ಡಬಲ್ ಎಲಿಮಿನೇಷನ್: ಎಲ್ಲರಿಗೂ ಸರ್ಪ್ರೈಸ್ ಕೊಟ್ಟ ಬಿಗ್ಬಾಸ್
Bigg Boss Kannada 12: ಬಿಗ್ಬಾಸ್ ಮನೆಯಲ್ಲಿ ಭಾನುವಾರ ಬಂತೆಂದರೆ ಒಬ್ಬರು ಮನೆಯಿಂದ ಹೊರಗೆ ಬರುವುದು ಖಾತ್ರಿ. ಈ ವಾರವೂ ಸಹ ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ರಕ್ಷಿತಾ, ಸ್ಪಂದನಾ ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ಹಲವರು ಸೇಫ್ ಆಗಿ ಕೊನೆಗೆ ರಜತ್, ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರುಗಳು ಅಂತಿಮವಾಗಿ ಉಳಿದಿದ್ದರು. ಧ್ರುವಂತ್ ಹಾಗೂ ರಕ್ಷಿತಾರನ್ನು ಸುದೀಪ್ ಹೊರಗೆ ಕರೆದರು. ಆದರೆ ಅವರಿಬ್ಬರೂ ಎವಿಕ್ಟ್ ಆಗಿಲ್ಲ.

ಬಿಗ್ಬಾಸ್ (Bigg Boss) ಮನೆಯಲ್ಲಿ ಭಾನುವಾರ ಬಂತೆಂದರೆ ಒಬ್ಬರು ಮನೆಯಿಂದ ಹೊರಗೆ ಬರುವುದು ಖಾತ್ರಿ. ಈ ವಾರವೂ ಸಹ ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ರಕ್ಷಿತಾ, ಸ್ಪಂದನಾ ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ಹಲವರು ಸೇಫ್ ಆಗಿ ಕೊನೆಗೆ ರಜತ್, ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರುಗಳು ಅಂತಿಮವಾಗಿ ಉಳಿದಿದ್ದರು. ಆಗ ಸುದೀಪ್ ಅವರು ಶಾಕ್ ನೀಡಿದರು. ಈ ಬಾರಿ ಮನೆಯಿಂದ ಒಬ್ಬರಲ್ಲ, ಇಬ್ಬರು ಹೊರಗೆ ಹೋಗುತ್ತಾರೆ ಎಂದರು. ರಜತ್ ಅವರನ್ನು ಮನೆಯಲ್ಲೇ ಉಳಿಸಿ, ಧ್ರುವಂತ್ ಮತ್ತು ರಕ್ಷಿತಾರನ್ನು ಎವಿಕ್ಟ್ ಎಂದು ಘೋಷಿಸಲಾಯ್ತು.
ಬಿಗ್ಬಾಸ್ ಅವರ ಈ ನಿರ್ಣಯ ಮನೆ ಮಂದಿಗೆ ದೊಡ್ಡ ಶಾಕ್ ನೀಡಿತು. ಧ್ರುವಂತ್ ಅವರು ಕಳೆದ ಎರಡು ವಾರಗಳಿಂದಲೂ ಮನೆಯಿಂದ ಹೊರ ಹೋಗುವ ಪ್ರಯತ್ನದಲ್ಲೇ ಇದ್ದರು. ಹಾಗಾಗಿ ಯಾರೂ ಸಹ ಅವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ, ಆದರೆ ರಕ್ಷಿತಾ ಶೆಟ್ಟಿ ಎವಿಕ್ಟ್ ಆಗಿದ್ದು ಎಲ್ಲರಿಗೂ ಶಾಕ್ ಆಯ್ತು. ಮಾಳು, ರಘು ಇನ್ನೂ ಕೆಲವರಂತೂ ಕಣ್ಣೀರು ಹಾಕಿಬಿಟ್ಟರು. ಅಶ್ವಿನಿ ಸಹ ಕಣ್ಣೀರು ಹಾಕುತ್ತಾ, ಪದೇ ಪದೇ ರಕ್ಷಿತಾಗೆ ಕ್ಷಮೆ ಕೇಳಿದರು.
