AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನು ಬಿಗ್ ಬಾಸ್​ನ ಮಂಗ ಮಾಡೋಕಾಗಲ್ಲ’; ರಕ್ಷಿತಾ ಸಣ್ಣ ಬುದ್ಧಿ ಎಕ್ಸ್​ಪೋಸ್ ಮಾಡಿದ ಧ್ರುವಂತ್

ಬಿಗ್ ಬಾಸ್ ಸೀಕ್ರೆಟ್ ರೂಂನಲ್ಲಿ ಧ್ರುವಂತ್ ರಕ್ಷಿತಾ ಶೆಟ್ಟಿ ಅವರ 'ಸಣ್ಣ ಬುದ್ಧಿ'ಯನ್ನು ಎಕ್ಸ್ಪೋಸ್ ಮಾಡಿದ್ದಾರೆ. ರಕ್ಷಿತಾ ಅವರ ಬದಲಾವಣೆ, ಕಾವ್ಯಾ ನಾಮಿನೇಷನ್ ಕುರಿತ ವಾದವನ್ನು ಧ್ರುವಂತ್ ಸೂಕ್ಷ್ಮವಾಗಿ ಗಮನಿಸಿದ್ದಾರೆ. 'ನೀನು ಬಿಗ್ ಬಾಸ್​ನ ಮಂಗ ಮಾಡೋಕಾಗಲ್ಲ' ಎಂದು ಧ್ರುವಂತ್ ಹೇಳಿಕೆ ವೈರಲ್ ಆಗಿದೆ.

‘ನೀನು ಬಿಗ್ ಬಾಸ್​ನ ಮಂಗ ಮಾಡೋಕಾಗಲ್ಲ’; ರಕ್ಷಿತಾ ಸಣ್ಣ ಬುದ್ಧಿ ಎಕ್ಸ್​ಪೋಸ್ ಮಾಡಿದ ಧ್ರುವಂತ್
ರಕ್ಷಿತಾ-ಧ್ರುವಂತ್
ರಾಜೇಶ್ ದುಗ್ಗುಮನೆ
|

Updated on:Dec 16, 2025 | 9:55 AM

Share

ಬಿಗ್ ಬಾಸ್ ಮನೆಯಲ್ಲಿ ಸದ್ಯ ಸೀಕ್ರೆಟ್ ರೂಂ ಟಾಸ್ಕ್ ನಡೆಯುತ್ತಿದೆ. ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಅವರನ್ನು ಈ ರೂಂನಲ್ಲಿ ಇಡಲಾಗಿದೆ. ಇಬ್ಬರ ಮಧ್ಯೆ ಆಗಾಗ ಕಿರಿಕ್​ಗಳು ಆಗುತ್ತಲೇ ಇವೆ. ಈ ಮಧ್ಯೆ ಧ್ರುವಂತ್ ಅವರು ರಕ್ಷಿತಾ ಶೆಟ್ಟಿಯ ಸಣ್ಣ ಬುದ್ಧಿಯನ್ನು ಎಕ್ಸ್​ಪೋಸ್ ಮಾಡುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಬಿಗ್ ಬಾಸ್​ ಆರಂಭದಲ್ಲಿ ರಕ್ಷಿತಾ ಶೆಟ್ಟಿ ಅವರು ಇದ್ದಿದ್ದೇ ಬೇರೆ. ಈಗ ಅವರು ಇರೋದೇ ಬೇರೆ. ಕಿಚ್ಚನ ಚಪ್ಪಾಳೆ ಸಿಕ್ಕ ಬಳಿಕ ಅವರು ಸಂಪೂರ್ಣವಾಗಿ ಬದಲಾದರು ಎಂಬ ಮಾತಿದೆ. ಅದೆಷ್ಟರ ಮಟ್ಟಿಗೆ ಎಂದರೆ ಅವರು ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಈಗ ಇಲ್ಲ. ಈ ಬದಲಾವಣೆಯನ್ನು ಧ್ರುವಂತ್ ಅವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರು ಈ ಬಗ್ಗೆ ಮಾತನಾಡಿದ್ದಾರೆ.

ಮಾಳು ಅವರನ್ನು ಸೇವ್ ಮಾಡಿ, ಕಾವ್ಯಾ ಅವರನ್ನು ನಾಮಿನೇಟ್ ಮಾಡಬೇಕು ಎಂಬುದು ರಕ್ಷಿತಾ ಶೆಟ್ಟಿ ವಾದ ಆಗಿತ್ತು. ಆದರೆ, ಈ ವಾದವನ್ನು ಧ್ರುವಂತ್ ಅವರು ಒಪ್ಪಿಲ್ಲ. ಮಾಳುಗೆ ಹೋಲಿಸಿದರೆ ಕಾವ್ಯಾ ಸಮರ್ಥ ವ್ಯಕ್ತಿ. ಅವರನ್ನು ನಾಮಿನೇಟ್ ಮಾಡೋದು ಸರಿ ಅಲ್ಲ ಎಂದು ಧ್ರುವಂತ್ ವಾದ ಮಾಡಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಈ ರೀತಿ ಹೇಳಲು ಒಂದು ಕಾರಣ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

Published On - 8:56 am, Tue, 16 December 25