‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ ಸಿನಿಮಾ ( 777 Charlie) ಜೂನ್ 10ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ರಿಲೀಸ್ಗೂ ಮುನ್ನವೇ ಈ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ. ದೇಶದ 21 ನಗರಗಳಲ್ಲಿ ಈ ಚಿತ್ರದ ಪ್ರೀಮಿಯರ್ ಶೋ ನಡೆದಿರುವುದು ವಿಶೇಷ. ದೆಹಲಿ, ಲಖನೌ, ಹೈದರಾಬಾದ್ ಸೇರಿದಂತೆ ಅನೇಕ ನಗರಗಳಲ್ಲಿ ಈ ಚಿತ್ರವನ್ನು ಈಗಾಗಲೇ ಕೆಲವು ಪ್ರೇಕ್ಷಕರು ವೀಕ್ಷಿಸಿ ಖುಷಿಪಟ್ಟಿದ್ದಾರೆ. ಜೂನ್ 9ರಂದು ಕರ್ನಾಟಕದ ಹಲವು ಚಿತ್ರಮಂದಿರದಲ್ಲಿ ಪೂರ್ವಭಾವಿ ಪ್ರದರ್ಶನ ನಡೆಯಲಿದೆ. 100ಕ್ಕೂ ಅಧಿಕ ಕಡೆಗಳಲ್ಲಿ ಪ್ರೀಮಿಯರ್ ಶೋ ಆಗುತ್ತಿರುವುದು ವಿಶೇಷ. ಈಗಾಗಲೇ ಸಿನಿಮಾ ನೋಡಿರುವ ಹೊರರಾಜ್ಯಗಳ ಪ್ರೇಕ್ಷಕರು ‘777 ಚಾರ್ಲಿ’ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಶ್ವಾನಪ್ರಿಯರೆಲ್ಲರೂ ಈ ಸಿನಿಮಾ ನೋಡಿದ ಬಳಿಕ ಎಮೋಷನಲ್ ಆಗುತ್ತಿದ್ದಾರೆ. ಈ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶನ ಮಾಡಿದ್ದು, ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಡುಡಿಯೋಸ್ ಮೂಲಕ ನಿರ್ಮಾಣ ಆಗಿದೆ.
ಕರ್ನಾಟಕದಲ್ಲಿ ಕೆಆರ್ಜಿ ಸ್ಟುಡಿಯೋಸ್ ಮೂಲಕ ‘777 ಚಾರ್ಲಿ’ ಸಿನಿಮಾ ರಿಲೀಸ್ ಆಗುತ್ತಿದೆ. ಪ್ರೀಮಿಯರ್ ಶೋಗಳ ಸಂಖ್ಯೆಯ ಕುರಿತು ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ತಾವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರೀಮಿಯರ್ ಶೋ ಆಯೋಜಿಸಿದ್ದು, ಬುಕಿಂಗ್ ಅದ್ಭುತವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 777 Charlie: ಸುದ್ದಿಗೋಷ್ಠಿಗೆ ಚಾರ್ಲಿ ಶ್ವಾನಕ್ಕೆ ನೋ ಎಂಟ್ರಿ; ‘ಮನಸ್ಸು ಬದಲಾಗ್ಬೇಕು’ ಎಂದ ರಕ್ಷಿತ್ ಶೆಟ್ಟಿ
‘ಕರ್ನಾಟಕದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರದ ವಿಶೇಷವೆಂದರೆ ಇದೇ ಮೊದಲ ಬಾರಿಗೆ ಜೂನ್ 9 ರಂದು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗಾಗಿ ಪೂರ್ವಭಾವಿ ಪ್ರದರ್ಶನ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ 55 ಕಡೆ ನಡೆದರೆ, ಉಳಿದಂತೆ ಕರ್ನಾಟಕದ ವಿವಿಧ ಕಡೆ ನಡೆಯಲಿದೆ. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಎರಡರಲ್ಲೂ ಪ್ರದರ್ಶನ ನಡೆಯಲಿದೆ’ ಎಂದು ಕಾರ್ತಿಕ್ ಗೌಡ ಹೇಳಿದ್ದಾರೆ.
Thank you @Karthik1423 for believing in us and for setting up a huge launch pad for #777Charlie movie ?#777Charlie releasing worldwide on June 10 ♥️ pic.twitter.com/hicHDB4Vy6
— 777 Charlie (@777CharlieMovie) June 7, 2022
‘777 ಚಾರ್ಲಿ’ ಸಿನಿಮಾದಲ್ಲಿ ಶ್ವಾನ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕಥೆ ಇದೆ. ನೋಬಿನ್ ಪೌಲ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತಾ ಶೃಂಗೇರಿ, ರಾಜ್ ಬಿ. ಶೆಟ್ಟಿ, ದಾನಿಶ್ ಸೇಠ್, ಬಾಬಿ ಸಿಂಹ ಮುಂತಾದವರು ನಟಿಸಿದ್ದಾರೆ.
– Taran Adarsh (@taran_adarsh) 9 June 2022
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:53 am, Wed, 8 June 22