ಧ್ರುವಂತ್, ರಕ್ಷಿತಾ ಶೆಟ್ಟಿ ಇನ್ನೂ ಔಟ್ ಆಗಿಲ್ಲ ಎಂಬ ರಹಸ್ಯ ಪತ್ತೆ ಹಚ್ಚಿದ ರಘು
ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರು ಈಗ ಸೀಕ್ರೆಟ್ ರೂಮ್ನಲ್ಲಿ ಇದ್ದಾರೆ. ಟಿವಿ ಮೂಲಕ ಎಲ್ಲವನ್ನೂ ನೋಡುತ್ತಿದ್ದಾರೆ. ಅವರಿಬ್ಬರು ಸೀಕ್ರೆಟ್ ರೂಮ್ನಲ್ಲಿ ಇದ್ದಾರೆ ಎಂಬುದು ಮನೆಮಂದಿಗೆ ತಿಳಿದಿಲ್ಲ. ಆದರೆ ರಘು ಅವರಿಗೆ ರಹಸ್ಯ ಗೊತ್ತಾಗಿದೆ. ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ರಘು ಅವರು ಅಸಲಿ ವಿಚಾರವನ್ನು ಪತ್ತೆ ಹಚ್ಚಿದ್ದಾರೆ.

ಕಳೆದ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋನಲ್ಲಿ ವೋಟಿಂಗ್ ಲೈನ್ಸ್ ತೆರೆದಿರಲಿಲ್ಲ. ಹಾಗಾಗಿ ಯಾರೂ ಎಲಿಮಿನೇಟ್ ಆಗಲಿಲ್ಲ. ಹಾಗಿದ್ದರೂ ಕೂಡ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ (Rakshith Shetty) ಅವರು ಎಲಿಮಿನೇಟ್ ಆದ ರೀತಿಯಲ್ಲಿ ತೋರಿಸಲಾಯಿತು. ಸದ್ಯಕ್ಕೆ ಅವರಿಬ್ಬರನ್ನು ಸೀಕ್ರೆಟ್ ರೂಮ್ನಲ್ಲಿ ಇರಿಸಲಾಗಿದೆ. ಬಿಗ್ ಬಾಸ್ ಮನೆಯ ಒಳಗಿನ ಸದಸ್ಯರಿಗೆ ಈ ವಿಷಯ ಗೊತ್ತಿಲ್ಲ. ಹಾಗಿದ್ರೂ ಕೂಡ ರಘು (Mutant Raghu) ಅವರಿಗೆ ಈ ಬಗ್ಗೆ ಅನುಮಾನ ಬಂದಿದೆ. ಅದನ್ನು ಅವರು ಗಿಲ್ಲಿ ನಟ ಹಾಗೂ ರಜತ್ ಎದುರು ಹೇಳಿದ್ದಾರೆ.
ಡಬಲ್ ಎಲಿಮಿನೇಷನ್ ಮಾಡಿದ್ದು ಹಲವರಿಗೆ ಅಚ್ಚರಿ ಆಯಿತು. ಧ್ರುವಂತ್ ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಬಹುತೇಕರು ನಿರೀಕ್ಷಿಸಿದ್ದರು. ಆದರೆ ರಕ್ಷಿತಾ ಶೆಟ್ಟಿ ಕೂಡ ಅವರ ಜೊತೆ ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ರಕ್ಷಿತಾ ಶೆಟ್ಟಿ ಅವರು ಫಿನಾಲೆ ತನಕ ಬರುತ್ತಾರೆ ಎಂಬುದು ರಜತ್, ರಘು ಮುಂತಾದವರ ಅಭಿಪ್ರಾಯ ಆಗಿತ್ತು. ಹಾಗಾಗಿ ಈ ಎಲಿಮಿನೇಷನ್ ಫೇಕ್ ಇರಬಹುದು ಎಂದು ರಘು ಅವರಿಗೆ ಸಂಶಯ ಮೂಡಿದೆ.
ಇನ್ನೊಂದು ಅಂಶವನ್ನು ರಘು ಅವರು ಗಮನಿಸಿ ಹೇಳಿದ್ದಾರೆ. ‘ಇನ್ನೂ ಸೌಂಡ್ ಬಂದಿಲ್ಲ. ಏನೋ ಟ್ವಿಸ್ಟ್ ಇದೆ. ಪ್ರತಿ ಬಾರಿ ಈ ಸಮಯಕ್ಕೆ ತಕ್ಷಣ ಸೌಂಡ್ ಬರುತ್ತದೆ. ಬ್ಯಾಕ್ ಸ್ಟೇಜ್ ಇಂದ ಹೋಗಿ ಮಾತನಾಡಿಸುತ್ತಾರೆ. ಅವರ ವಿಟಿ ಹಾಕುತ್ತಾರೆ. ಜನರೆಲ್ಲ ಕೂಗಾಡುತ್ತಾರೆ. ಆದರೆ ಇವತ್ತು ಸ್ವಲ್ಪವೂ ಸೌಂಡ್ ಬಂದಿಲ್ಲ’ ಎಂದು ರಘು ಅವರು ಹೇಳಿದ್ದಾರೆ.
ರಘು ಅವರು ಹೇಳಿದ ಮಾತು ಕೇಳಿದ ಮೇಲೆ ಗಿಲ್ಲಿ ಅವರಿಗೂ ಹೌದು ಅನಿಸುತ್ತಿದೆ. ‘ಮಧ್ಯರಾತ್ರಿ ಅವರು ಬಂದು ನಮಗೆ ತಣ್ಣೀರು ಸುರಿಯುತ್ತಾರೆ’ ಎಂದು ಗಿಲ್ಲಿ ಹೇಳಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಮನೆಯಿಂದ ಹೊರಗೆ ಹೋಗಿದ್ದಕ್ಕೆ ಹಲವರು ಬೇಸರ ಮಾಡಿಕೊಂಡಿದ್ದಾರೆ. ರಕ್ಷಿತಾ ವಾಪಸ್ ಬಂದಾಗ ಅವರೆಲ್ಲರೂ ಖುಷಿಪಡಲಿದ್ದಾರೆ. ಆದರೆ ಧ್ರುವಂತ್ ವಾಪಸ್ ಬರಬಾರದು ಎಂದು ರಜತ್ ಹೇಳಿದ್ದಾರೆ.
ಇದನ್ನೂ ಓದಿ: ಸೀಕ್ರೆಟ್ ರೂಮ್ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್ನಲ್ಲಿ ಕುಳಿತಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರು ಎಲ್ಲವನ್ನೂ ಟಿವಿಯಲ್ಲಿ ನೋಡುತ್ತಿದ್ದಾರೆ. ಅಶ್ವಿನಿ ಗೌಡ, ರಜತ್, ರಘು, ಗಿಲ್ಲಿ ಮುಂತಾದವರು ತಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದನ್ನು ಕೇಳಿ ರಕ್ಷಿತಾ ಶೆಟ್ಟಿ ಅವರು ಎಮೋಷನಲ್ ಆಗಿದ್ದಾರೆ. ಆದರೆ ಧ್ರುವಂತ್ ಅವರು ತಮ್ಮ ಬಗ್ಗೆ ನೆಗೆಟಿವ್ ಮಾತುಗಳೇ ಕೇಳಿಸಿಕೊಂಡು ಕೋಪ ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




