ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಬಗ್ಗೆ ಸುದೀಪ್ ಕೊಟ್ಟರು ಮಾಹಿತಿ
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹತ್ತಿರವಾಗಿದ್ದು, ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಪ್ರಮುಖ ಮಾಹಿತಿ ನೀಡಿದ್ದಾರೆ. ಜನವರಿಯಲ್ಲಿ ಫಿನಾಲೆ ನಡೆಯಲಿದೆ. ಈ ವೇಳೆ ಓವರ್‌ಕಾನ್ಫಿಡೆನ್ಸ್ ಬೇಡ ಎಂದು ಸುದೀಪ್ ಎಚ್ಚರಿಸಿದ್ದಾರೆ. ಕಪ್ ಗೆಲ್ಲಲು ಕಡಿಮೆ ಸ್ಪರ್ಧಿಗಳು ಮಾತ್ರ ಉಳಿದಿದ್ದು, ಮಧ್ಯ ವಾರದ ಎಲಿಮಿನೇಷನ್ ಮತ್ತು ಡಬಲ್ ಎಲಿಮಿನೇಷನ್ ಕೂಡ ಇರಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಆರಂಭ ಆಗಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಅದರ ಜೊತೆಗೆ ಫಿನಾಲೆಗೂ ದಿನಗಣನೆ ಶುರುವಾಗಿದೆ. ಈ ಫಿನಾಲೆಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಬಾರಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈಗ ಫಿನಾಲೆ ಬಗ್ಗೆ ಸುದೀಪ್ ಅವರು ವೀಕೆಂಡ್ನಲ್ಲಿ ಮಾಹಿತಿ ನೀಡಿದರು. ಅವರು ಈ ಬಗ್ಗೆ ವಿವರ ನೀಡುವುದಕ್ಕೂ ಒಂದು ಕಾರಣ ಇದೆ ಎಂದರೂ ತಪ್ಪಾಗಲಿಕ್ಕಿಲ್ಲ. ಅಷ್ಟಕ್ಕೂ ಏನದು? ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಆರಂಭ ಆಗಿದ್ದು ಸೆಪ್ಟೆಂಬರ್ 28ರಂದು ಆರಂಭ ಆಯಿತು. ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್ಸ್ಟಾರ್ನಲ್ಲಿ ಈ ಶೋ ಪ್ರಸಾರ ಕಾಣುತ್ತಿದೆ. ಪ್ರತಿ ದಿನ ರಾತ್ರಿ 9.30ಕ್ಕೆ ಶೋ ಪ್ರಸಾರ ಕಾಣುತ್ತಿದೆ. ವೀಕೆಂಡ್ನಲ್ಲಿ ಶೋ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತಿದೆ. ಈ ಬಾರಿ ಅಕ್ಟೋಬರ್ 8ರಂದು ಶೋ ಸಸ್ಪೆಂಡ್ ಆಗಿತ್ತು. ಈ ಶೋ ನಡೆಯುತ್ತಿರುವ ಜಾಲಿವುಡ್ಗೆ ಆದ ತೊಂದರೆಯೇ ಶೋ ನಿಲ್ಲಲು ಕಾರಣ ಆಗಿತ್ತು. ಆ ಬಳಿಕ ಅಕ್ಟೋಬರ್ 9ರಂದು ಶೋ ಆರಂಭ ಆಯಿತು. ಈ ಬಾರಿ ಸಾಕಷ್ಟು ವಿವಾದಗಳು ನಡೆದವು.
ಈ ಬಾರಿ ಶೋನಲ್ಲಿ 24 ಜನರನ್ನು ತರಲಾಗಿದೆ. ಇದರ ಪೈಕಿ ಕೆಲವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು. ಧ್ರುವಂತ್, ರಕ್ಷಿತಾ ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿದೆ. ಅವರನ್ನು ಬಿಟ್ಟು 11 ಜನರು ಉಳಿದುಕೊಂಡಿದ್ದಾರೆ. ‘ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದೆ’ ಎಂದು ಸುದೀಪ್ ಅವರು ಹೇಳಿದ್ದಾರೆ. ‘ಕೆಲವೇ ವಾರದಲ್ಲಿ ಫಿನಾಲೆ ಬರುತ್ತದೆ. ಹೀಗಾಗಿ, ಓವರ್ ಕಾನ್ಫಿಡೆನ್ಸ್ ಬೇಡ, ಅದೇ ರೀತಿ ಎಲ್ಲವನ್ನು ಹಗುರವಾಗಿ ತೆಗೆದುಕೊಳ್ಳೋದು ಬೇಡ’ ಎಂದರು ಸುದೀಪ್. ಕೆಲವು ವರದಿಗಳ ಪ್ರಕಾರ ಜನವರಿ 17 ಹಾಗೂ 18ರಂದು ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಕಳೆದ ಎರಡು ಸೀಸನ್ ಇಂದ ಫಿನಾಲೆಯಲ್ಲಿ ಆರು ಜನರನ್ನು ಇಡಲಾಗುತ್ತಾ ಇದೆ. ಅದು ಈ ಬಾರಿಯೂ ಮುಂದುವರಿಯುವ ಸಾಧ್ಯತೆ ಇದೆ. ಫಿನಾಲೆ ವಾರಕ್ಕೂ ಹಿಂದಿನ ವಾರ ಮಿಡಲ್ ವೀಕ್ ಎಲಿಮಿನೇಷನ್ ಕೂಡ ನಡೆಯಬಹುದು. ಸ್ಪರ್ಧಿಗಳ ಸಂಖ್ಯೆ ಹೆಚ್ಚಿರುವುದರಿಂದ ಡಬಲ್ ಎಲಿಮಿನೇಷನ್ ಕೂಡ ಇರಲಿದೆ. ಅದು ಯಾವ ವಾರ ನಡೆಯುತ್ತದೆ ಎನ್ನುವ ಕುತೂಹಲವೂ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