ರಕ್ಷಿತಾಗೆ ಸಹ ಬಿಗ್ಬಾಸ್ ನಿರ್ಣಯ ಶಾಕ್ ತಂದಿತು. ರಕ್ಷಿತಾಗೆ ಅಳು ತಡೆಯಲೇ ಆಗಲಿಲ್ಲ. ಆದರೂ ಗಟ್ಟಿ ಮನಸ್ಸು ಮಾಡಿ ಮನೆಯಿಂದ ಹೊರಗೆ ಬಂದರು. ರಕ್ಷಿತಾ ಹೊರಗೆ ಬಂದ ಬಳಿಕವೂ ಸಹ ಮನೆ ಸದಸ್ಯರು ರಕ್ಷಿತಾ ಬಗ್ಗೆಯೇ ಮಾತನಾಡುತ್ತಿದ್ದರು. ‘ನಾನು ಯಾರಿಗೂ ಕಣ್ಣೀರು ಹಾಕಿದವನಲ್ಲ, ಆದರೆ ರಕ್ಷಿತಾ ಹೋಗಿದ್ದು ಬೇಸರವಾಯ್ತು, ಆಕೆಯನ್ನು ಬಹಳ ಮಿಸ್ ಮಾಡಿಕೊಳ್ಳಲಿದ್ದೇನೆ’ ಎಂದರು ಗಿಲ್ಲಿ. ರಜತ್ ಸಹ, ‘ನಾನು ಕಳೆದ ಸೀಸನ್ನಲ್ಲಿಯೂ ಸಹ ಯಾರನ್ನೂ ಹಚ್ಚಿಕೊಂಡಿರಲಿಲ್ಲ ಆದರೆ ರಕ್ಷಿತಾ ಅನ್ನು ಬಹಳ ಹಚ್ಚಿಕೊಂಡಿದ್ದೆ’ ಎಂದು ಬೇಸರ ಮಾಡಿಕೊಂಡರು. ರಘು ಅಂತೂ ರಕ್ಷಿತಾ ಹೋಗುವಾಗ, ನೆನಪಿಗೆಂದು ಅವರ ಆಭರಣವನ್ನೇ ತೆಗೆದುಕೊಟ್ಟರು.
ಇದನ್ನೂ ಓದಿ:ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಅಸಲಿ ಸುದ್ದಿ ಏನೆಂದರೆ ಈ ವಾರ ಓಟಿಂಗ್ ಲೈನ್ಸ್ ಓಪನ್ ಆಗಿರಲೇ ಇಲ್ಲ. ಅಂದರೆ ಈ ವಾರ ಯಾರೂ ಎವಿಕ್ಟ್ ಆಗುವಂತೆಯೇ ಇಲ್ಲ. ಆದರೆ ಬಿಗ್ಬಾಸ್ ಬೇಕೆಂತಲೆ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿಯನ್ನು ಹೊರಗೆ ಕರೆಸಿಕೊಂಡಿದ್ದಾರೆ. ಆದರೆ ಅವರನ್ನು ಎಲ್ಲಿ ಇರಿಸಲಿದ್ದಾರೆ. ಮತ್ತೆ ಯಾವಾಗ ಅವರಿಬ್ಬರು ಮನೆಯ ಒಳಗೆ ಹೋಗಲಿದ್ದಾರೆ ಎಂಬುದು ಪ್ರಶ್ನೆ. ಸುದೀಪ್ ಸಹ, ಈ ಬಗ್ಗೆ ಹೇಳಿದ್ದು, ಆ ಇಬ್ಬರೂ ಸಹ ಎಲ್ಲಿರಲಿದ್ದಾರೆ, ಅವರು ಏನೇನೋ ನೋಡಲಿದ್ದಾರೆ? ಎಂಬ ಕುತೂಹಲ ಇದೆ. ಒಳ್ಳೆಯ ಸಮಯದಲ್ಲಿ ಮತ್ತೆ ಅವರನ್ನು ಮನೆಯ ಒಳಗೆ ಕಳಿಸಲಿದ್ದೇವೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




