‘777 ಚಾರ್ಲಿ’ ಸಿನಿಮಾದಲ್ಲಿ ಡಿಲೀಟ್ ಮಾಡಿದ್ದ ದೃಶ್ಯವನ್ನು ರಿಲೀಸ್ ಮಾಡಿದ ಟೀಂ; ಇಲ್ಲಿದೆ ವಿಡಿಯೋ

ಆದ್ರಿಕಾ ಬರ್ತ್​​​ಡೇ ಸೆಲಬ್ರೇಷನ್​ ದೃಶ್ಯವನ್ನು ತಂಡದವರು ಶೂಟ್ ಮಾಡಿಕೊಂಡಿದ್ದರು. ಆದರೆ, ಸಿನಿಮಾದ ಅವಧಿ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಆ ದೃಶ್ಯಕ್ಕೆ ಕತ್ತರಿ ಹಾಕಲಾಗಿತ್ತು. ಈಗ ಅದನ್ನು ಯೂಟ್ಯೂಬ್​ನಲ್ಲಿ ರಿಲೀಸ್ ಮಾಡಲಾಗಿದೆ.

‘777 ಚಾರ್ಲಿ’ ಸಿನಿಮಾದಲ್ಲಿ ಡಿಲೀಟ್ ಮಾಡಿದ್ದ ದೃಶ್ಯವನ್ನು ರಿಲೀಸ್ ಮಾಡಿದ ಟೀಂ; ಇಲ್ಲಿದೆ ವಿಡಿಯೋ
777 ಚಾರ್ಲಿ
Edited By:

Updated on: Jul 09, 2022 | 5:49 PM

ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಿಸಿ, ನಟಿಸಿದ ‘777 ಚಾರ್ಲಿ’ (777 Charlie) ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಕಡಿಮೆ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಸುಮಾರು 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಇದರಿಂದ ರಕ್ಷಿತ್ ಶೆಟ್ಟಿ ಸಖತ್ ಲಾಭ ಕಂಡಿದ್ದಾರೆ. ಸಿನಿಮಾ ತೆರೆಗೆ ಬಂದು ಒಂದು ತಿಂಗಳು ಕಳೆದರೂ ಚಿತ್ರದ ಜನಪ್ರಿಯತೆ ಕಡಿಮೆ ಆಗಿಲ್ಲ. ಇನ್ನೂ ಅನೇಕ ಕಡೆಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗ ಸಿನಿಮಾದಲ್ಲಿ ಡಿಲೀಟ್ ಮಾಡಿದ ದೃಶ್ಯವನ್ನು ರಿಲೀಸ್ ಮಾಡಲಾಗಿದೆ. ಇದನ್ನು ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಧರ್ಮ (ರಕ್ಷಿತ್ ಶೆಟ್ಟಿ) ತನ್ನದೇ ಕೆಲಸದಲ್ಲಿ ಮುಳುಗಿರುತ್ತಾನೆ. ಆತನಿಗೆ ಫ್ಯಾಕ್ಟರಿ ಮನೆ ಎರಡೇ ಲೋಕ. ಅವನ ಲೈಫ್​ಗೆ ಚಾರ್ಲಿ ಎಂಟ್ರಿ ಆಗುತ್ತದೆ. ನಂತರ ಏನೆಲ್ಲ ಆಗುತ್ತದೆ ಅನ್ನೋದು ‘777 ಚಾರ್ಲಿ’ ಸಿನಿಮಾದ ಕಥೆ. ಈ ಚಿತ್ರದಲ್ಲಿ ಆದ್ರಿಕಾ ಎಂಬ ಪಾತ್ರವನ್ನು ಬಾಲ ನಟಿ ಶಾರ್ವರಿ ನಿರ್ವಹಿಸಿದ್ದಾಳೆ. ಆದ್ರಿಕಾ ಬರ್ತ್​​​ಡೇ ಸೆಲಬ್ರೇಷನ್​ ದೃಶ್ಯವನ್ನು ತಂಡದವರು ಶೂಟ್ ಮಾಡಿಕೊಂಡಿದ್ದರು. ಆದರೆ, ಸಿನಿಮಾದ ಅವಧಿ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಆ ದೃಶ್ಯಕ್ಕೆ ಕತ್ತರಿ ಹಾಕಲಾಗಿತ್ತು. ಈಗ ಅದನ್ನು ಯೂಟ್ಯೂಬ್​ನಲ್ಲಿ ರಿಲೀಸ್ ಮಾಡಲಾಗಿದೆ.

