ಮನೆಯ ಟೆರಸ್ ಮೇಲೆ ರಕ್ಷಿತ್ ಶೆಟ್ಟಿ ಯೋಗಾಸನ ಮಾಡುತ್ತಿರುತ್ತಾರೆ. ಪಕ್ಕದಲ್ಲೇ ಇರುವ ಬಾಯ್ಸ್ ಹಾಸ್ಟೆಲ್ ಕಡೆಗೆ ಕಣ್ಣು ಹಾಯಿಸುತ್ತಾರೆ. ಅಲ್ಲಿ ಹುಡುಗರು ಮದ್ಯಪಾನ ಮಾಡುತ್ತಿರುವುದು ರಕ್ಷಿತ್ ಕಣ್ಣಿಗೆ ಕಾಣುತ್ತದೆ! ‘ಛೇ ಛೇ.. ಎಂಥ ಕಾಲ ಬಂತಪ್ಪ. ಇವತ್ತಿನ ಕಾಲದ ಹುಡುಗರಿಗೆ ಲೈಫ್ನಲ್ಲಿ ಸೀರಿಯಸ್ನೆಸ್ ಅನ್ನೋದೇ ಇಲ್ಲ. ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲಪ್ಪ. ಬೆಳಗ್ಗೆ ಬೆಳಗ್ಗೆನೇ ಕುಡೀತಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಮರುಕ್ಷಣವೇ ಸೀನ್ ಬದಲಾಗಿಬಿಡುತ್ತದೆ.
ರಕ್ಷಿತ್ ನಿಂತುಕೊಂಡು ಹಾಸ್ಟೆಲ್ ಹುಡುಗರಿಗೆ ಬಯ್ಯುತ್ತಿರುವಾಗಲೇ ಅವರ ಫ್ರೆಂಡ್ಸ್ ಆಗಮಿಸುತ್ತಾರೆ. ಅವರನ್ನು ಕಂಡು ಕೊಂಚ ಗಾಬರಿಯಾದ ರಕ್ಷಿತ್ ಶೆಟ್ಟಿ, ‘ನೀವೆಲ್ಲ ಇಲ್ಲಿ ಏನು ಮಾಡ್ತಿದ್ದೀರೋ’ ಅಂತ ಕೇಳ್ತಾರೆ. ‘ಬೆಳಗ್ಗೆ ಬೆಳಗ್ಗನೇ ಎಣ್ಣೆ ತಗೊಂಡು ಬನ್ನಿ. ಹೊಸ ಬೈನಾಕ್ಯುಲರ್ ತಗೊಂಡೀದೀನಿ. ಲೇಡೀಸ್ ಹಾಸ್ಟೆಲ್ನಲ್ಲಿ ಒಳ್ಳೊಳ್ಳೆಯ ಹಕ್ಕಿ ನೋಡೋಣ ಅಂತ ನೀನೇ ತಾನೆ ಹೇಳಿದ್ದು’ ಎಂದು ರಕ್ಷಿತ್ ಶೆಟ್ಟಿ ಫ್ರೆಂಡ್ಸ್ ತಿರುಗೇಟು ಕೊಡುತ್ತಾರೆ. ಅಲ್ಲಿಗೆ ರಕ್ಷಿತ್ ಶೆಟ್ಟಿ ಸಾಕ್ಷಿ ಸಮೇತ ಸಿಕ್ಕಿಬೀಳುತ್ತಾರೆ!
ಅಷ್ಟಕ್ಕೂ ಇದೆಲ್ಲವೂ ರಿಯಲ್ ಅಲ್ಲ. ಅಪ್ಪಟ ರೀಲ್. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಎಂಬ ಕನ್ನಡ ಸಿನಿಮಾದ ಪ್ರಚಾರದ ಸಲುವಾಗಿ ಇಂಥದ್ದೊಂದು ವಿಡಿಯೋ ಮಾಡಲಾಗಿದೆ. ಅದರಲ್ಲಿ ಈ ಮೇಲಿನ ದೃಶ್ಯ ಗಮನ ಸೆಳೆಯುತ್ತಿದೆ. ಈಗಾಗಲೇ ಕೆಲವು ಟೀಸರ್ಗಳನ್ನು ಬಿಡುಗಡೆ ಮಾಡಿಕೊಂಡಿರುವ ಈ ಚಿತ್ರತಂಡದ ಕ್ರಿಯೇಟಿವಿಟಿಗೆ ಸ್ಯಾಂಡಲ್ವುಡ್ನ ಅನೇಕ ಸ್ಟಾರ್ಗಳು ಫಿದಾ ಆಗಿದ್ದಾರೆ.
ನಿತಿನ್ ಕೃಷ್ಣಮೂರ್ತಿ ಅವರು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರ ಕೆಲಸವನ್ನು ಮೆಚ್ಚಿಕೊಂಡಿರುವ ಪುನೀತ್ ರಾಜ್ಕುಮಾರ್, ರಿಷಬ್ ಶೆಟ್ಟಿ, ಕಿಚ್ಚ ಸುದೀಪ್ ಮುಂತಾದವರು ಈಗಾಗಲೇ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ತುಂಬಾ ಕ್ರಿಯೇಟೀವ್ ಆದಂತಹ ಪ್ರೊಮೋಷನಲ್ ವಿಡಿಯೋಗಳಲ್ಲಿ ನಟಿಸುವ ಮೂಲಕ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಈಗ ರಕ್ಷಿತ್ ಶೆಟ್ಟಿ ಕೂಡ ಒಂದು ಹೊಸ ಪ್ರಮೋಷನಲ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಸ್ನೀಕ್ ಪೀಕ್ ದೃಶ್ಯ ಕೂಡ ಇದೆ.
Here, take a a quick glimpse into ಹಾಸ್ಟೆಲ್ ಹುಡುಗರ hilariously erratic life ?https://t.co/s9PpK8GCEA
Still in awe of this team’s creativity. All the best team #HostelHudugaruBekagiddare ?@AJANEESHB
— Rakshit Shetty (@rakshitshetty) April 15, 2021
ಸದ್ಯ ಈ ವಿಡಿಯೋವನ್ನು ರಕ್ಷಿತ್ ಶೆಟ್ಟಿ ಅವರು ತಮ್ಮ ಸೋಶಿಯಲ್ ಮಿಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ಬಿಡುಗಡೆ ಮಾಡಿದ್ದಾರೆ. ಅದನ್ನು ಕಂಡ ಸಿನಿಪ್ರಿಯರು ಮೆಚ್ಚುಗೆ ಸೂಚಿಸುತ್ತಿದ್ದು, ಎಲ್ಲ ಕಡೆ ವೈರಲ್ ಆಗುತ್ತಿದೆ. ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಹೆಚ್ಚಿದೆ.
ಇದನ್ನೂ ಓದಿ: Rakshit Shetty: ರಶ್ಮಿಕಾ ಜೊತೆಗಿನ 6 ವರ್ಷದ ಹಳೇ ವಿಡಿಯೋ ಹಂಚಿಕೊಂಡ ರಕ್ಷಿತ್ ಶೆಟ್ಟಿ! ಸಾನ್ವಿಗೆ ಕರ್ಣನ ಬರ್ತ್ಡೇ ಗಿಫ್ಟ್