ್ಲ ಖುಷಿ ನೀಡುವಂತಹ ಸುದ್ದಿ ಹೊರಬಿದ್ದಿದೆ. ರಕ್ಷಿತ್​ ಶೆಟ್ಟಿ ಅವರ ಬಳಗದಿಂದ ಹೊಸ ಸಿನಿಮಾ ಅನೌನ್ಸ್​ ಮಾಡಲಾಗಿದೆ. ‘ಬ್ಯಾಚುಲರ್ ಪಾರ್ಟಿ’ (Bachelor Party) ಎಂದು ಈ ಸಿನಿಮಾಗೆ ಹೆಸರು ಇಡಲಾಗಿದೆ. ಈ ಸಿನಿಮಾದಲ್ಲಿ ದಿಗಂತ್​, ಅಚ್ಯುತ್​ ಕುಮಾರ್​, ಲೂಸ್​ ಮಾದ ಯೋಗಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

‘ಕಿರಿಕ್​ ಪಾರ್ಟಿ’ ಬಿಡುಗಡೆಯಾಗಿ ಬರೋಬ್ಬರಿ 7 ವರ್ಷಗಳು ಕಳೆದ ಬಳಿಕ ‘ಬ್ಯಾಚುಲರ್ ಪಾರ್ಟಿ’ ಬರುತ್ತಿದೆ. ‘ಕಿರಿಕ್ ಪಾರ್ಟಿ’ ಸಿನಿಮಾದ ಬರಹಗಾರ ಅಭಿಜಿತ್ ಮಹೇಶ್ ಅವರು ಈಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅವರು ‘ಬ್ಯಾಚುಲರ್ ಪಾರ್ಟಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಚಗುಳಿ ಇಡುವಂತಹ ಸಂಭಾಷಣೆಗಳ ಮೂಲಕ ಗುರುತಿಸಿಕೊಂಡ ಅವರು ಈಗ ನಿರ್ದೇಶಕರಾಗಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

‘ಬ್ಯಾಚುಲರ್ ಪಾರ್ಟಿ’ ಹೇಗಿರಲಿದೆ ಎಂಬುದರ ಝಲಕ್ ತೋರಿಸಲು ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ದಿಗಂತ್, ಲೂಸ್ ಮಾದ ಯೋಗಿ ಮತ್ತು ಅಚ್ಯುತ್ ಕುಮಾರ್ ಅವರು ಈ ಪೋಸ್ಟರ್‌ನಲ್ಲಿದ್ದಾರೆ. ಅವರ ಹಿಂಬದಿಯಲ್ಲಿ ಬ್ಯಾಂಕಾಕ್‌ನ ಲೊಕೇಷನ್​ಗಳು ಕಾಣಿಸಿವೆ. ಅಚ್ಯುತ್ ಕುಮಾರ್​ ಅವರು ವ್ಹೀಲ್​ಚೇರ್‌ನಲ್ಲಿ ಕುಳಿತಿದ್ದಾರೆ. ಅವರ ಹಿಂದೆ ಯೋಗಿ ಮತ್ತು ದಿಗಂತ್ ಓಡಿ ಬರುತ್ತಿರುವ ದೃಶ್ಯವಿದೆ.

ಇದನ್ನೂ ಓದಿ: ಹಿಂದಿಗೆ ರಿಮೇಕ್ ಆಗಲಿದೆ ರಕ್ಷಿತ್ ಶೆಟ್ಟಿ ನಟನೆಯ SSE? ಮಾತುಕತೆಗೆ ಬಂದ ಖ್ಯಾತ ನಿರ್ಮಾಪಕ

ಪರಂವಃ ಸ್ಟೂಡಿಯೋಸ್ ಸಂಸ್ಥೆಯ ಮೂಲಕ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ‘ಬ್ಯಾಚುಲರ್ ಪಾರ್ಟಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಅರವಿಂದ್ ಅವರ ಛಾಯಾಗ್ರಹಣ, ಅರ್ಜುನ್ ರಾಮು ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಪೋಸ್ಟರ್​ ಮೂಲಕ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಕೌತುಕ ಸೃಷ್ಟಿ ಮಾಡಿದೆ. ರೀಲ್ಸ್​ ರೀತಿಯಲ್ಲಿ ಈ ಪೋಸ್ಟರ್​ ಬಿಡುಗಡೆ ಆಗಿದೆ. ಈಗಾಗಲೇ ಈ ಸಿನಿಮಾದ ಶೂಟಿಂಗ್​ ಮುಗಿದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.