ಇದನ್ನೂ ಓದಿ
777 Charlie Review: ಪ್ರಾಣಿಪ್ರಿಯರನ್ನು ನಗಿಸಿ, ಅಳಿಸುವ ಧರ್ಮ-ಚಾ​ರ್ಲಿಯ ಎಮೋಷನಲ್​ ಜರ್ನಿ; ಇಲ್ಲಿದೆ ವಿಮರ್ಶೆ
ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ನೋಡಿ ಮೆಚ್ಚಿಕೊಂಡ ನಟಿ ರಮ್ಯಾ ಹೇಳಿದ್ದೇನು?
777 Charlie: ಸುದ್ದಿಗೋಷ್ಠಿಗೆ ಚಾರ್ಲಿ ಶ್ವಾನಕ್ಕೆ ನೋ ಎಂಟ್ರಿ; ‘ಮನಸ್ಸು ಬದಲಾಗ್ಬೇಕು’ ಎಂದ ರಕ್ಷಿತ್​ ಶೆಟ್ಟಿ
777 Charlie: ‘777 ಚಾರ್ಲಿ’ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್​ ಶೆಟ್ಟಿ

ಸಿನಿಮಾದಲ್ಲಿ ಆದ್ರಿಕಾ ಬರ್ತ್​ಡೇಗಾಗಿ ಎಲ್ಲರೂ ಒಂದೆಡೆ ಸೇರಿರುತ್ತಾರೆ. ಈ ವೇಳೆ ಧರ್ಮ ಹಾಗೂ ಚಾರ್ಲಿಯ ಎಂಟ್ರಿ ಆಗುತ್ತದೆ. ಆದ್ರಿಕಾಗಾಗಿ ಪುಟಾಣಿ ಗಿಫ್ಟ್ ಕೂಡ ನೀಡುತ್ತಾಳೆ ಚಾರ್ಲಿ. ಸದ್ಯ ಈ ದೃಶ್ಯ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ. ಇದಕ್ಕೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ.

ಇದನ್ನೂ ಓದಿ: Rakshit Shetty: 150 ಕೋಟಿ ರೂ. ಗಳಿಸಿದ ‘777 ಚಾರ್ಲಿ’; ಪ್ರಾಣಿಗಳ ರಕ್ಷಣೆಗೆ ಶೇ.5ರಷ್ಟು ಹಣ ದೇಣಿಗೆ ನೀಡಿದ ರಕ್ಷಿತ್​ ಶೆಟ್ಟಿ

ಜೂನ್ 10ರಂದು ‘777 ಚಾರ್ಲಿ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಜನರಿಗೆ ಎಮೋಷನಲ್​ ಆಗಿ ಕನೆಕ್ಟ್ ಆಯಿತು. ನಾಯಿ ಹಾಗೂ ಮನುಷ್ಯನ ನಡುವಿನ ಬಾಂಧವ್ಯದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಈ ಸಿನಿಮಾ ಇತ್ತೀಚೆಗೆ 25ನೇ ದಿನವನ್ನು ಪೂರೈಸಿತು. ಈ ವೇಳೆ ಮಾತನಾಡಿದ್ದ ರಕ್ಷಿತ್ ಶೆಟ್ಟಿ, ‘ಸಿನಿಮಾ ಇನ್ನೂ ಹಲವು ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಮುಂದೆ ಅವಕಾಶ ಸಿಕ್ಕರೆ ‘777 ಚಾರ್ಲಿ 2’ ಮಾಡುತ್ತೇವೆ’ ಎಂದಿದ್ದರು.